ಬೆಂಗಳೂರು : ಗಾಳಿಪಟದ ದಾರ ಕಾಲಿಗೆ ಸಿಲುಕಿ ವ್ಯಕ್ತಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಆರ್ ಟಿ ನಗರದಲ್ಲಿ ಈ ಒಂದು ಘಟನೆ ನಡೆದಿದೆ. ಜನವರಿ 31 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಗಾಯಗೊಂಡ ವ್ಯಕ್ತಿ ಜಿವಿಎ ಕಸದ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದು ಕಾಲಿನ ನರ ಕಟ್ ಆಗಿವೆ.
ಮೊದಲಿಗೆ ಬೈಕ್ ಸವಾರನಿಗೆ ಗಾಳಿಪಟದ ದಾರ ಕಾಣಿಸಿದೆ. ಆತ ದಾರ ಬಿಡಿಸಿಕೊಂಡು ಮುಂದಕ್ಕೆ ಸಾಗಿದ್ದಾನೆ. ಈ ವೇಳೆ ಹಿಂದೆ ನಡೆದುಕೊಂಡು ಬರುತ್ತಿದ್ದ ನಾಗಾರ್ಜುನನಿಗೆ ಗಾಳಿಪಟದ ದಾರ ಸಿಲುಕಿಕೊಂಡಿದೆ. ಬೈಕ್ ಸವಾರ ಮುಂದೆ ಹೋದಾಗ ಹಿಂದೆ ಇದ್ದ ನಾಗಾರ್ಜುನ ಕಾಲಿಗೆ ಸುತ್ತಿಕೊಂಡು ಗಂಭೀರವಾದ ಗಾಯಗಳಾಗಿದ್ದು, ಇದೀಗ ನಾಗಾರ್ಜುನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಾಗಾರ್ಜುನ ಕಾಲಿನ ನರಗಳು ಕಟ್ ಆಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.








