ಶಿವಮೊಗ್ಗ: ಇಂದು ಶಿವಮೊಗ್ಗ ಮಹಾನಗರ ಪಾಲಿಕೆ ( Shimoga Municipal Corporation ) ಮೇಯರ್ ಹಾಗೂ ಉಪ ಮೇಯರ್ ಆಯ್ಕೆಗಾಗಿ ( Mayor and Deputy Mayor Election ) ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕಾರದ ಗದ್ದುಗೆ ದೊರೆತಿದೆ. ಮೇಯರ್ ಆಗಿ ಬಿಜೆಪಿಯ ಶಿವಕುಮಾರ್ ಹಾಗೂ ಉಪ ಮೇಯರ್ ಆಗಿ ಲಕ್ಷ್ಮೀ ಆಯ್ಕೆಯಾಗಿದ್ದಾರೆ.
ಶಿವಮೊಗ್ಗ ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಚುನಾವಣೆಗೆ ಪಾಲಿಕೆಯ ಸಭಾಂಗಣದಲ್ಲಿ ಚುನಾವಣೆ ನಡೆಯಿತು. ಇಂದು ನಡೆದಂತ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಗುರುಪುರ-ಪುರಲೆ ವಾರ್ಡ್ ನ ಪಾಲಿಕೆ ಸದಸ್ಯ ಶಿವಕುಮಾರ್ ಹಾಗೂ ಮಲವಗೊಪ್ಪ ವಾರ್ಡ್ ನ ಕಾಂಗ್ರೆಸ್ ಸದಸ್ಯ ಆರ್ ಸಿ ನಾಯ್ಕ್ ಸ್ಪರ್ಧಿಸಿದ್ದರು.
ಉಪ ಮೇಯರ್ ಸ್ಥಾನಕ್ಕೆ ನ್ಯೂ ಮಂಡ್ಲಿ ವಾರ್ಡ್ ನ ಬಿಜೆಪಿ ಸದಸ್ಯೆ ಲಕ್ಷ್ಮೀ ಶಂಕರನಾಯ್ಕ್ ಹಾಗೂ ಹೊಸಮನೆ ವಾರ್ಡ್ ಸದಸ್ಯ ಕಾಂಗ್ರೆಸ್ ನ ರೇಖಾ ರಂಗನಾಥ್ ಕಣದಲ್ಲಿ ಇದ್ದರು.
ತೀವ್ರ ಪೈಪೋಟಿಯ ನಡುವೆ ಮೇಯರ್ ಸ್ಪರ್ಧೆಯಲ್ಲಿ ಬಿಜೆಪಿ ಶಿವಕುಮಾರ್ 26 ಮತಗಳನ್ನು ಪಡೆದು ಗೆಲುವು ಸಾಧಿಸಿದ್ರೇ, ಕಾಂಗ್ರೆಸ್ ನ ಆರ್ ಸಿ ನಾಯಕ್ 11 ಮತಗಳಿಂದ ಸೋಲು ಕಂಡರು. ಉಪ ಮೇಯರ್ ಚುನಾವಣೆಯಲ್ಲಿ ಲಕ್ಷ್ಮೀ 26 ಮತಗಳನ್ನು ಪಡೆದು ಗೆಲುವು ಸಾಧಿಸಿದ್ರೇ, ರೇಖಾ ರಂಗನಾಥ್ 11 ಮತ ಪಡೆದು ಸೋಲು ಕಂಡರು.
BIGG NEWS: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಮಾಜಿ ಪ್ರಧಾನಿ ದೇವೇಗೌಡ ಮರು ಆಯ್ಕೆ
ಒಟ್ಟಾರೆಯಾಗಿ ಶಿವಮೊಗ್ಗ ಮಹಾನಗರ ಪಾಲಿಕೆಯ ಮೇಯರ್ ಆಗಿ ಬಿಜೆಪಿಯ ಶಿವಕುಮಾರ್ ಹಾಗೂ ಉಪ ಮೇಯರ್ ಆಗಿ ಲಕ್ಷ್ಮೀ ಶಂಕರನಾಯ್ಕ್ ಆಯ್ಕೆಯಾಗಿದ್ದಾರೆ.