ಬೆಂಗಳೂರು : ಲೋಕಸಭೆ ಚುನಾವಣೆಗೂ ಮುನ್ನ ಚಿಕ್ಕಮಂಗಳೂರು ಉಡುಪಿ ಕ್ಷೇತ್ರದಿಂದ ಶೋಭ ಗೋ ಬ್ಯಾಕ್ ಅಭಿಯಾನ ಆದ ಬಳಿಕ ಬಿಜೆಪಿ ಶೋಭಾ ಕರಂದ್ಲಾಜೆ ಅವರಿಗೆ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ನೀಡಲಾಗಿತ್ತು. ಇದೀಗ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಶುಭ ಕರಂದ್ಲಾಜೆ ಅವರು ಎರಡುವರೆ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.
ಹೌದು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಗೆ ಭರ್ಜರಿ ಜಯ ಸಾಧಿಸಿದ್ದಾರೆ. ಶೋಭಾ ಕರಂದ್ಲಾಜೆ ಗೆ 2,59,476 ಮತಗಳ ಅಂತರದಿಂದ ಜಯ ಸಿಕ್ಕಿದ್ದು, ಬಿಜೆಪಿಗೆ ಶೋಭಾ ಕರಂದ್ಲಾಜೆ ಅವರು 9,86,49 ಮತಗಳು ಪಡೆದುಕೊಂಡಿದ್ದಾರೆ. ಪ್ರತಿಸ್ಪರ್ಧಿಯಾಗಿರುವ ಕಾಂಗ್ರೆಸ್ನ ಪ್ರೊ. ರಾಜೀವ್ ಗೌಡ ಅವರು 76,573 ಮತಗಳು ಪಡೆದುಕೊಂಡಿದ್ದಾರೆ.ಹೀಗಾಗಿ ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿಯದರು ಸಂಭ್ರಮಾಚರಣೆ ಪಟಾಕಿ ಸಿಡಿಸಿ ಬಿಜೆಪಿ ಕಾರ್ಯಕರ್ತರು ಇದೀಗ ಸಂಭ್ರಮಾಚರಣೆ ಮಾಡುತ್ತಿದ್ದಾರೆ.