ಬಾಗಲಕೋಟೆ : ಪರೀಕ್ಷೆಯಲ್ಲಿ ಕಾಪಿ ಹೊಡಿಯಬೇಡ ಎಂದಿದ್ದಕ್ಕೆ ಮನನೊಂದು ಪ್ರಥಮ ಪಿಯುಸಿ ವಿದ್ಯಾರ್ಥಿನಿ ಕೆರೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಶಾರದಾ ಖಾಸಗಿ ಕಾಲೇಜಿ ನಲ್ಲಿ ಪ್ರಥಮ ಪಿಯು ವಿಜ್ಞಾನ ತರಗತಿಯಲ್ಲಿ ಓದುತ್ತಿರುವ ಹಿರೇಕೇರಿ ಗಲ್ಲಿಯ ನಿವಾಸಿ ತೇಜಸ್ವಿನಿ ದೊಡಮನಿ (17) ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿನಿ.
ಫೆ.27ರಂದು ವಾರ್ಷಿಕ ಪರೀಕ್ಷೆಯ ವೇಳೆ ನಕಲು ಮಾಡುವಾಗ ಸಿಕ್ಕಿಬಿದ್ದಿದ್ದು, ಕಾಲೇಜಿನ ಸಿಬ್ಬಂದಿ ಪ್ರಶ್ನಿಸಿ, ವಿಷಯ ಪೋಷಕರಿಗೆ ತಿಳಿಸಿದ್ದು, ಸಿಬ್ಬಂದಿ ಸಿಸಿಟಿವಿ ಪರಿಶೀಲಿಸಲು ಮುಂದಾದಾಗ ವಿದ್ಯಾರ್ಥಿನಿ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಶವ ನಗರದ ಮಹಾರಾಣಿ ಕೆರೆಯಲ್ಲಿ ಭಾನುವಾರ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.