ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಡೆದ ಶೋಧ ಕಾರ್ಯದಲ್ಲಿ ನಾಪತ್ತೆಯಾಗಿದ್ದ ಮೂವರ ಪೈಕಿ ಇಬ್ಬರ ಶವ ಪತ್ತೆಯಾಗಿದೆ. ಅದರಲ್ಲಿ ಕೇರಳ ಮೂಲದ ಲಾರಿ ಚಾಲಕನಾಗಿದ್ದ ಅರ್ಜುನ್ ಶವ ಸೇರಿದಂತೆ ಮತ್ತೋರ್ವರ ಶವ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಆದರೆ ಅರ್ಜುನನ ಮೃತದೇಹ 2 ತುಂಡುಗಳಾಗಿವೆ.
ಹೌದು ಕಳೆದ ಜುಲೈ 16 ರಂದು ಬೆಳಿಗ್ಗೆ 8.40ಕ್ಕೆ ಗುಡ್ಡ ಕುಸಿತವಾಗಿತ್ತು. ಘಟನೆಯಲ್ಲಿ 9 ಜನರು ನಾಪತ್ತೆಯಾಗಿದ್ದರು. ಇದೀಗ ಕೇರಳ ಮೂಲದ ಚಾಲಕ ಅರ್ಜುನ್ ಹಾಗೂ ಇನ್ನೊರ್ವ ವ್ಯಕ್ತಿಯ ಶವ ಪತ್ತೆಯಾಗಿದೆ. ಅಲ್ಲದೆ ಅರ್ಜುನ್ ಓಡಿಸುತ್ತಿದ್ದ ಲಾರಿ ಕೂಡ ಪತ್ತೆಯಾಗಿದೆ. ಸದ್ಯ ಅರ್ಜುನ್ ಮೃತದೇಹ ಭಾರತ ಬೆಂಜ್ ಲಾರಿಯಲ್ಲಿದೆ. ಮತ್ತೊಂದು ಶವ ಯಾರದ್ದು ಎಂದು ಇನ್ನಷ್ಟೇ ದೃಢಪಡಿಸಬೇಕಿದೆ. ಶಿರೂರು ಬಳಿ, ಗಂಗಾವಳಿ ನದಿಯಲ್ಲಿ ಆರು ದಿನಗಳಿಂದ ಶೋಧ ಕಾರ್ಯ ನಡೆಸಲಾಗಿತ್ತು.
ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರು ಗ್ರಾಮದಲ್ಲಿ ಶೋಧಕಾರ್ಯ ನಡೆಸಲಾಗಿತ್ತು. ಬಾರ್ಜ್ ಮೂಲಕ ನದಿಯಲ್ಲಿ ಲಾರಿ ಹಾಗೂ ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ನಡೆಸಲಾಗಿತ್ತು. ಗುಡ್ಡ ಕುಸಿತದ ರಭಸಕ್ಕೆ ಲಾರಿ ನದಿಗೆ ಬಿದ್ದು ನುಜ್ಜುಗುಜ್ಜಾಗಿದೆ. ಗಂಗಾವಳಿ ನದಿಯಿಂದ ಲಾರಿ ಮತ್ತು ಶವಗಳನ್ನು ಮೇಲೆತ್ತುವ ಕಾರ್ಯ ಪ್ರಗತಿಯಲ್ಲಿದೆ.