ಶಿವಮೊಗ್ಗ : ಶಿವಮೊಗ್ಗದಲ್ಲಿ ವ್ಯಕ್ತಿಯ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಫೌಜಾನ್ ಅಲಿಯಾಸ್ ಮಾರ್ಕೆಟ್ ಫೌಜಾನ್, ಆಸ್ಕರ್ ಹಾಗೂ ಫರಾಜ್ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಭರ್ಮಪ್ಪ ನಗರದ 2 ನೇ ಕ್ರಾಸ್ ನಿವಾಸಿ ಪ್ರಕಾಶ್ ಎಂಬಾತನ ಮೇಲೆ ನಿನ್ನೆ ರಾತ್ರಿ ಸುಮಾರು 11:20 ಸುಮಾರಿಗೆ ಬೈಕ್ ನಲ್ಲಿ ಬಂದ ಮೂವರು ಯುವಕರು ಕಲ್ಲು ಹಾಗೂ ಇಟ್ಟಿಗೆಯಿಂದ ಯುವಕನ ತಲೆಗೆ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಕೂಡಲೇ ಯುವಕನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಕರಣ ಸಂಬಂಧ ತೀವ್ರ ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ಈ ಆರೋಪಿಗಳು ಈ ಹಿಂದೆ ಕೂಡ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.
ಸೋನಿಯಾ ಗಾಂಧಿ ಬಗ್ಗೆ ನಟಿ ‘ರಮ್ಯಾ’ ಟ್ವೀಟ್ : ಕುತೂಹಲ ಮೂಡಿಸಿದ ‘ಮೋಹಕ ತಾರೆ’ಯ ನಡೆ |Actor Ramya
Dangerous Road Video ; ಇದು ‘ವಿಶ್ವದ ಅತ್ಯಂತ ಅಪಾಯಕಾರಿ’ ರಸ್ತೆ, ಕೊಂಚ ಯಾಮಾರಿದ್ರು ಕಥೆ ಗೋವಿಂದ.!