ತಿರುವನಂತಪುರ : ಪ್ರಪಂಚದಲ್ಲಿ ಮಕ್ಕಳು ಕೆಟ್ಟವರಾಗಿರುತ್ತಾರೆ ಹೊರತು ಯಾವುದೇ ತಂದೆ-ತಾಯಿ ಕೆಟ್ಟವರಾಗಿರುವುದಿಲ್ಲ. ಇದಿಗ ತಿರುವನಂತಪುರದಲ್ಲಿ ಘೋರವಾದ ಘಟನೆ ನಡೆದಿದ್ದು, ಮದ್ಯದ ಅಮಲಿನಲ್ಲಿದ್ದ ಮಗ, ತನ್ನ ತಾಯಿಯನ್ನು ತುಳಿದು ಕೊಂದಿದ್ದಾನೆ. ಈ ಘಟನೆ ತಿರುವನಂತಪುರದ ತೆಕ್ಕಡದಲ್ಲಿ ನಡೆದಿದೆ.
ಮೃತರನ್ನು ತೆಕ್ಕಡ ಮೂಲದ 85 ವರ್ಷದ ಓಮನಾ ಎಂದು ಗುರುತಿಸಲಾಗಿದೆ. ಈಕೆ ಮಗ ಮಣಿಕಂದನ್ ನೆ ತಾಯಿಯನ್ನು ಕುಡಿದ ಅಮಲಿನಲ್ಲಿ ತುಳಿದು ಕೊಂದಿದ್ದಾನೆ. ನಿನ್ನೆ ರಾತ್ರಿ ರಂದು 10.30 ರ ಸುಮಾರಿಗೆ ಮಣಿಕಂದನ್ ಮದ್ಯದ ಅಮಲಿನಲ್ಲಿದ್ದನು. ಕುಡಿದ ಮತ್ತಿನಲ್ಲಿದ್ದ ಮಣಿಕಂದನ್ ತನ್ನ ತಾಯಿಯನ್ನು ಒದ್ದಿದ್ದಾನೆ.
ಮಗನಿಂದ ಥಳಿತಕ್ಕೊಳಗಾದ ಓಮನಾಳನ್ನು ಸ್ಥಳೀಯರು ತಕ್ಷಣ ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ರಾತ್ರಿ 11 ಗಂಟೆ ಸುಮಾರಿಗೆ ಅವರು ಸಾವನ್ನಪ್ಪಿದರು. ಮಣಿಕಂದನ್ ಹೊಡೆದ ಪರಿಣಾಮ ಓಮನ ಮೂಳೆಗಳು ಮುರಿದಿವೆ ಎಂದು ವೈದ್ಯರು ತಿಳಿಸಿದ್ದಾರೆ.ಸದ್ಯ ವಟ್ಟಪ್ಪರ ಪೊಲೀಸರು ಈತನನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.