ಬಿಹಾರ್ : ಬೇಸಿಗೆ ಬಂತೇಂದರೆ ಸಾಕು ಮಾವಿನ ಹಣ್ಣಿಗೆ ಫುಲ್ ಡಿಮ್ಯಾಂಡ್ ಇರುತ್ತೆ. ಮಾವಿನ ಹಣ್ಣುಗಳನ್ನು ಹಣ್ಣುಗಳ ರಾಜ ಎಂದು ಕರೆಯಲಾಗುತ್ತದೆ. ಮಾವಿನ ಹಣ್ಣುಗಳು ತುಂಬಾ ರುಚಿಕರವಾಗಿರುತ್ತವೆ. ಚಿಕ್ಕವರಾಗಲಿ ಅಥವಾ ಹಿರಿಯರಾಗಲಿ ಎಲ್ಲರೂ ಈ ಸಿಹಿಯಾದ ಹಣ್ಣನ್ನು ಸವಿಯಲು ಇಷ್ಟಪಡುತ್ತಾರೆ. ಆದರೆ ಇದೀಗ ವ್ಯಕ್ತಿಯೊಬ್ಬರು ಮಾವಿನ ಹಣ್ಣು ತಿನ್ನುವಾಗಲೇ ಹುಳುಗಳು ಪಟ್ಟೆಯಾಗಿದ್ದನ್ನು ಕಂಡು ಶಾಕ್ ಆಗಿದ್ದಾರೆ.
ಹೌದು ಈ ಒಂದು ಘಟನೆ ಬಿಹಾರದಲ್ಲಿ ನಡೆದಿದ್ದು, ಬಿಹಾರದ ಗೋಪಾಲ್ಗಂಜ್ ಜಿಲ್ಲೆಯ 32 ವರ್ಷದ ರಾಧಿಕಾ ದೇವಿ ಎಲ್ಲರಂತೆ ಮಾರುಕಟ್ಟೆಯಲ್ಲಿ ಮಾವಿನ ಹಣ್ಣುಗಳನ್ನು ಖರೀದಿಸಿ ಮನೆಗೆ ತಂದರು. ನೋಡಲು ಮಾವಿನ ಹಣ್ಣುಗಳು ತುಂಬಾ ತಾಜಾವಾಗಿ ಕಾಣುತ್ತಿದ್ದರಿಂದ ಅದನ್ನು ಖರೀದಿಸಿದರು. ಹಣ್ಣು ನೋಡುತ್ತಿದ್ದಂತೆ ರಾಧಿಕಾ ಅವರ ಪತಿ ಸಂತೋಷ್ ಯಾದವ್ ಬಾಯಲ್ಲಿ ನೀರೂರಿತು. ತಕ್ಷಣ ಒಂದು ಮಾವಿನ ಹಣ್ಣನ್ನು ತೆಗೆದುಕೊಂಡು ಅದರ ಸಿಪ್ಪೆ ಸುಲಿದು ತಿನ್ನಲು ಪ್ರಾರಂಭಿಸಿದರು.
ತುಂಬಾ ರುಚಿಯಾಗಿದ್ದ ಹಣ್ಣನ್ನು ಸಂತೋಷ್ ಸವಿಯುತ್ತಿದ್ದರು. ಸುಮಾರು ಅರ್ಧ ಹಣ್ಣನ್ನು ತಿಂದಿದ್ದರು. ಈ ವೇಳೆ ಹಣ್ಣಿನ ರುಚಿಯಲ್ಲಿ ಕೊಂಚ ವ್ಯತ್ಯಾಸವನ್ನು ಗಮನಿಸಿದರು. ಏಕೆ ಈ ರೀತಿ ಆಯಿತು ಅಂತ ಮಾವಿನ ಹಣ್ಣನ್ನು ತುಂಬಾ ಹತ್ತಿರದಿಂದ ನೋಡಿದಾಗ, ಹಣ್ಣಿನೊಳಗೆ ಬಿಳಿ ಹುಳುಗಳು ತೆವಳುತ್ತಿರುವುದನ್ನು ನೋಡಿ ಒಂದು ಕ್ಷಣ ಶಾಕ್ ಆದರು.
ಇಷ್ಟು ತಾಜಾ ಮಾವಿನ ಹಣ್ಣಿನೊಳಗೆ ಹುಳುಗಳು ಇರುತ್ತವೆ ಎಂದು ದಂಪತಿ ಕನಸಿನಲ್ಲೂ ಯೋಚಿಸಿರಲಿಲ್ಲ. ಹುಳ ನೋಡುತ್ತಿದ್ದಂತೆ ಸಂತೋಷ್ ವಾಂತಿ ಮಾಡಲು ಪ್ರಾರಂಭಿಸಿದರು ಮತ್ತು ತಕ್ಷಣ ಮಾವಿನ ಹಣ್ಣನ್ನು ಉಗುಳಿದರು. ಬಳಿಕ ರಾಧಿಕಾ ಅವರು ಮಾವಿನ ಹಣ್ಣಿನ ವಿಡಿಯೋವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹೊರಗಿನಿಂದ ನೋಡಿದಾಗ ಮಾವು ತುಂಬಾ ತಾಜಾವಾಗಿ ಕಾಣುತ್ತಿತ್ತು. ಒಳಗೆ ಹೀಗಿರುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ತುಂಬಾ ಭಯಾನಕವಾಗಿತ್ತು ಎಂದು ಮಹಿಳೆ ಹೇಳಿದ್ದಾರೆ.
ಸಾಮಾನ್ಯವಾಗಿ ಮಾವಿನಹಣ್ಣುಗಳನ್ನು ಬೇಸಿಗೆ ಕಾಲದಲ್ಲೇ ತಿನ್ನಬೇಕು ಸ್ವಲ್ಪ ಜಾಸ್ತಿ ಮಳೆಯಾದರೂ ಕೂಡ ಹಣ್ಣಲ್ಲಿ ಹುಳುಗಳು ಆಗುವ ಸಾಧ್ಯತೆ ಹೆಚ್ಚಿರುತ್ತೆ. ಇದೀಗ ಮಳೆಗಾಲ ಆರಂಭವಾಗಿರೋದರಿಂದ ರಾಧಿಕಾದೇವಿ ಅವರು ಕೊಂಡಂತಹ ಮಾವಿನ ಹಣ್ಣುಗಳಲ್ಲಿ ಹುಳುಗಳಾಗಿವೆ. ಹಾಗಾಗಿ ಮಳೆಗಾಲ ಆರಂಭಕ್ಕೂ ಮುನ್ನ ಮಾವಿನ ಹಣ್ಣು ತಿನ್ನೋದು ಆರೋಗ್ಯಕ್ಕೆ ಒಳ್ಳೆಯದು.ಇನ್ಮುಂದೆ ಯಾರೂ ಕೂಡ ಅಪ್ಪಿ ತಪ್ಪಿಯು ಮಳೆಗಾಲದಲ್ಲಿ ಮಾವಿನ ಹಣ್ಣು ಸೇವಿಸಬೇಡಿ.