ಮೈಸೂರು : ಮೈಸೂರು ಮೂಲದ ಯುವಕ ಮತ್ತು ಯುವತಿಯೊಬ್ಬರು ಲೈಕ್‌ಗೊಸ್ಕರ ಬೈಕ್‌ನಲ್ಲಿ ಮಾಡಿರುವ ವಿಡಿಯೊವೊಂದು ವೈರಲ್ ಆಗಿದ್ದು, ಸದ್ಯ ಸಾರ್ವಜನಿಕ ವಲಯದಲ್ಲಿ ಅಕ್ರೊಶಕ್ಕೆ ಕಾರಣವಾಗಿದೆ.
ns_kannadiga7 ಮತ್ತು dee_gowda07 ಎನ್ನುವ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಅಪ್‌ಲೋಡ್ ಆಗಿರುವ ವಿಡಿಯೋದಲ್ಲಿ ಯುವತಿಯು ಬೈಕ್ ಅನ್ನು ವೇಗವಾಗಿ ಹೆಲ್ಮೆಟ್ ರಹಿತವಾಗಿ ಓಡಿಸುತ್ತಿರುವದನ್ನು ಕಾಣಬಹುದಾಗಿದೆ. ವಿಡಿಯೋದಲ್ಲಿ ಯುವಕ ನಿಧಾನ ನಿಧಾನ ಎನ್ನುವ ಮಾತುಗಳನ್ನು ಹೇಳುವುದನ್ನು ಕೇಳಿಸಿಕೊಳ್ಳಬಹುದಾಗಿದ್ದು, ಬಹುಶಃ ಯುವತಿ ಅತಿವೇಗವಾಗಿ ಬೈಕ್ ಅನ್ನು ಓಡಿಸುತ್ತ ಇರಬಹುದು. ಇದಲ್ಲದೇ ಯುವಕನ ಗಾಡಿ ಕೂಡ ನಂಬರ್ ಪ್ಲೇಟ್ ಇಲ್ಲದೇ ಇದ್ದು, ಮೈಸೂರು ಪೊಲೀಸರ ಕಾರ್ಯವೈಖರಿಯ ಬಗ್ಗೆ ಪ್ರಶ್ನೆ ಮಾಡುವ ಸನ್ನಿವೇಶ ನಿರ್ಮಾಣವಾಗಿದೆ.
ಇನ್ನೂ ಇಬ್ಬರು ಕೂಡ ಇದೇ ರೀತಿಯ ಅನೇಕ ವಿಡಿಯೋಗಳನ್ನು ಹಾಕುತ್ತಿದ್ದರು ಕೂಡ ಮೈಸೂರು ಪೊಲಿಸರು ಯಾವ ಕಾರಣಕ್ಕೆ ಸುಮ್ನೆ ಇದ್ದಾರೆ ಎನ್ನುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಟ್ಟಿದ್ದೇವೆ ಅಂತ ಹೇಳಿಕೊಳ್ಳುವ ಪೊಲೀಸ್ ಇಲಾಖೆ ಕಣ್ಣಿಗೆ ಇಂತಹ ವಿಡಿಯೋಗಳು ಬೀಳುವುದಿಲ್ವ? ಅಥಾವ ಬಿದ್ದರು ಸುಮ್ನೆ ಇರುವುದು ಯಾಕೆ? ಎನ್ನುವುದು ಅನುಮಾನ ಮೂಡಿಸಿದೆ.
ವಾಹನಗಳ ತಪಾಸಣೆ ನೆಪದಲ್ಲಿ ದಂಡ ವಿಧಿಸುವ ಪೊಲೀಸರು ಈಗ ಇವರಿಬ್ಬರ ಮೇಲೆ ಯಾವ ರೀತಿಯ ಕ್ರಮವನ್ನು ಕೈಗೊಳ್ಳುತ್ತಾರೆ ಎನ್ನುವುದನ್ನು ನೋಡಬೇಕಾಗಿದೆ. ಒಂದು ವೇಳೇ ಕ್ರಮ ಕೈಗೊಳ್ಳದೇ ಹೋದರೆ ಕಾನೂನಿನಗೆ ಅವಮಾನ ಮಾಡಿದ ಹಾಗೇ ಅಂತ ಸಾರ್ವಜನಿಕರು ಮೈಸೂರು ಪೊಲೀಸರಿಗೆ ಪ್ರಶ್ನೆ ಮಾಡುತ್ತಿದ್ದಾರೆ. ಇನ್ನಾದ್ರೂ ಮೈಸೂರು ಪೋಲಿಸರು ಕ್ರಮ ಕೈಗೊಳ್ಳುತ್ತಾರ? ಇಲ್ಲವೇ ಸುಮ್ನೆ ಇರುತ್ತಾರ ಎನ್ನುವುದನ್ನು ಕಾದು ನೋಡಬೇಕಾಗಿದೆ.








