ಶಿವಮೊಗ್ಗ: ಇಂದು ಭದ್ರಾವತಿಯಲ್ಲಿ ನಡೆದಂತ 16 ವರ್ಷದ ಒಳಗಿನ ವಲಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಾಗರದ ತನ್ಮಯ್ 165 ಬಾಲ್ ಗಳಿಗೆ 407 ರನ್ ಗಳನ್ನು ಪೇರಿಸುವ ಮೂಲಕ ಮಹತ್ವದ ಸಾಧನೆಗೈದಿದ್ದಾರೆ.
ಲಘು, ಭಾರಿ ವಾಹನ ತರಬೇತಿ ನಿರೀಕ್ಷೆಯಲ್ಲಿದ್ದವರ ಗಮನಕ್ಕೆ: BMTCಯಿಂದ ಉಚಿತ ತರಬೇತಿಗೆ ಅರ್ಜಿ ಆಹ್ವಾನ
16 ವರ್ಷದ ಒಳಗಿನ ವಲಯಮಟ್ಟದ ಸೀಮಿತ 50 ಓವರ್ ಕ್ರಿಕೆಟ್ ಶಿವಮೊಗ್ಗದ ಪೆಸಿಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ ಈ ಪಂದ್ಯದಲ್ಲಿ ಸಾಗರದ ಮಂಜುನಾಥ ಪ್ಯಾಷನ್ಸ್ ಮಾಲಿಕರ ಪುತ್ರ ತನ್ಮಯ್ 165 ಬಾಲ್ ನಲ್ಲಿ 48 ಬೌಂಡರಿ, 24 ಸಿಕ್ಸರ್ ಗಳೊಂದಿಗೆ 4 ಶತಕಗಳ ಸಹಿತ 407 ರನ್ ಗಳಿಸಿ ದಾಖಲೆ ಮಾಡಿದ್ದಾರೆ.
ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ ಎರಡನೇ ಸ್ಥಾನದಲ್ಲಿ ಕರ್ನಾಟಕ
ಹಿಂದಿನ ಕೆಲ ಪಂದ್ಯಗಳಲ್ಲೂ ತನ್ಮಯ್ ದಾಖಲೆಯ ಕ್ರಿಕೆಟ್ ಆಟ ಮುಂದಿನ ದಿನದಲ್ಲಿ ಭಾರತದ ಕ್ರಿಕೆಟ್ ತಂಡದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಪ್ರತಿನಿದಿಸುವ ಎಲ್ಲಾ ಲಕ್ಷಣಗಳಿದೆ ಅಂತಹ ದಿನ ಬರಲಿ ತನ್ಮಯ್ ಭಾರತ ಕ್ರಿಕೆಟ್ ತಂಡದ ಇನ್ನೊಬ್ಬ ಸಚಿನ್ ತೆಂಡೂಲ್ಕರ್ ಆಗಲಿ ಎಂದು ತಾಲೂಕಿನ ಜನತೆ ಹಾರೈಸಿದ್ದಾರೆ.
ಅಂದಹಾಗೇ ಈ ದಾಖಲೆಯ 407 ರನ್ ಗಳಿಸಿದ ತನ್ಮಯ್ ಸಾಗರದ ಮಂಜು ಪ್ಯಾಶನ್ ಪಾಯಿಂಟ್ ಉದ್ಯಮಿ ಮಂಜುನಾಥ್ ಮತ್ತು ಪ್ರಗತಿ ದಂಪತಿಗಳ ಪುತ್ರನಾಗಿದ್ದಾನೆ.
ಈ ಬಾರಿ ಸಿದ್ಧರಾಮಯ್ಯ ಕೋಲಾರದಿಂದ ಸ್ಪರ್ಧೆ? ಈ ಕುರಿತು ಹೇಳಿದ್ದೇನು ಗೊತ್ತಾ?
ನಾಗೇಂದ್ರ ಪಂಡಿತ್ ಕ್ರಿಕೆಟ್ ಅಕಾಡಮಿಯಲ್ಲಿ ತರಬೇತಿ ಪಡೆದಂತ ಇವರು, ಇಂದು 165 ಬಾಲ್ ಗಳಿಗೆ 407 ರನ್ ಗಳಿಸಿರೋದುಕ್ಕೆ ಅಕಾಡೆಮಿಯ ತರಬೇತುದಾರ ನಾಗೇಂದ್ರ ಪಂಡಿತ್ ಸಂತಸ ವ್ಯಕ್ತ ಪಡಿಸಿದ್ದಾರೆ.
ವರದಿ: ಉಮೇಶ್ ಮೊಗವೀರ, ಸಾಗರ