ಬೆಂಗಳೂರು : ಇತ್ತೀಚಿಗೆ ಯುವಕರಲ್ಲಿ ಏನಾಗುತ್ತಿದೆ ಅಂತ ಗೊತ್ತಾಗುತ್ತಿಲ್ಲ. ಏಕೆಂದರೆ ಕಳೆದ ಒಂದು ತಿಂಗಳಲ್ಲೇ ಹಾಸನದಲ್ಲಿ 13 ಜನ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಹಾಸನದಲ್ಲಿ ಮತ್ತೋರ್ವ ವಿದ್ಯಾರ್ಥಿನಿ ಸಾವನ್ನಪ್ಪಿದ್ದು ಮನೆಯಲ್ಲಿಯೇ ಕುಸಿದು ಬಿದ್ದು ಪದವಿ ವಿದ್ಯಾರ್ಥಿನಿ ಒಬ್ಬಳು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಹೌದು ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದ್ದು, ಹೃದಯಾಘಾತದಿಂದ ಸುಪ್ರಿಯಾ ಎಂಬ ವಿದ್ಯಾರ್ಥಿನಿ ಇದೀಗ ಸಾವನ್ನಪ್ಪಿದ್ದಾಳೆ. ಹಾಸನ ಮೂಲದ ಸುಪ್ರಿಯ ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದಳು. ಹೊಳೆ ನರಸಿಪುರ ತಾಲೂಕಿನ ಕಟ್ಟಳ್ಳಿ ಗ್ರಾಮದ ನಿವಾಸಿಯಾಗಿದ್ದಾಳೆ.
ಸದ್ಯ ಬ್ಯಾಟರಾಯನಪುರದಲ್ಲಿ ಕುಟುಂಬ ಸಮೇತ ವಾಸವಿದ್ದಳು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಸುಪ್ರಿಯ ಪದವಿ ಓದುತ್ತಿದ್ದಳು. ನಿನ್ನೆ ಮನೆಯಲ್ಲಿ ಕುಸಿದು ಬಿದ್ದು ಬಿದ್ದಿದ್ದಾಳೆ. ತಕ್ಷಣ ಆಸ್ಪತ್ರೆಗೆ ಕರೆದೋಯ್ಯಲಾಯಿತು. ಆದರೆ ಆಸ್ಪತ್ರೆಗೆ ಕರೆದೊಯುವಷ್ಟರಲ್ಲಿ ಸುಪ್ರಿಯಾ ಕೊನೆಯುಸಿರೆಳೆದಿದ್ದಾಳೆ. ಹಾಸನ ಜಿಲ್ಲೆಯಲ್ಲಿ ಹೃದಯಘಾತಕ್ಕೆ ಇದೀಗ ಸರಣಿ ಸಾವುಗಳು ಸಂಭವಿಸುತ್ತಿವೆ.