ಇಸ್ಲಾಮಾಬಾದ್ : ಆಸ್ಪತ್ರೆಯಲ್ಲಿ ಬಳಕೆ ಮಾಡಿರುವ ಸಿರಿಂಜ್ ಅನ್ನು ಮತ್ತೆ ಮತ್ತೆ ಬಳಕೆ ಮಾಡಿದ ಪರಿಣಾಮ 331 ಮಕ್ಕಳಿಗೆ HIV ಸೋಂಕು ತಗುಲಿರುವ ಆಘಾತಕಾರಿ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ಹೌದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಅಸುರಕ್ಷಿತ ಇಂಜೆಕ್ಷನ್ ಪದ್ಧತಿಗಳು ಮುಂದುವರೆದಿವೆ. ಮಕ್ಕಳಲ್ಲಿ ಹೆಚ್‌ಐವಿ ಪ್ರಕರಣಗಳು ಹೆಚ್ಚಾದ ನಂತರ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಅಲ್ಲಿ ಮರುಬಳಕೆ ಮಾಡಲಾದ ಸಿರಿಂಜ್‌ಗಳು ಮತ್ತು ಕಲುಷಿತ ಬಾಟಲುಗಳು ನೂರಾರು ಮಕ್ಕಳನ್ನು ಸೋಂಕಿಗೆ ದೂಡಿವೆ ಎನ್ನಲಾಗಿದೆ.
ಪ್ರಾಂತೀಯ ಸ್ಕ್ರೀನಿಂಗ್ ಕಾರ್ಯಕ್ರಮಗಳು, ಖಾಸಗಿ ಚಿಕಿತ್ಸಾಲಯಗಳು ಮತ್ತು ಸೋರಿಕೆಯಾದ ಪೊಲೀಸ್ ದಾಖಲೆಗಳ ಡೇಟಾವನ್ನು ಬಳಸಿಕೊಂಡು ತನಿಖಾ ವರದಿ ಮಾಡಲಾಗಿದೆ. 2024ರ ನವೆಂಬರ್‌ನಿಂದ 2025 ರ ಅಕ್ಟೋಬರ್ ನಡುವೆ ಟೌನ್ಸಾದಲ್ಲಿ ಹೆಚ್‌ಐವಿ ಪಾಸಿಟಿವ್ ಪರೀಕ್ಷೆಯಲ್ಲಿ 331 ಮಕ್ಕಳು ಸೋಂಕಿಗೆ ತುತ್ತಾಗಿದ್ದಾರೆ.








