Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG ALERT: ಮನೆ ಮಾಲೀಕರು ಡೆಪಾಸಿಟ್ ಹಣ ತಡೆಹಿಡಿದರೆ ತಕ್ಷಣ ಈ ಕ್ರಮ ಕೈಗೊಳ್ಳಿ!

ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಮತ್ತೆ ಮರಳಲಿದ್ದಾರೆ ರಿಷಭ್ ಪಂತ್ : ವರದಿ

BREAKING : `NEET UG’ ಮರುಪರೀಕ್ಷೆ : ವೈದ್ಯಕೀಯ ಕಾಲೇಜುಗಳಿಗೆ `NMC’ ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘KUWJ ವಾರ್ಷಿಕ ಪ್ರಶಸ್ತಿ’ಗಳಿಗಾಗಿ ಅರ್ಜಿ ಆಹ್ವಾನ
KARNATAKA

‘KUWJ ವಾರ್ಷಿಕ ಪ್ರಶಸ್ತಿ’ಗಳಿಗಾಗಿ ಅರ್ಜಿ ಆಹ್ವಾನ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ)2024ನೇ ಸಾಲಿನ ಕೆಳಕಂಡ ವಾರ್ಷಿಕ ಪ್ರಶಸ್ತಿಗಳಿಗೆ ಪತ್ರಕರ್ತರಿಂದ ಆ ವರ್ಷದ ವರದಿ/ಲೇಖನ/ಸುದ್ದಿ ಛಾಯಾಚಿತ್ರಗಳನ್ನು ಆಹ್ವಾನಿಸಲಾಗಿದೆ.

ಅಧ್ಯಕ್ಷರು/ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ, 3ನೇ ಮಹಡಿ, ಕಂದಾಯ ಭವನ, ಬೆಂಗಳೂರು-09 ಇಲ್ಲಿಗೆ ದಿನಾಂಕ 20-01-2026 ರೊಳಗೆ ತಲುಪುವಂತೆ ತಮ್ಮ ಸ್ವ ಪರಿಚಯದೊಂದಿಗೆ ಅರ್ಜಿಯನ್ನು ಕಳುಹಿಸಿಕೊಡಬೇಕು ಎಂದು ಕೆಯುಡಬ್ಲೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ತಿಳಿಸಿದ್ದಾರೆ.

ಪ್ರಶಸ್ತಿಗಳ ವಿವರ:

1. ಜಿ. ನಾರಾಯಣಸ್ವಾಮಿ ಪ್ರಶಸ್ತಿ (ಅತ್ಯುತ್ತಮ ಗ್ರಾಮಾಂತರ ವರದಿ)
2. ಪಟೇಲ್ ಭೈರಹನುಮಯ್ಯ ಪ್ರಶಸ್ತಿ (ಅತ್ಯುತ್ತಮ ಮಾನವೀಯ ವರದಿ)
3. ಗಿರಿಧರ್ ಪ್ರಶಸ್ತಿ (ಅತ್ಯುತ್ತಮ ಅಪರಾಧ ವರದಿ)
4. ಬಿ. ಎಸ್.ವೆಂಕಟರಾಂ ಪ್ರಶಸ್ತಿ (ಅತ್ಯುತ್ತಮ ಸ್ಕೂಪ್ ವರದಿ)
5. ಕೆ. ಎ. ನೆಟ್ಟಕಲಪ್ಪ ಪ್ರಶಸ್ತಿ (ಅತ್ಯುತ್ತಮ ಕ್ರೀಡಾ ವರದಿ)
6. ಖಾದ್ರಿ ಶಾಮಣ್ಣ ಪ್ರಶಸ್ತಿ (ಅತ್ಯುತ್ತಮ ರಾಜಕೀಯ ವಿಮರ್ಶೆ)
7. ಮಂಗಳ ಎಂ. ಸಿ. ವರ್ಗಿಸ್ ಪ್ರಶಸ್ತಿ (ವಾರ ಪತ್ರಿಕೆಯಲ್ಲಿ ಚಿತ್ರ ಲೇಖನಕ್ಕೆ)
8. ತಗಡೂರು ಕಮಲಮ್ಮ ವೀರೇಗೌಡ ಪ್ರಶಸ್ತಿ (ರೈತಾಪಿ ಜನರ ಸಮಸ್ಯೆ ವರದಿ)
9. ಆರ್.ಎಲ್.ವಾಸುದೇವರಾವ್ ಪ್ರಶಸ್ತಿ (ಅರಣ್ಯ ಕುರಿತ ಅತ್ಯುತ್ತಮ ವರದಿ)
10.ಆರ್.ಎಲ್. ವಾಸುದೇವರಾವ್ ಪ್ರಶಸ್ತಿ (ವನ್ಯ ಪ್ರಾಣಿಗಳ ಕುರಿತ ಅತ್ಯುತ್ತಮ ವರದಿ)
11.ಬಿ.ಜಿ.ತಿಮ್ಮಪ್ಪಯ್ಯ ಪ್ರಶಸ್ತಿ (ಆರ್ಥಿಕ ದುರ್ಬಲ ವರ್ಗದವರ ಕುರಿತ ಅತ್ಯುತ್ತಮ ವರದಿ)
12.ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ (ಗ್ರಾಮೀಣ ಜನ-ಜೀವನದ ಅತ್ಯುತ್ತಮ ವರದಿಗೆ)
13.ನಾಡಪ್ರಭು ಕೆಂಪೇಗೌಡ ಸ್ಮಾರಕ ಪ್ರಶಸ್ತಿ (ಬೆಂಗಳೂರು ಮತ್ತು ಗ್ರಾಮಾಂತರ ಜಿಲ್ಲೆ ಅಭಿವೃದ್ಧಿ)
14.ಯಜಮಾನ್ ಟಿ. ನಾರಾಯಣಪ್ಪ ಸ್ಮಾರಕ ಪ್ರಶಸ್ತಿ (ಜಿಲ್ಲಾ ಪತ್ರಿಕೆಗಳಲ್ಲಿ ಪ್ರಕಟವಾದ ಕೃಷಿ ವರದಿ)
15.ನಾಡಿಗೆರ ಕೃಷ್ಣರಾಯರ ಪ್ರಶಸ್ತಿ (ವಿಡಂಬನಾತ್ಮಕ ಲೇಖನಕ್ಕೆ)
16. ಅತ್ಯುತ್ತಮ ಪುಟ ವಿನ್ಯಾಸಗಾರರು (ಡೆಸ್ಕ್ ನಲ್ಲಿ ಕೆಲಸ)
17. ನ್ಯಾಯಾಲಯದ (ಕೋರ್ಟ್ ಬೀಟ್) ಅತ್ಯುತ್ತಮ ವರದಿ.
18. ಸುಣ್ಣವಂಡ ಶ್ರೀನಿವಾಸ ಚಂಗಪ್ಪ ಪ್ರಶಸ್ತಿ. (ಅತ್ಯುತ್ತಮ ಸೇನಾ ವರದಿ)
19. ಕೆ.ಎನ್.ಸುಬ್ರಮಣ್ಯ ಪ್ರಶಸ್ತಿ ( ಇಂಗ್ಲೀಷ್ ಪತ್ರಿಕೆಯ ವರದಿ)
20.ಟಿ.ಕೆ.ಮಲಗೊಂಡ ಪ್ರಶಸ್ತಿ (ಅತ್ಯುತ್ತಮ ತನಿಖಾ ವರದಿ)
21. ಚಲನಚಿತ್ರ ನಟ, ನಿರ್ದೇಶಕ ದಿ. ದ್ವಾರಕೀಶ್ ಸ್ಮಾರಕ ಪ್ರಶಸ್ತಿ (ಚಲನಚಿತ್ರ ವಿಮರ್ಶಾ ವರದಿ)

ವಿದ್ಯುನ್ಮಾನ (ಟಿವಿ)ವಿಭಾಗ:

22. ಅತ್ಯುತ್ತಮ ತನಿಖಾ ವರದಿ
23. ಅತ್ಯುತ್ತಮ ಸಾಮಾಜಿಕ, ಮಾನವೀಯ ವರದಿ
24. ಅತ್ಯುತ್ತಮ ಆ್ಯಂಕರ್ ಪ್ರಶಸ್ತಿ
25. ಅತ್ಯುತ್ತಮ ರಾಜಕೀಯ ವಿಶ್ಲೇಷಣೆ

ಷರತ್ತುಗಳು :

1. ಪ್ರಶಸ್ತಿಗೆ 2024ಜನವರಿ 1 ರಿಂದ 2024 ಡಿಸೆಂಬರ್ 31 ರೊಳಗೆ ದಿನಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟವಾದ ಲೇಖನ/ವರದಿ/ವಿಶೇಷ ವರದಿ ಸುದ್ದಿ ಛಾಯಾ ಚಿತ್ರಗಳನ್ನು ಕಳುಹಿಸಬೇಕು.
2.ವರದಿ/ಲೇಖನ ಯಾವ ಪ್ರಶಸ್ತಿಗೆ ಎಂಬುದನ್ನು ಮುಖಪುಟದಲ್ಲಿ ಸ್ವಷ್ಟವಾಗಿ ಬರೆದಿರಬೇಕು.
3. ಅನುವಾದ ಮಾಡಿದ ವರದಿ/ಲೇಖನ ಪರಿಗಣಿಸುವುದಿಲ್ಲ. ಒಬ್ಬರು ಗರಿಷ್ಠ ಮೂರು ಪ್ರಶಸ್ತಿಕ್ಕಿಂತ ಹೆಚ್ಚು ಪ್ರಶಸ್ತಿಗೆ ಅರ್ಜಿ ಸಲ್ಲಿಸುವಂತಿಲ್ಲ.
4. ರಾಜ್ಯ ಸಂಘ, ಜಿಲ್ಲಾ ಮತ್ತು ತಾಲ್ಲೂಕು ಸಂಘದ ಪದಾಧಿಕಾರಿಗಳು ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
5. ವರದಿಗಳನ್ನು ಮೂರು ಪ್ರತಿಗಳಲ್ಲಿ (ಜೆರಾಕ್ಸ್ ಪ್ರತಿಗಳಾದರೆ ದೃಢೀಕೃತವಾದ ಪ್ರತಿ ಇರಬೇಕು.) ಕಳುಹಿಸಬೇಕು.
6. ವಿದ್ಯುನ್ಮಾನ ಮಾಧ್ಯಮದ ಪ್ರಶಸ್ತಿಗಳ ಪ್ರವೇಶಕ್ಕೆ ವರದಿ ಪ್ರಸಾರವಾದ ಕ್ಲಿಪಿಂಗ್ (ಸಿಡಿ ಅಥವಾ ಪೆನ್‌ಡ್ರೈವ್) ಮತ್ತು ಅದರ ಸ್ಕ್ರಿಪ್ಟ್‌ಗಳನ್ನು ಸಂಪಾದಕರ ದೃಢೀಕರಣ ಸಹಿತ ಕಳುಹಿಸಬೇಕು.
7. ಅರ್ಜಿ ಸಲ್ಲಿಸುವವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವದ ಗುರುತಿನ ಕಾರ್ಡ್ ಮತ್ತು ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಬೇಕು.
8. ವರದಿ ಜೊತೆಯಲ್ಲಿ ಸ್ವ ಪರಿಚಯ, ಪೂರ್ಣ ವಿಳಾಸ, ಮೊಬೈಲ್ ನಂಬರ್ ಮತ್ತು ಪಾಸ್ ಪೋರ್ಟ್ ಸೈಜ್ ಭಾವಚಿತ್ರ ಕಳುಹಿಸಬೇಕು.
9. ಈಗಾಗಲೇ ಒಂದು ಬಾರಿ ಪ್ರಶಸ್ತಿಯನ್ನು ಪಡೆದವರು, ಮತ್ತೆ ಅದೇ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ
10. ⁠ಕೆಯುಡಬ್ಲ್ಯೂಜೆ ಪ್ರಶಸ್ತಿಗೆ ಒಟ್ಟು ಎರಡು ಬಾರಿ ಭಾಜನರಾದವರು ಮತ್ತೆ ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸುವಂತಿಲ್ಲ
11. ⁠ಕೆಯುಡಬ್ಲ್ಯೂಜೆ ದತ್ತಿ ನಿಧಿ ಪ್ರಶಸ್ತಿ ಪುರಸ್ಕೃತರು ಈ ವಿಭಾಗದಲ್ಲಿ ಅರ್ಜಿ ಸಲ್ಲಿಸುವಂತಿಲ್ಲ.
12. ⁠ಕ್ರಿಮಿನಲ್ ಪ್ರಕರಣಗಳಲ್ಲಿ ಜೈಲು ಶಿಕ್ಷೆಯಾಗಿದ್ದರೆ ಅರ್ಜಿ ಸಲ್ಲಿಸುವಂತಿಲ್ಲ
13. ಎಲ್ಲಾ ವಿಭಾಗಕ್ಕೂ (ಮೂರು ವಿಭಾಗ ಮೀರಿ) ಅರ್ಜಿ ಹಾಕಿದರೆ ಅವುಗಳನ್ನು ಪರಿಗಣಿಸುವುದಿಲ್ಲ.

ಷರತ್ತುಗಳನ್ನು ಉಲ್ಲಂಘಿಸಿ ಬರುವ ಅರ್ಜಿಗಳನ್ನು ಪರಿಗಣಿಸುವುದಿಲ್ಲ. ಪ್ರಶಸ್ತಿಗೆ ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ಕೆಯುಡಬ್ಲ್ಯೂಜೆ ವಿಳಾಸಕ್ಕೆ ಕಳುಹಿಸಿಕೊಡಬೇಕು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

BIG BREAKING: 2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ಮುಹೂರ್ತ ಫಿಕ್ಸ್: ಫೆ.1ರಂದು ನಿರ್ಮಲಾ ಸೀತಾರಾಮನ್ ಮಂಡನೆ

ಜನರ ಆಶೀರ್ವಾದ ಇರುವವರೆಗೆ ರಾಜಕೀಯದಲ್ಲಿರುತ್ತೇನೆ: ಸಿಎಂ ಸಿದ್ಧರಾಮಯ್ಯ

Share. Facebook Twitter LinkedIn WhatsApp Email

Related Posts

BIG ALERT: ಮನೆ ಮಾಲೀಕರು ಡೆಪಾಸಿಟ್ ಹಣ ತಡೆಹಿಡಿದರೆ ತಕ್ಷಣ ಈ ಕ್ರಮ ಕೈಗೊಳ್ಳಿ!

2 Mins Read

BIG NEWS : ಅನರ್ಹ ಫಲಾನುಭವಿಗಳಿಗೆ ಶಾಕ್ : ಪಕ್ಕಾ ದಾಖಲೆ ಕೊಟ್ಟರಷ್ಟೇ ಸಿಗುತ್ತೆ `ಗೃಹಲಕ್ಷ್ಮಿ,ಗೃಹಜ್ಯೋತಿ’.!

2 Mins Read

ಬೆಂಗಳೂರಿನ ಜನತೆಯ ಗಮನಕ್ಕೆ : ಇಂದು ಬೆಳಿಗ್ಗೆ 10 ಗಂಟೆಯಿಂದ ಈ ಏರಿಯಾಗಳಲ್ಲಿ `ವಿದ್ಯುತ್ ವ್ಯತ್ಯಯ | POWER CUT

2 Mins Read
Recent News

BIG ALERT: ಮನೆ ಮಾಲೀಕರು ಡೆಪಾಸಿಟ್ ಹಣ ತಡೆಹಿಡಿದರೆ ತಕ್ಷಣ ಈ ಕ್ರಮ ಕೈಗೊಳ್ಳಿ!

ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಮತ್ತೆ ಮರಳಲಿದ್ದಾರೆ ರಿಷಭ್ ಪಂತ್ : ವರದಿ

BREAKING : `NEET UG’ ಮರುಪರೀಕ್ಷೆ : ವೈದ್ಯಕೀಯ ಕಾಲೇಜುಗಳಿಗೆ `NMC’ ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟ!

BIG NEWS : ಅನರ್ಹ ಫಲಾನುಭವಿಗಳಿಗೆ ಶಾಕ್ : ಪಕ್ಕಾ ದಾಖಲೆ ಕೊಟ್ಟರಷ್ಟೇ ಸಿಗುತ್ತೆ `ಗೃಹಲಕ್ಷ್ಮಿ,ಗೃಹಜ್ಯೋತಿ’.!

State News
KARNATAKA

BIG ALERT: ಮನೆ ಮಾಲೀಕರು ಡೆಪಾಸಿಟ್ ಹಣ ತಡೆಹಿಡಿದರೆ ತಕ್ಷಣ ಈ ಕ್ರಮ ಕೈಗೊಳ್ಳಿ!

By kannadanewsnow57 KARNATAKA 2 Mins Read

ಬೆಂಗಳೂರು: ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಮನೆ ಅಥವಾ ಮಳಿಗೆಯನ್ನು ಬಾಡಿಗೆಗೆ ಪಡೆಯುವುದು ಎಷ್ಟು ಕಷ್ಟವೋ, ಅದನ್ನು…

BIG NEWS : ಅನರ್ಹ ಫಲಾನುಭವಿಗಳಿಗೆ ಶಾಕ್ : ಪಕ್ಕಾ ದಾಖಲೆ ಕೊಟ್ಟರಷ್ಟೇ ಸಿಗುತ್ತೆ `ಗೃಹಲಕ್ಷ್ಮಿ,ಗೃಹಜ್ಯೋತಿ’.!

ಬೆಂಗಳೂರಿನ ಜನತೆಯ ಗಮನಕ್ಕೆ : ಇಂದು ಬೆಳಿಗ್ಗೆ 10 ಗಂಟೆಯಿಂದ ಈ ಏರಿಯಾಗಳಲ್ಲಿ `ವಿದ್ಯುತ್ ವ್ಯತ್ಯಯ | POWER CUT

ಕರುನಾಡಿಗೆ ಬರದ ಆತಂಕ: ಕೈಕೊಟ್ಟ ಮುಂಗಾರು, ಅನ್ನದಾತ ಕಂಗಾಲು!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.