ಹಾವೇರಿ : ಮನೆಯಲ್ಲಿ ಮಕ್ಕಳನ್ನು ಒಂಟಿಯಾಗಿ ಬಿಡುವ ಪೋಷಕರೇ ಎಚ್ಚರ. ಸ್ನಾನದ ಮನೆಯಲ್ಲಿ ಇಟ್ಟಿದ್ದ ನೀರಿನ ಡ್ರಮ್ ನಲ್ಲಿ ಬಿದ್ದು ಎರಡು ವರ್ಷದ ಮಗುವೊಂದು ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ನೀರಲಕಟ್ಟಿ ಗ್ರಾಮದಲ್ಲಿ ನೀರಿನ ಡ್ರಮ್ ಗೆ ಬಿದ್ದು ಎರಡು ವರ್ಷದ ಮಗು ಸಾವನ್ನಪ್ಪಿದೆ. ಗ್ರಾಮದ ಆದಿತ್ಯಾ ಲಮಾಣಿ ಮೃತಪಟ್ಟ ಮಗು.
ಮೃತಪಟ್ಟ ಆದಿತ್ಯಾ ಲಮಾಣಿ ಪೋಷಕರು ಕೆಲಸಕ್ಕೆಂದು ಹೊರಗಡೆ ಹೋಗಿದ್ದಾಗ ಮಗು ಆಟವಾಡುತ್ತಾ ಸ್ನಾನದ ಮನೆಗೆ ಹೋಗಿದ್ದು, ಈ ವೇಳೆ ನೀರಿನ ಡ್ರಮ್ ನಲ್ಲಿ ಬಿದ್ದು ಮೃತಪಟ್ಟಿದೆ ಎಂದು ಹೇಳಲಾಗುತ್ತಿದೆ.