ಧಾರವಾಡ : ಇತ್ತೀಚಿಗೆ ಹೃದಯಘಾತದ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ಯುವಜನತೆ ಈ ಒಂದು ಹೃದಯಘಾತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ. ಇದೀಗ ಬೈಕ್ ನಲ್ಲಿ ತೆರಳುತ್ತಿರುವಾಗಲೇ ವ್ಯಕ್ತಿಗೆ ಹೃದಯಘಾತವಾಗಿ ಸಾವನ್ನಪ್ಪಿರುವ ಘಟನೆ ಧಾರವಾಡ ತಾಲೂಕಿನ ಮಂಗಳಗಟ್ಟಿ ಗ್ರಾಮದಲ್ಲಿ ನಡೆದಿದೆ.
ಹೃದಯಾಘಾತದಿಂದ ಸಾವನ್ನಪ್ಪಿದ ವ್ಯಕ್ತಿಯನ್ನು, ದುರ್ಗಪ್ಪ (43) ಹರಿಜನ, ಎಂದು ತಿಳಿದುಬಂದಿದ್ದು ಮೃತ ದುರ್ಗಪ್ಪ ಹರಿಜನ ಕುರುಬಗಟ್ಟಿ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ.ಸ್ಥಳಕ್ಕೆ ಬಂದ ಧಾರವಾಡ ಗ್ರಾಮೀಣ ಪೋಲಿಸರು ಮಾಹಿತಿಯನ್ನ ಪಡೆದುಕೊಂಡು ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ.
ಇನ್ನು ಕಳೆದ ಎರಡು ದಿನಗಳ ಹಿಂದೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ಮನಕಲಕುವ ಘಟನೆ ಎಂದು ನಡೆದಿತ್ತು. ವರನೊಬ್ಬ ವಧುವಿಗೆ ತಾಳಿ ಕಟ್ಟಿದ 10 ನಿಮಿಷದಲ್ಲಿಯೇ ಹೃದಯಘಾತದಲ್ಲಿ ಕಲ್ಯಾಣ ಮಂಟಪದಲ್ಲಿ ಸಾವನಪ್ಪಿದ್ದ. ಮದುವೆ ಸಂಭ್ರಮ ತುಂಬಿದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.