ಮಹಾರಾಷ್ಟ್ರ : ಮದುವೆಯಾಗಿ ನವ ಉದುವಿನಂತೆ ಗಂಡನ ಮನೆಗೆ ಬಂದಾಗ ಆಕೆಯ ಕನಸಿನಲ್ಲಿಯೂ ಇಂತಹ ಒಂದು ಘಟನೆ ನಡೆಯುತ್ತೆ ಎಂದು ಊಹಿಸಿರಲಿಲ್ಲ. ಹೌದು ಮಹಾರಾಷ್ಟ್ರದ ಥಾಣೆಯಲ್ಲಿ ಮದುವೆಯಾಗಿ ನವವಧು ಮನೆಗೆ ಬಂದಾಗ ಮಗಳ ಸಮಾನದ ಸೊಸೆಯ ಮೇಲೆ ಮಾವ ಹಾಗೂ ಆತನ ಸ್ನೇಹಿತ ಅತ್ಯಾಚಾರ ಎಸಗಿರುವ ಘಟನೆ ವರದಿಯಾಗಿದೆ.
ಹೌದು ಮಗನನ್ನು ಮದುವೆಯಾಗಿ ಮನೆಗೆ ಬಂದ ಸೊಸೆಯ ಮೇಲೆ ಮಾವ ಅತ್ಯಾಚಾರವೆಸಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. 20 ವರ್ಷದ ಮಹಿಳೆ ಮೇಲೆ 52 ವರ್ಷದ ಮಾವ ಮತ್ತವನ ಸ್ನೇಹಿತ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ವಿಚಾರವನ್ನು ಯಾರ ಬಳಿಯಾದರೂ ಹೇಳಿಕೊಂಡರೆ ಆಕೆಯ ಪೋಷಕರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು.
ಬಳಿಕ ನಿರಂತರ 15 ದಿನಗಳ ಕಾಲ ಆಕೆಗೆ ಚಿತ್ರಹಿಂಸೆ ನೀಡಿದ್ದಾರೆ.
ಇಬ್ಬರೂ ಮಲಗಿದ್ದಾಗ ಆಕೆ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ. ಆರೋಪಿಗಳಿಬ್ಬರೂ ಪ್ರಸ್ತುತ ತಲೆಮರೆಸಿಕೊಂಡಿದ್ದು, ಪೊಲೀಸ್ ತಂಡ ಅವರಿಗಾಗಿ ಹುಡುಕಾಟ ನಡೆಸುತ್ತಿದೆ ಎಂದು ನಾರ್ಪೋಲಿ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಭರತ್ ಕಾಮತ್ ಮಾಹಿತಿ ನೀಡಿದ್ದಾರೆ.
ಘಟನೆ ಹಿನ್ನೆಲೆ?
ಜನವರಿ 30 ರಂದು, ಆರೋಪಿಯು ಮಹಿಳೆಯನ್ನು ಆಕೆಯ ಪೋಷಕರ ಬಳಿ ಬಿಡುವ ನೆಪದಲ್ಲಿ ಹೊರಗೆ ಕರೆದೊಯ್ದಿದ್ದ. ಆದರೆ, ಆಕೆಯನ್ನು ತನ್ನ ಸ್ವಂತ ಮನೆಗೆ ಕರೆದೊಯ್ದು, ಅಲ್ಲಿ ಆಕೆಯನ್ನು ಒಂದು ಕೋಣೆಯಲ್ಲಿ ಕಟ್ಟಿಹಾಕಿ ತನ್ನ ಸ್ನೇಹಿತನಿಗೆ ಬರಲು ತಿಳಿಸಿದ್ದ. ನಂತರ ಆರೋಪಿಗಳಿಬ್ಬರೂ ಸರದಿಯಂತೆ ಆಕೆಯ ಮೇಲೆ ಅತ್ಯಾಚಾರ ಎಸಗಿದರು. ಈ ಮಧ್ಯೆ, ಮಾವ ತನ್ನ ಮಗನಿಗೆ ತನ್ನ ಸೊಸೆಯನ್ನು ಆಕೆಯ ಪೋಷಕರ ಮನೆಯ ಬಳಿ ಬಿಟ್ಟಿರುವುದಾಗಿ ಹೇಳಿದ್ದ.
ಆರೋಪಿಗಳು ಮಲಗಿದ್ದಾಗ ಮಹಿಳೆ ಪರಾರಿಯಾಗಿ ತನ್ನ ಪೋಷಕರ ಮನೆಗೆ ತಲುಪಿದ ನಂತರ ಸತ್ಯ ಹೊರಬಂದಿತ್ತು.ಅಲ್ಲಿಂದ ಆಕೆ ತನ್ನ ಪೋಷಕರೊಂದಿಗೆ ಪೊಲೀಸ್ ಠಾಣೆಗೆ ತೆರಳಿ ನಡೆದಿದ್ದೆಲ್ಲವನ್ನೂ ವಿವರಿಸಿದ್ದಾಳೆ. ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 64, 127(4), 351(3), 74, ಮತ್ತು 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.