ಬೆಂಗಳೂರು : ಕೆಲವು ವರ್ಷಗಳ ಹಿಂದೆ ಸ್ತನ ಕ್ಯಾನ್ಸರ್ ಪ್ರಕರಣಗಳು ವೃದ್ಧೆಯರಲ್ಲಿ ಸಾಮಾನ್ಯವಾಗಿತ್ತು. ಆದರೆ ಈಗಿನ ಅಂಕಿಅಂಶಗಳು ಯುವ ಜನರಲ್ಲಿ ಪ್ರಕರಣ ಹೆಚ್ಚಾಗಿರುವುದನ್ನು ತೋರಿಸುತ್ತದೆ.ಇದೀಗ ಕರ್ನಾಟಕದಲ್ಲೂ ಕೂಡ ಅದು ಮಧ್ಯವಯಸ್ಸಿನ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹಾಗೂ ಸಾವು ಕಂಡುಬರುತ್ತಿದೆ ಎಂದು ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ಕಾರ್ಯಕ್ರಮ (NCRP) ಅಂಕಿ ಅಂಶಗಳಿಂದ ತಿಳಿದುಬಂದಿದೆ.
ಕಲ್ಕಿ ಧಾಮ್ ನಂಬಿಕೆಯ ದೊಡ್ಡ ಕೇಂದ್ರವಾಗಲಿದೆ: ಪ್ರಧಾನಿ ನರೇಂದ್ರ ಮೋದಿ
ಕರ್ನಾಟಕದಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಮತ್ತು ಮರಣ ಪ್ರಮಾಣ ಎರಡರಲ್ಲೂ ಏರಿಕೆ ದಾಖಲಾಗಿರುವುದು ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಇನ್ಫರ್ಮ್ಯಾಟಿಕ್ಸ್ ಅಂಡ್ ರಿಸರ್ಚ್ ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ಕಾರ್ಯಕ್ರಮ ಅಂಕಿಅಂಶಗಳಿಂದ ತಿಳಿದುಬಂದಿದೆ.
ಚಿತ್ರದುರ್ಗ: ಹೈಡೋಸ್ ಚುಚ್ಚುಮದ್ದು ನೀಡಿದ ವೈದ್ಯ: 13 ವರ್ಷದ ಬಾಲಕಿ ಸಾವು
ಕೇಂದ್ರ ಆರೋಗ್ಯ ಇಲಾಖೆಯ ಸಹಾಯಕ ಸಚಿವ ಸತ್ಯಪಾಲ್ ಸಿಂಗ್ ಬಾಘೇಲ್ ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭೆಯ ಅಧಿವೇಶನದಲ್ಲಿ ಹಂಚಿಕೊಂಡ ಮಾಹಿತಿಯ ಪ್ರಕಾರ, ಕರ್ನಾಟಕದಲ್ಲಿ 2023 ರಲ್ಲಿ ಅಂದಾಜು 14,484 ಸ್ತನ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿವೆ. ಅದೇ ರೀತಿ, 5,388 ಸ್ತನ ಕ್ಯಾನ್ಸರ್ ಸಂಬಂಧಿತ ಸಾವುಗಳು ರಾಜ್ಯದಲ್ಲಿ ದಾಖಲಾಗಿವೆ.
ವಸತಿ ಶಾಲೆಯಲ್ಲಿ ಕುವೆಂಪು ವಾಕ್ಯ ಬದಲಾವಣೆ: ಸಚಿವ ಹೆಚ್.ಸಿ ಮಹದೇವಪ್ಪ ಹೇಳಿದ್ದೇನು?
ಇವೆರಡೂ ಕಳೆದ ಐದು ವರ್ಷಗಳಲ್ಲಿ ಅತ್ಯಧಿಕವಾಗಿದೆ. 2019 ರಲ್ಲಿ, ರಾಜ್ಯದಲ್ಲಿ 13,085 ಸ್ತನ ಕ್ಯಾನ್ಸರ್ ಪ್ರಕರಣಗಳು ವರದಿಯಾಗಿದ್ದವು. ಇದು 2020 ರಲ್ಲಿ 13,427ಕ್ಕೆ ಏರಿಕೆಯಾಗಿದ್ದರೆ, 2021 ರಲ್ಲಿ 13,774 ಮತ್ತು 2022 ರಲ್ಲಿ 14,126 ಕ್ಕೆ ಏರಿಕೆಯಾಗಿವೆ.ಕೇಂದ್ರ ಆರೋಗ್ಯ ಇಲಾಖೆಯ ಸಹಾಯಕ ಸಚಿವ ಸತ್ಯಪಾಲ್ ಸಿಂಗ್ ಬಾಘೇಲ್ ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭೆಯ ಅಧಿವೇಶನದಲ್ಲಿ ಹಂಚಿಕೊಂಡ ಮಾಹಿತಿಯಲ್ಲಿ ವರದಿಯಾಗಿದೆ.
BREAKING :ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡಗೆ ಬಂಧನದ ಭೀತಿ : ಫೆ.23ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್