ದಾವಣಗೆರೆ : ರಾಜ್ಯದಲ್ಲಿ ಹೃದಯಾಘಾತ ಸರಣಿ ಸಾವುಗಳು ಮುಂದುವರೆದಿದ್ದು, ಇಂದು ಮತ್ತೆ ಹಾಸನ, ವಿಜಯನಗರ, ಹಾವೇರಿ ಜಿಲ್ಲೆಗಳಲ್ಲಿ ಹಲವು ಜನರು ಹೃದಯಾಘಾತದಿಂದ ಸಾವನಪ್ಪಿದ್ದಾರೆ.ಇದೀಗ ದಾವಣಗೆರೆಯಲ್ಲೂ ಕೂಡ ಎದೆ ನೋವು ಕಾಣಿಸಿಕೊಂಡು ಓರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ದಾವಣಗೆರೆ ತಾಲೂಕಿನ ನಾಗರಕಟ್ಟೆಯ ಮಂಜ್ಯಾ ನಾಯಕ್ (38) ಸಾವನ್ನಪ್ಪಿದ್ದಾರೆ.
ಮನೆಯಲ್ಲಿಯೇ ಎದೆ ನೋವು ಕಾಣಿಸಿಕೊಂಡು ಮಂಜ್ಯಾ ನಾಯಕ್ ಕುಸಿದು ಬಿದ್ದಿದ್ದಾರೆ. ತಕ್ಷಣ ಕುಟುಂಬಸ್ಥರು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮಂಜ್ಯಾ ನಾಯಕ ಸಾವನಪ್ಪಿದ್ದಾರೆ. ಇನ್ನು ವಿಜಯನಗರ ಜಿಲ್ಲೆಯಲ್ಲೂ ಕೂಡ ಹೃದಯಾಘಾತಕ್ಕೆ ಓರ್ವ ಮಹಿಳೆ ಬಲಿಯಾಗಿದ್ದಾರೆ. ಅಂಗಡಿಯಲ್ಲಿ ಕುಸಿದು ಬಿದ್ದು ಜಯಾಬಾಯಿ (52) ಮತಪಟ್ಟಿದ್ದಾರೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದಿದ್ದಗಿ ತಾಂಡಾ ನಿವಾಸಿಯಾಗಿರುವ ಜಯಾಭಾಯಿ ಹೃದಯಾಘಾತದಿಂದ ಸಾವನಪ್ಪಿದ್ದಾರೆ.