ವಿಜಯನಗರ : ವಿಜಯನಗರ ಜಿಲ್ಲೆಯ ಹೊಸಪೇಟೆಯ ಚಾಪಲಗಡ್ಡದಲ್ಲಿ ವಿವಾಹಿತ ಮಹಿಳೆಯ ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಲಾಗಿದೆ ಗಂಡನಿಂದ ದೂರವಿದ್ದ ವಿವಾಹಿತ ಮಹಿಳೆ ಉಮಾ ಎನ್ನುವವರ ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಲಾಗಿದೆ.
ಕೊಲೆಯಾದ ಉಮಾ ಗಂಡನಿಂದ ದೂರವಾಗಿ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದರು. ರಘುಮೂರ್ತಿಯಿಂದ ಆರು ವರ್ಷಗಳಿಂದ ದೂರವಿದ್ದರು. ಚಿತ್ತವಾಡಗಿ ಠಾಣೆಯಲ್ಲಿ ಕೊಲೆ ಕುರಿತಂತೆ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು ಘಟನಾ ಸ್ಥಳಕ್ಕೆ SP ACP ಹಾಗೂ ಡಿವೈಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದ್ದಕ್ಕಿದ್ದಂತೆ ಕೊಲೆ ಆಗಿದ್ದು ಯಾವ ಕಾರಣಕ್ಕೆ ಉಮಾ ಅವರನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.








