Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಹಾನೆ ‘ಡಕ್’ ದಾಖಲೆ: ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟ್ ಆದ ಆರಂಭಿಕ ಆಟಗಾರ!

20/04/2026 9:30 AM

BREAKINg : ಹುಬ್ಬಳ್ಳಿಯಲ್ಲಿ ವಿಮಾನ ಲ್ಯಾಂಡಿಂಗ್ ವೇಳೆ ತಪ್ಪಿದ ಭಾರೀ ದುರಂತ : 4 ಗಂಟೆ ಕಾಲ ಆಗಸದಲ್ಲೇ ಹಾರಾಡಿದ `Fly 91’ ವಿಮಾನ.!

20/04/2026 9:21 AM

ಆರ್ಥಿಕ ಸಂಕಷ್ಟದ ನಡುವೆ ಪಾಕಿಸ್ತಾನಕ್ಕೆ ಸವಾಲು: ಏ. 23ರೊಳಗೆ 1.5 ಬಿಲಿಯನ್ ಡಾಲರ್ ಸಾಲ ಮರುಪಾವತಿಸುವಂತೆ UAE ಸೂಚನೆ

20/04/2026 9:15 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿವಮೊಗ್ಗ: ಉಳ್ಳೂರಲ್ಲಿ ‘KSRTC ಬಸ್’ ನಿಲ್ಲಿಸುವಂತೆ ‘ಶಾಸಕ ಗೋಪಾಲಕೃಷ್ಣ ಬೇಳೂರು’ ಸೂಚನೆ
KARNATAKA

ಶಿವಮೊಗ್ಗ: ಉಳ್ಳೂರಲ್ಲಿ ‘KSRTC ಬಸ್’ ನಿಲ್ಲಿಸುವಂತೆ ‘ಶಾಸಕ ಗೋಪಾಲಕೃಷ್ಣ ಬೇಳೂರು’ ಸೂಚನೆ

By kannadanewsnow0924/09/2025 8:43 PM

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಉಳ್ಳೂರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳನ್ನು ಕಡ್ಡಾಯವಾಗಿ ನಿಲ್ಲಿಸುವಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಸೂಚಿಸಿದ್ದಾರೆ.

ಈ ಕುರಿತಂತೆ ಶಿವಮೊಗ್ಗದ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಪತ್ರ ಬರೆದು ಸೂಚಿಸಿದ್ದಾರೆ. ಅದರಲ್ಲಿ  ಸಾಗರ ತಾಲ್ಲೂಕು, ಉಳ್ಳೂರು ಗ್ರಾಮ ಪಂಚಾಯಿತಿಯ ಉಳ್ಳೂರು ಗ್ರಾಮವು ಪಂಚಾಯಿತಿಯ ಕೇಂದ್ರ ಸ್ಥಾನವಾಗಿದ್ದು, ಈ ವ್ಯಾಪ್ತಿಯಲ್ಲಿ ಸುಮಾರು 700 ರಿಂದ 800 ಕುಟುಂಬಗಳು ವಾಸಿಸುತ್ತಿದ್ದು, ಸದರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಸಾರ್ವಜನಿಕರು, ರೈತಾಪಿ ವರ್ಗದವರು, ಮಹಿಳೆಯರು ವೃದ್ಧರು ಆಸ್ಪತ್ರೆ ಹಾಗೂ ಇನ್ನಿತರೆ ಕೆಲಸ ಕಾರ್ಯಗಳಿಗೆ ಹಾಗೂ ಶಾಲಾ ಮಕ್ಕಳು ವಿದ್ಯಾಭ್ಯಾಸ ಸಲುವಾಗಿ ನಗರ ಪ್ರದೇಶಕ್ಕೆ ಸ್ಥಳೀಯವಾಗಿ ಮತ್ತು ಶಿವಮೊಗ್ಗ ಮಾರ್ಗವಾಗಿ ಚಲಿಸುವ ಸರ್ಕಾರಿ ಬಸ್‌ ಮುಖಾಂತರವಾಗಿಯೇ ತೆರಳಬೇಕಾಗಿರುತ್ತದೆ ಎಂದಿದ್ದಾರೆ.

ಈ ಹಿನ್ನಲೆಯಲ್ಲಿ ಸಾಗರದಿಂದ ಶಿವಮೊಗ್ಗ ಮತ್ತು ಶಿವಮೊಗ್ಗದಿಂದ ಸಾಗರ ಮಾರ್ಗವಾಗಿ ಸಾಗರ ಡಿಪೊ ವ್ಯಾಪ್ತಿಯಿಂದ ಹೊರಡುವ ಸರ್ಕಾರಿ ಬಸ್ ಗಳನ್ನು ಉಳ್ಳೂರು ಗ್ರಾಮದಲ್ಲಿ ಎಲ್ಲಿ ಸುವಂತೆ ಈ ಮೂಲಕ ಸೂಚಿಸಿದ್ದಾರೆ. ಈ ಮೂಲಕ ಉಳ್ಳೂರಲ್ಲಿ ಸಾಗರದಿಂದ ಶಿವಮೊಗ್ಗ, ಶಿವಮೊಗ್ಗದಿಂದ ಸಾಗರಕ್ಕೆ ತೆರಳುವಂತ ಬಸ್ಸುಗಳನ್ನು ನಿಲ್ಲಿಸಲಾಗುತ್ತಿದೆ. ಜೊತೆಗೆ ಉಳ್ಳೂರಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಎಂಬುದಾಗಿ ಬೋರ್ಡ್ ಕೂಡ ಹಾಕಲಾಗಿದೆ.

ಉಳ್ಳೂರಲ್ಲಿ KSRTC ಬಸ್ ನಿಲ್ಲಿಸುವಂತೆ ‘ಕರ್ನಾಟಕ ರಕ್ಷಣಾ ನವಶಕ್ತಿ ವೇದಿಕೆ’ ಮನವಿ ಮಾಡಿತ್ತು, ಕನ್ನಡ ನ್ಯೂಸ್ ನೌ ಸುದ್ದಿ ಪ್ರಕಟ

ಕಳೆದ ಸೆ.18ರಂದು ಶಿವಮೊಗ್ಗ: ಉಳ್ಳೂರಲ್ಲಿ KSRTC ಬಸ್ ನಿಲ್ಲಿಸುವಂತೆ ‘ಕರ್ನಾಟಕ ರಕ್ಷಣಾ ನವಶಕ್ತಿ ವೇದಿಕೆ’ ಮನವಿ ಎಂಬುದಾಗಿ ನಿಮ್ಮ ಕನ್ನಡ ನ್ಯೂಸ್ ನೌ ಸುದ್ದಿ ಪ್ರಕಟಿಸಿತ್ತು. ಅದರಲ್ಲಿ ಸಾಗರ ತಾಲ್ಲೂಕು ಉಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಳ್ಳೂರು ಗ್ರಾಮವು ಪಂಚಾಯಿತಿಯ ಕೇಂದ್ರ ಸ್ಥಾನವಾಗಿದ್ದು ಈ ವ್ಯಾಪ್ತಿಯಲ್ಲಿ ಸುಮಾರು 700 ರಿಂದ 800 ಕುಟುಂಬಗಳು ವಾಸಿಸುತ್ತಿದ್ದು, ಸದರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಸಾರ್ವಜನಿಕರು, ರೈತಾಪಿ ವರ್ಗದವರು, ಮಹಿಳೆಯರು ವೃದ್ಧರು ಆಸ್ಪತ್ರೆ ಹಾಗೂ ಇನ್ನಿತರೆ ಕೆಲಸ ಕಾರ್ಯಗಳಿಗೆ ಹಾಗೂ ಶಾಲಾ ಮಕ್ಕಳು ವಿದ್ಯಾಭ್ಯಾಸ ಸಲುವಾಗಿ ನಗರ ಪ್ರದೇಶಕ್ಕೆ ಸ್ಥಳೀಯವಾಗಿ ಮತ್ತು ಶಿವಮೊಗ್ಗ ಮಾರ್ಗವಾಗಿ ಚಲಿಸುವ ಸರ್ಕಾರಿ ಬಸ್ ಮುಖಾಂತರವಾಗಿಯೇ ತೆರಳುತ್ತಿದ್ದಾರೆ. ಆದರೆ ಸಾಗರದಿಂದ ಶಿವಮೊಗ್ಗ ಮತ್ತು ಶಿವಮೊಗ್ಗದಿಂದ ಸಾಗರ ಮಾರ್ಗವಾಗಿ ಚಲಿಸುವ ಸರ್ಕಾರಿ ಬಸ್‌ಗಳು ಉಳ್ಳೂರು ಗ್ರಾಮದ ಕೆರೆಯ ಹತ್ತಿರ ಇರುವ ಬಸ್ ಸ್ಯಾಂಡ್ ನಲ್ಲಿ ಏರಿ ಹಾಗೂ ತಿರುವು ಇದೇ ಎಂಬ ಕಾರಣದಿಂದ ಸ್ಥಳೀಯ ಬಸ್ ಮತ್ತು ಮುಂಭಾಗ ಸರ್ಕಾರಿ ಬಸ್‌ಗಳು ನಿಲ್ಲಿಸದೇ, ಉಳ್ಳೂರು ಗ್ರಾಮದಿಂದ ದೂರವಿರುವ ಸಿಗಂಧೂರೇಶ್ವರಿ ಕಾಲೇಜ್ ನಿಲ್ಲಿಸುತ್ತಿರುತ್ತಾರೆ ಎಂದು ಆರೋಪಿಸಿದ್ದರು.

ಹೀಗೆ ಉಳ್ಳೂರು ಬಿಟ್ಟು, ಬೇರೆಡೆ ಕೆ ಎಸ್ ಆರ್ ಟಿ ಸಿ ಬಸ್ ನಿಲ್ಲಿಸುತ್ತಿರುವುದರಿಂದ ವೃದ್ದರು ಗರ್ಭಿಣಿಯರು ಹಾಗೂ ಮಹಿಳೆಯರು ಸಾರ್ವಜನಿಕರು ಸಿಗಂಧೂರೇಶ್ವರಿ ಕಾಲೇಜು ಬಳಿ ನಿಂತು ಬಸ್ ಹತ್ತುವುದು ಅಸಾಧ್ಯವಾಗಿದೆ. ಹೀಗಾಗಿ ಸರ್ಕಾರಿ ಬಸ್‌ಗಳನ್ನು ಉಳ್ಳೂರು ಗ್ರಾಮ ಬಿ.ಎಸ್.ಎನ್.ಎಲ್. ಕಛೇರಿ ಮುಂಭಾಗದಲ್ಲಿ ನಿಲ್ಲಿಸುವಂತೆ ಮನವಿ ಮಾಡಲಾಗಿದೆ. ಇದರಿಂದ ಸಾರ್ವಜನಿಕರಿಗೆ ಬಹಳ ಅನುಕೂಲವಾಗುತ್ತದೆ. ಈ ಹಿಂದೆ ಖಾಸಗಿ ಬಸ್ ಹಾಗೂ ಸರ್ಕಾರಿ ಬಸ್‌ಗಳು ಈ ಸ್ಥಳದಲ್ಲಿ ನಿಲ್ಲಿಸುತ್ತಿದ್ದು, ಸಾರ್ವಜನಿಕರು ತೊಂದರೆ ಇಲ್ಲದೇ ನಗರ ಪ್ರದೇಶಗಳಿಗೆ ತೆರಳುತ್ತಿದ್ದರು ಎಂದು ಮನವಿ ಪತ್ರದಲ್ಲಿ ಮನವರಿಕೆ ಮಾಡಿಕೊಡಲಾಗಿತ್ತು.

ಈ ಸುದ್ದಿಯನ್ನು ಗಮನಿಸಿರುವಂತ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ಶಿವಮೊಗ್ಗ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಪತ್ರ ಬರೆದು ಉಳ್ಳೂರಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ನಿಲ್ಲಿಸುವಂತೆ ಸೂಚಿಸಿದ್ದರು. ಅವರ ಸೂಚನೆಯಂತೆ ಇದೀಗ ಉಳ್ಳೂರಲ್ಲಿ ಶಿವಮೊಗ್ಗ, ಸಾಗರಕ್ಕೆ ತೆರಳುವ ಸಾರಿಗೆ ಬಸ್ಸುಗಳನ್ನು ನಿಲುಗಡೆ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ, ವೃದ್ದರಿಗೆ, ಗರ್ಭಿಣಿ ಮಹಿಳೆಯರು ಸೇರಿದಂತೆ ಸಾರ್ವಜನಿಕರಿಗೆ ಅನುಕೂಲವಾದಂತೆ ಆಗಿದೆ.

ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು

ಸೊರಬ ತಾಲ್ಲೂಕಿನ ರಸ್ತೆಗಳಲ್ಲಿ ‘ಗುಂಡಿ ದರ್ಬಾರ್’: ಮುಚ್ಚುವಂತೆ ಆಗ್ರಹಿಸಿ ‘ಬಿಜೆಪಿ ಪ್ರತಿಭಟನೆ’, ಭಾರೀ ಆಕ್ರೋಶ

ರಾಜ್ಯದಲ್ಲಿ ‘ರೇಷನ್ ಕಾರ್ಡ್’ ರದ್ದತಿಗೆ ಕಾರಣವೇನು? ನೀವು ಏನು ಮಾಡಬೇಕು? ಇಲ್ಲಿದೆ ಮಾಹಿತಿ | Ration Card Cancel

ಮಂಗಳೂರಿನಲ್ಲಿ ‘ಟೆಕ್ ಪಾರ್ಕ್’ ಪ್ರಸ್ತಾವ; ಶೀಘ್ರವೇ ಸಚಿವ ಸಂಪುಟದಲ್ಲಿ ಅನುಮೋದನೆ- ಸಚಿವ ಪ್ರಿಯಾಂಕ್ ಖರ್ಗೆ

Share. Facebook Twitter LinkedIn WhatsApp Email

Related Posts

BREAKINg : ಹುಬ್ಬಳ್ಳಿಯಲ್ಲಿ ವಿಮಾನ ಲ್ಯಾಂಡಿಂಗ್ ವೇಳೆ ತಪ್ಪಿದ ಭಾರೀ ದುರಂತ : 4 ಗಂಟೆ ಕಾಲ ಆಗಸದಲ್ಲೇ ಹಾರಾಡಿದ `Fly 91’ ವಿಮಾನ.!

20/04/2026 9:21 AM1 Min Read

BREAKING : ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಕೂದಲೆಳೆ ಅಂತರದಲ್ಲಿ ಪಾರಾದ ಪ್ರಯಾಣಿಕರು

20/04/2026 8:53 AM1 Min Read

ಕರ್ನಾಟಕ ನಿವಾಸ ಪ್ರಮಾಣಪತ್ರ ಪಡೆಯುವುದು ಹೇಗೆ? : ಬೇಕಾಗುವ ದಾಖಲೆಗಳು, ಶುಲ್ಕದ ವಿವರ ಇಲ್ಲಿದೆ

20/04/2026 8:45 AM2 Mins Read
Recent News

ರಹಾನೆ ‘ಡಕ್’ ದಾಖಲೆ: ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟ್ ಆದ ಆರಂಭಿಕ ಆಟಗಾರ!

20/04/2026 9:30 AM

BREAKINg : ಹುಬ್ಬಳ್ಳಿಯಲ್ಲಿ ವಿಮಾನ ಲ್ಯಾಂಡಿಂಗ್ ವೇಳೆ ತಪ್ಪಿದ ಭಾರೀ ದುರಂತ : 4 ಗಂಟೆ ಕಾಲ ಆಗಸದಲ್ಲೇ ಹಾರಾಡಿದ `Fly 91’ ವಿಮಾನ.!

20/04/2026 9:21 AM

ಆರ್ಥಿಕ ಸಂಕಷ್ಟದ ನಡುವೆ ಪಾಕಿಸ್ತಾನಕ್ಕೆ ಸವಾಲು: ಏ. 23ರೊಳಗೆ 1.5 ಬಿಲಿಯನ್ ಡಾಲರ್ ಸಾಲ ಮರುಪಾವತಿಸುವಂತೆ UAE ಸೂಚನೆ

20/04/2026 9:15 AM

ಹೋರ್ಮುಜ್ ಸಂಘರ್ಷದ ಬಿಸಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ದಿಢೀರ್ ಏರಿಕೆ; ಗ್ರಾಹಕರಿಗೆ ತಟ್ಟಲಿದೆ ಬೆಲೆ ಏರಿಕೆ ಶಾಕ್!

20/04/2026 9:05 AM
State News
KARNATAKA

BREAKINg : ಹುಬ್ಬಳ್ಳಿಯಲ್ಲಿ ವಿಮಾನ ಲ್ಯಾಂಡಿಂಗ್ ವೇಳೆ ತಪ್ಪಿದ ಭಾರೀ ದುರಂತ : 4 ಗಂಟೆ ಕಾಲ ಆಗಸದಲ್ಲೇ ಹಾರಾಡಿದ `Fly 91’ ವಿಮಾನ.!

By kannadanewsnow5720/04/2026 9:21 AM KARNATAKA 1 Min Read

ಹುಬ್ಬಳ್ಳಿ: ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಬರುತ್ತಿದ್ದ ವಿಮಾನವೊಂದು ಲ್ಯಾಂಡಿಂಗ್ ವೇಳೆ ನಿಯಂತ್ರಣ ತಪ್ಪಿದ ಘಟನೆ ನಡೆದಿದ್ದು, ಕೂದಲೆಳೆ ಅಂತರದಲ್ಲಿ ದೊಡ್ಡದೊಂದು ವಿಮಾನ…

BREAKING : ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಕೂದಲೆಳೆ ಅಂತರದಲ್ಲಿ ಪಾರಾದ ಪ್ರಯಾಣಿಕರು

20/04/2026 8:53 AM

ಕರ್ನಾಟಕ ನಿವಾಸ ಪ್ರಮಾಣಪತ್ರ ಪಡೆಯುವುದು ಹೇಗೆ? : ಬೇಕಾಗುವ ದಾಖಲೆಗಳು, ಶುಲ್ಕದ ವಿವರ ಇಲ್ಲಿದೆ

20/04/2026 8:45 AM

ನಿಮ್ಮ ಮನೆಯಲ್ಲಿರುವ `ಫ್ಯಾನ್ ವೇಗ’ ಕಡಿಮೆಯಾಗಿದೆಯೇ? ಸ್ಪೀಡ್ ಹೆಚ್ಚಿಸಲು ಜಸ್ಟ್ ಹೀಗೆ ಮಾಡಿ.!

20/04/2026 8:18 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.