ಉತ್ತರಪ್ರದೇಶ : ದೇಶದಲ್ಲಿ ಮತ್ತೊಂದು ಬೆಚ್ಚಿ ಬೀಳಿಸೋ ಘಟನೆ ನಡೆದಿದ್ದು, ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಿವೃತ್ತ ರೈಲ್ವೆ ಉದ್ಯೋಗಿಯೊಬ್ಬ ತನ್ನ ಲಿವ್-ಇನ್ ಸಂಗಾತಿಯನ್ನು ಹತ್ಯೆ ಮಾಡಿ ಮೃತದೇಹವನ್ನು ಬಾಕ್ಸ್‌ವೊಂದಕ್ಕೆ ಹಾಕಿ ಬೆಂಕಿ ಇಟ್ಟಿರುವ ಘಟನೆ ನಡೆದಿದೆ. ಆರೋಪಿ ರಾಮ್ ಸಿಂಗ್ ಪರಿಹಾರ್‌ಗೆ ಇಬ್ಬರು ಹೆಂಡತಿಯರು. ಆತನ ಮಾಜಿ ಪತ್ನಿ ಸಿಪ್ರಿ ಬಜಾರ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.
ಎರಡನೇ ಪತ್ನಿ ಅದೇ ನಗರದ ಸಿಟಿ ಕೊಟ್ವಾಲಿ ಪ್ರದೇಶದಲ್ಲಿ ವಾಸವಾಗಿದ್ದಾರೆ. ಮಹಿಳೆಯ ದೇಹವನ್ನು ಸುಟ್ಟ ನಂತರ, ಪರಿಹಾರ್ ಬೂದಿಯನ್ನು ಚೀಲಗಳಲ್ಲಿ ಸಂಗ್ರಹಿಸಿ ಅಪರಾಧವನ್ನು ಮರೆಮಾಡಲು ನದಿಗೆ ಎಸೆದಿದ್ದ. ಆಕೆಯ ಉಳಿದ ಅವಶೇಷಗಳನ್ನು ಟ್ರಂಕ್‌ನಲ್ಲಿ ವಿಲೇವಾರಿ ಮಾಡಲು, ಅದನ್ನು ತನ್ನ ಪತ್ನಿ ಗೀತಾಳ ಮನೆಗೆ ಕಳುಹಿಸಲು ಸಂಚು ರೂಪಿಸಿದ್ದ.
ಪರಿಹಾರ್ ತನ್ನ ಲಿವ್-ಇನ್ ಸಂಗಾತಿ ಪ್ರೀತಿಯನ್ನು ಕೊಲೆ ಮಾಡಿದ್ದಾನೆ. ಆಕೆ ತನ್ನಿಂದ ಭಾರಿ ಮೊತ್ತದ ಹಣವನ್ನು ಬೇಡಿಕೆ ಇಟ್ಟಿದ್ದಳು. ಹೀಗಾಗಿ, ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಈಗಾಗಲೇ ತನ್ನಿಂದ ಲಕ್ಷಾಂತರ ರೂಪಾಯಿಗಳನ್ನು ಪಡೆದುಕೊಂಡಿದ್ದಳು ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ.








