ಮುಂಬೈ : ಸಾಮಾನ್ಯವಾಗಿ ಯಾವುದಾದರೂ ಸಭೆ ಸಮಾರಂಭಗಳಿಗೆ ಹೋಗಬೇಕಾದರೆ ಪರ್ಫ್ಯೂಮ್ ಬಳಸುವುದು ಸಹಜ. ಆದರೆ ಇಲ್ಲಿ ಪರ್ಫ್ಯೂಮ್ ಬಾಟಲ್ ಒಂದು ಸ್ಪೋಟಗೊಂಡ ಪರಿಣಾಮ ಒಂದೇ ಕುಟುಂಬದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಮುಂಬೈನ ಹೊರವಲಯದ ನಾಲಾಸುಪಾರದಲ್ಲಿ ನಡೆದಿದೆ.
ಹೌದು ಪರ್ಫ್ಯೂಮ್ ಬಾಟಲಿಯ ಎಕ್ಸ್‌ಪೈರಿ ಡೇಟ್ ಬದಲಿಸುವ ಪ್ರಯತ್ನದಲ್ಲಿರುವಾಗ ಈ ಸ್ಫೋಟ ಸಂಭವಿಸಿದೆ. ಸ್ಪೋಟದ ಪರಿಣಾಮ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮುಂಬೈನಾ ರೋಶಿನಿ ಅಪಾರ್ಟ್‌ಮೆಂಟ್ ಒಂದರ 112ನೇ ಮನೆಯಲ್ಲಿಈ ಘಟನೆ ನಡೆದಿದೆ. ಕುಟುಂಬ ಸದಸ್ಯರು ಪರ್ಫ್ಯೂಮ್ ಬಾಟಲಿಯ ಎಕ್ಸ್‌ಪೈರಿ ಡೇಟ್ ಬದಲಿಸುವ ಪ್ರಯತ್ನದಲ್ಲಿರುವಾಗ ಈ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆಯಲ್ಲಿ 41 ವರ್ಷದ ಮಹಾವೀರ್ ವಾದರ್, 38 ವರ್ಷದ ಸುನೀತಾ ವಾದರ್ , ಮಕ್ಕಳಾದ 9 ವರ್ಷದ ಕುಮಾರ್ ಹರ್ಷವರ್ಧನ್ ವಾದರ್ ಹಾಗೂ 14 ವರ್ಷದ ಕುಮಾರಿ ಹರ್ಷದಾ ವಾದರ್ ಗಾಯಗೊಂಡಿದ್ದಾರೆ. ಸ್ಫೋಟದ ಸದ್ದು ಕೇಳಿ ಅಕ್ಕ ಪಕ್ಕದ ಮನೆಯವರು ಧಾವಿಸಿದ್ದಾರೆ. ಬಳಿಕ ಗಾಯಗೊಂಡಿದ್ದವರನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಮಕ್ಕಳ ಪೈಕಿ 9 ವರ್ಷದ ಬಾಲಕನಿಗೆ ಗಾಯದ ಪ್ರಮಾಣ ಹೆಚ್ಚಿದೆ ಎಂದು ಪೊಲೀಸರು ಹೇಳಿದ್ದಾರೆ.