Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಸಿಎಂ ಡಿ.ಕೆ ಶಿವಕುಮಾರ್ ಸಚಿವಾಲಯದ ಅಧಿಕಾರಿಗಳಿಗೆ ಕರ್ತವ್ಯ ಹಂಚಿಕೆ: ಯಾರಿಗೆ ಯಾವ ಜವಾಬ್ದಾರಿ? ಇಲ್ಲಿದೆ ಮಾಹಿತಿ

Let’s Talk Sex: ಕಡಿಮೆ ನಿದ್ದೆಯಿಂದ ಲೈಂಗಿಕ ಹಾರ್ಮೋನ್ ಗಳ ಮಟ್ಟ ಕುಸಿತ್ತದೆಯೇ? ಇಲ್ಲಿದೆ ತಜ್ಞರ ಮಾಹಿತಿ

‘ಐಐಟಿ ರೂರ್ಕಿ’ ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ ‘ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್’, ಏನಿದರ ಉದ್ದೇಶ? 

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿವಮೊಗ್ಗ: ಶ್ರೀಮಾರಿಕಾಂಬಾ ರೈತರ ಸಹಕಾರ ಸಂಘ ಬೆಳವಣಿಗೆಗೆ ಎಲ್ಲರ ಹೊಣೆಗಾರಿಕೆ ಅಗತ್ಯ- ಅಧ್ಯಕ್ಷ ಎಚ್.ಎನ್.ಚಂದ್ರಪ್ಪ
KARNATAKA

ಶಿವಮೊಗ್ಗ: ಶ್ರೀಮಾರಿಕಾಂಬಾ ರೈತರ ಸಹಕಾರ ಸಂಘ ಬೆಳವಣಿಗೆಗೆ ಎಲ್ಲರ ಹೊಣೆಗಾರಿಕೆ ಅಗತ್ಯ- ಅಧ್ಯಕ್ಷ ಎಚ್.ಎನ್.ಚಂದ್ರಪ್ಪ

By ವಸಂತ ಬಿ ಈಶ್ವರಗೆರೆ

ಶಿವಮೊಗ್ಗ : ಸಹಕಾರ ಸಂಸ್ಥೆ ಬೆಳೆಯಲು ಆಡಳಿತ ಮಂಡಳಿ ಹಾಗೂ ಷೇರುದಾರರ ಹೊಣೆಗಾರಿಕೆ ಮುಖ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಷೇರುದಾರರು ಸಂಘದಲ್ಲಿ ಮಾರಾಟಕ್ಕಿಟ್ಟಿರುವ ಪರಿಕರಗಳನ್ನು ಖರೀದಿ ಮಾಡುವ ಮೂಲಕ ಸಂಘದ ಬೆಳವಣಿಗೆಗೆ ಉತ್ತೇಜನ ನೀಡಬೇಕು ಎಂದು ಸೊರಬದ ಶ್ರೀಮಾರಿಕಾಂಬಾ ರೈತ ಉತ್ಪಾದಕರ ಸೌಹಾರ್ದ ಸಹಕಾರ ಸಂಘ ನಿಯಮಿತದ ಅಧ್ಯಕ್ಷ ಎಚ್.ಎನ್.ಚಂದ್ರಪ್ಪ ಗುಂಜನೂರು ಹೇಳಿದರು.

ಇಂದು ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣದ ಚಿಕ್ಕಪೇಟೆಯಲ್ಲಿ ಕಾರ್ಯನಿರ್ವಹಿಸುವ ಶ್ರೀ ಮಾರಿಕಾಂಬಾ ರೈತ ಉತ್ಪಾದಕ ಸಹಕಾರ ಸಂಘದ ಪಕ್ಕದಲ್ಲಿರುವ ಶ್ರೀಸತ್ಯನಾರಾಯಣ ದೇವಸ್ಥಾನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಎರಡನೇ ವರ್ಷದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹನಿಹನಿ‌ ಕೂಡಿದರೆ ಹಳ್ಳ ಎನ್ನುವಂತೆ ನಾವು ಮಾಡುವ ಸಣ್ಣ ವಹಿವಾಟು ದೊಡ್ಡಮಟ್ಟದ ವ್ಯವಹಾರವಾಗಿ ಬದಲಾಗುತ್ತದೆ. ಜೊತೆಗೆ ಸಂಘದಲ್ಲಿ ಷೇರುದಾರರು ಬ್ಯಾಂಕಿನಲ್ಲಿ ಠೇವಣಿ ಇಡುವ ಬದಲು ನಮ್ಮ ಸಂಘದ ಹೂಡಿಕೆಯನ್ನು ಮಾಡಿದರೆ ಅತಿ ಅವಶ್ಯವಿರುವ ರೈತರಿಗೆ ಸಾಲ ನೀಡಲು ಅನುಕೂಲವಾಗುತ್ತದೆ. ಖಾಸಗಿ ಗೊಬ್ಬರದ ಅಂಗಡಿಗಳಲ್ಲಿ ಸರದಿ ಸಾಲಿನಲ್ಲಿ ನಿಂತು ಗೊಬ್ಬರ, ಕೀಟನಾಶಕಗಳನ್ನು ಮಾಡಬೇಕು. ಆದರೆ ನಮ್ಮ ಸಂಘದಲ್ಲಿ ರೈತರು ಹಾಗೂ ಷೇರುದಾರರು ಕಾಯುವ ಪ್ರಶ್ನೆಯೇ ಎದುರಾಗುವುದಿಲ್ಲ. ಅಲ್ಲದೇ ನಾವೇ ಪಾಲುದಾರರಾಗಿರುವ ಸಹಾಕರ ಸಂಘದಲ್ಲಿ ನಮ್ಮದು ಎನ್ನುವ ಹೆಮ್ಮೆಯ ಭಾವ ಮೂಡುತ್ತದೆ ಎಂದು ತಿಳಿಸಿದರು.

ಸಂಘದಲ್ಲಿ 433 ಷೇರುದಾರರನ್ನು ಹೊಂದಿದ್ದು, ಗರಿಷ್ಠ ಮಟ್ಟ ತಲುಪಲು 70 ಜನರ ಅವಶ್ಯಕತೆ ಇದೆ. ಪ್ರತಿ ಷೇರುದಾರ ಕನಿಷ್ಠ 10 ಸಾವಿರ ರೂಪಾಯಿ ವ್ಯಾಪಾರ ವಹಿವಾಟು ಮಾಡಿದರೆ ಒಟ್ಟು ಷೇರುದಾರರವರೆಗೆ ಕನಿಷ್ಠ 43 ಲಕ್ಷ ವಹಿವಾಟು ಮಾಡಬಹುದು. ಇದರಿಂದ ಸಂಘ ಸಹಜವಾಗಿ ಲಾಭದಲ್ಲಿ ಇರುತ್ತದೆ ಎಂದರು‌.

ಸಂಘದ ಕಾರ್ಯ ನಿರ್ವಾಹಕ ಅಧಿಕಾರಿ ರಾಜೇಶ್ ಬಿ.ವಾರ್ಷಿಕ ವರದಿ ವಾಚಿಸಿದರು. ತೋಟಗಾರಿಕಾ ಅಧಿಕಾರಿ ರಾಜು ನಾಯಕ್ ಉದ್ಘಾಟಿಸಿ, ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ವರ್ಗಾವಣೆಗೊಂಡಿರುವ ತೋಟಗಾರಿಕಾ ಅಧಿಕಾರಿ ದೊರೈರಾಜ್ ಅವರನ್ನು ಸನ್ಮಾನಿಸಲಾಯಿತು.

ಈ ವೇಳೆ ಉಪಾಧ್ಯಕ್ಷ ಚಂದ್ರಪ್ಪ ಕಲ್ಲಂಬಿ, ನಿರ್ದೇಶಕರಾದ ರಾಮಪ್ಪ ಗುಡವಿ, ಯುವರಾಜ್ ಗುಡವಿ, ಸುಭಾಷ್ ಪಾಟೀಲ್ ಗುಂಜನೂರು, ಸೋಮಶೇಖರ್ ಓಟೂರು, ಜಗನ್ನಾಥ್ ಓಟೂರು, ಗೋಪಾಲ ಸಿಗೇಹಳ್ಳಿ, ಹುಚ್ಚಪ್ಪ ಎಂ.ಗುಂಜನೂರು,ಪಾರ್ವತಿ ಮಂಜಪ್ಪ ಗುಂಜನೂರು, ಕಲಾವತಿ ಚಂದ್ರಪ್ಪ ಗುಡವಿ,ಬಸವರಾಜ್ ಚಿಕ್ಕಾವಲಿ,ರಮೇಶ್ ಓಟೂರು, ಕಚೇರಿ ಸಹಾಯಕ ಎಸ್.ಬಿ. ನಂದನಕುಮಾರ್, ಕಾರ್ಯಕ್ರಮ ಅಧಿಕಾರಿ ಮಯರಾಡ ಸಂಸ್ಥೆ ಚಿತ್ರದುರ್ಗದ ಶಿವಕುಮಾರ್ ಐ.ಬಿ‌. ಇದ್ದರು.

ವರದಿ: ರಾಘವೇಂದ್ರ ಟಿ ಜಂಗಿನಕೊಪ್ಪ, ಸೊರಬ

Share. Facebook Twitter LinkedIn WhatsApp Email

Related Posts

BREAKING: ಸಿಎಂ ಡಿ.ಕೆ ಶಿವಕುಮಾರ್ ಸಚಿವಾಲಯದ ಅಧಿಕಾರಿಗಳಿಗೆ ಕರ್ತವ್ಯ ಹಂಚಿಕೆ: ಯಾರಿಗೆ ಯಾವ ಜವಾಬ್ದಾರಿ? ಇಲ್ಲಿದೆ ಮಾಹಿತಿ

4 Mins Read

‘ಐಐಟಿ ರೂರ್ಕಿ’ ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ ‘ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್’, ಏನಿದರ ಉದ್ದೇಶ? 

2 Mins Read

ದಾವಣಗೆರೆ ಉಪಚುನಾವಣೆ ವಿವಾದ: ಜಮೀರ್ ಅಹಮದ್ ಖಾನ್ ಮಾನಹಾನಿ ಸುದ್ದಿ ಪ್ರಸಾರಕ್ಕೆ ಕೋರ್ಟ್ ತಡೆಯಾಜ್ಞೆ

1 Min Read
Recent News

BREAKING: ಸಿಎಂ ಡಿ.ಕೆ ಶಿವಕುಮಾರ್ ಸಚಿವಾಲಯದ ಅಧಿಕಾರಿಗಳಿಗೆ ಕರ್ತವ್ಯ ಹಂಚಿಕೆ: ಯಾರಿಗೆ ಯಾವ ಜವಾಬ್ದಾರಿ? ಇಲ್ಲಿದೆ ಮಾಹಿತಿ

Let’s Talk Sex: ಕಡಿಮೆ ನಿದ್ದೆಯಿಂದ ಲೈಂಗಿಕ ಹಾರ್ಮೋನ್ ಗಳ ಮಟ್ಟ ಕುಸಿತ್ತದೆಯೇ? ಇಲ್ಲಿದೆ ತಜ್ಞರ ಮಾಹಿತಿ

‘ಐಐಟಿ ರೂರ್ಕಿ’ ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ ‘ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್’, ಏನಿದರ ಉದ್ದೇಶ? 

ಲೈಂಗಿಕ ಆಸಕ್ತಿ ಹಠಾತ್ ಕಡಿಮೆಯಾಗುತ್ತಿದೆಯೇ? ಇದು ಮೆದುಳಿನ ಗಡ್ಡೆಯ ಮುನ್ಸೂಚನೆಯೂ ಇರಬಹುದು!

State News
KARNATAKA

BREAKING: ಸಿಎಂ ಡಿ.ಕೆ ಶಿವಕುಮಾರ್ ಸಚಿವಾಲಯದ ಅಧಿಕಾರಿಗಳಿಗೆ ಕರ್ತವ್ಯ ಹಂಚಿಕೆ: ಯಾರಿಗೆ ಯಾವ ಜವಾಬ್ದಾರಿ? ಇಲ್ಲಿದೆ ಮಾಹಿತಿ

By ವಸಂತ ಬಿ ಈಶ್ವರಗೆರೆ KARNATAKA 4 Mins Read

ಬೆಂಗಳೂರು: ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಸುಗಮಗೊಳಿಸುವ ಮತ್ತು ಜನಪರ ಕೆಲಸಗಳಿಗೆ ವೇಗ ನೀಡುವ ಉದ್ದೇಶದಿಂದ ಮಾನ್ಯ ಮುಖ್ಯಮಂತ್ರಿಯವರ ಸಚಿವಾಲಯದ ಅಧಿಕಾರಿಗಳ…

‘ಐಐಟಿ ರೂರ್ಕಿ’ ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ ‘ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್’, ಏನಿದರ ಉದ್ದೇಶ? 

ದಾವಣಗೆರೆ ಉಪಚುನಾವಣೆ ವಿವಾದ: ಜಮೀರ್ ಅಹಮದ್ ಖಾನ್ ಮಾನಹಾನಿ ಸುದ್ದಿ ಪ್ರಸಾರಕ್ಕೆ ಕೋರ್ಟ್ ತಡೆಯಾಜ್ಞೆ

ಉಡುಪಿ ಬಿಜೆಪಿ ಶಾಸಕ ಯಶ್‌ಪಾಲ್ ಸುವರ್ಣ ವಿರುದ್ಧದ FIR ರದ್ದುಗೊಳಿಸಿದ ಹೈಕೋರ್ಟ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.