ಕೊಡಗು : ವಸತಿ ಶಾಲೆಯಲ್ಲಿ ಅಗ್ನಿ ಅವಘಡ ಸಂಭವಿಸಿ ವಿದ್ಯಾರ್ಥಿ ಸಜೀವ ದಹನ ಆಗಿದ್ದಾನೆ. ಕಾಟಕೇರಿ ಗ್ರಾಮದ ಹರಿ ಮಂದಿರ ವಸತಿ ಶಾಲೆಯಲ್ಲಿ ಈ ಒಂದು ಘಟನೆ ನಡೆದಿದ್ದು, ಕೊಡಗು ಜಿಲ್ಲೆಯ ಮಡಿಕೆರಿ ತಾಲೂಕಿನ ಕಾಟಕೇರಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದ್ದು ಹರಿ ಮಂದಿರ ವಸತಿ ಶಾಲೆಯ ಪುಷ್ಪಕ್ ಮೃತ ವಿದ್ಯಾರ್ಥಿ ಎಂದು ತಿಳಿದುಬಂದಿದೆ.
ಬೆಳಿಗ್ಗೆ 5:30 ಕ್ಕೆ ಮಕ್ಕಳನ್ನು ಎಬ್ಬಿಸಲಾಗುತ್ತದೆ ಅಗ್ನಿ ಅವಘಡ ಸಂಭವಿಸುತ್ತಿದ್ದಂತೆ ಮಕ್ಕಳೆಲ್ಲರೂ ಹೊರಗಡೆ ಓಡಿ ಬಂದರು. ಆದರೆ ವಿದ್ಯಾರ್ಥಿ ಪುಷ್ಪಕ್ ಮಾತ್ರ ಒಬ್ಬನ್ನ ಬಿಟ್ಟು ಎಲ್ಲರೂ ಹೊರಗಡೆ ಬಂದಿದ್ದಾರೆ. ಹಾಗಾಗಿ ಪುಷ್ಪಕ್ ಸಜೀವ ದಹನಗೊಂಡಿದ್ದಾನೆ ಎಂದು ಹಾಸ್ಟೆಲ್ ವಾರ್ಡನ್ ಮಾಹಿತಿ ನೀಡಿದ್ದಾರೆ.








