ಶಿವಮೊಗ್ಗ: ತನಗೆ ನ್ಯಾಯ ಸಿಕ್ಕಿಲ್ಲ, ನ್ಯಾಯಸಿಗುವಂತ ಭರವಸೆಯೂ ಹೊರಟು ಹೋಗಿದೆ ಎನ್ನುವಂತ ನಿರಾಶೆಯಲ್ಲಿ, ಯುವಕನೊಬ್ಬ ತನ್ನ ಬೈಕ್ ಗೆ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆಯೇ ಬೆಂಕಿ ಹಚ್ಚಿದ್ದಾನೆ. ಇದರಿಂದಾಗಿ ಡಿಸಿ ಕಚೇರಿ ಆವರಣದಲ್ಲಿಯೇ ಬೈಕ್ ಧಗಧಗಿಸಿ ಹೊತ್ತಿ ಉರಿದ ಪರಿಣಾಮ ಸ್ಥಳದಲ್ಲಿ ಕೆಲ ಕಾಲ ಆತಂಕ ಕೂಡ ಹುಟ್ಟು ಹಾಕಿತ್ತು.
ಶಿವಮೊಗ್ಗದ ಗಾಡಿಕೊಪ್ಪದ ಡಾ.ಅಂಬೇಡ್ಕರ್ ಕಾಲೋನಿಯ ನಿವಾಸಿಯಾಗಿದ್ದಂತ ರಾಜು ಎಂಬಾತ, ತುಂಗಾ ಏತ ನೀರಾವರಿ ಯೋಜನೆ ಜಾಗವನ್ನು ಒತ್ತುವರಿ ಮಾಡಿಕೊಂಡು ಮನೆ ಕಟ್ಟಿಕೊಂಡಿದ್ದನು. ಈ ಜಾಗವನ್ನು ಕೋರ್ಟ್ ಆದಏಶದ ಹಿನ್ನಲೆಯಲ್ಲಿ, ಕೆಲ ದಿನಗಳ ಹಿಂದೆ ತೆರವುಗೊಳಿಸಿದ್ದರು.
ಜಿಲ್ಲಾಡಳಿತದಿಂದ ನಡೆದಂತ ಒತ್ತುವರಿ ತೆರವು ಕಾರ್ಯಾಚರಣೆ ವಿರುದ್ಧ ಡಿಸಿ ಕಚೇರಿಯ ಮುಂದೆ ಅಹೋರಾತ್ರಿ ಧರಣಿ ಕೂಡ ನಡೆಸಿದ್ದನು. ಆತ್ಮಹತ್ಯೆ ಬೆದರಿಕೆ ಕೂಡ ಹಾಕಿದ್ದನು. ಆದರೂ ಈತನಿಗೆ ನ್ಯಾಯ ಸಿಕ್ಕಿರಲಿಲ್ಲ. ಪ್ಲಾಸ್ಟಿಕ್ ಹೂ ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಂತ ರಾಜು, ಮನೆ ಕಳೆದುಕೊಂಡು ಕಂಗಾಲಾಗಿದ್ದನು.
TET-2022 ಪ್ರವೇಶ ಪತ್ರದಲ್ಲಿ ಅಶ್ಲೀಲ ಚಿತ್ರ : ಶಿಕ್ಷಣ ಇಲಾಖೆಯಿಂದ ಮಹತ್ವದ ಸ್ಪಷ್ಟೀಕರಣ
ಇದೇ ಆವೇಶ, ಸಿಟ್ಟಿನಲ್ಲಿ ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿಗೆ ತನ್ನ ಬೈಕ್ ನಲ್ಲಿ ಬಂದಂತ ರಾಜು, ತನಗೆ ನ್ಯಾಯ ಸಿಗದೇ ಇದ್ದದ್ದಕ್ಕೇ ತನ್ನ ಬೈಕ್ ಗೆ ಸಿಟ್ಟಿನಿಂದ ಬೆಂಕಿ ಇಟ್ಟಿದ್ದನು. ಡಿಸಿ ಕಚೇರಿ ಮುಂದೆ ಬೈಕ್ ಧಗಧಗಿಸಿ ಹೊತ್ತಿ ಉರಿದಿತ್ತು. ಇದರಿಂದ ಸ್ಥಳದಲ್ಲಿದ್ದಂತ ಜನರು ಕೆಲ ಕಾಲ ಆತಂಕ ಕೂಡಗೊಂಡಿದ್ದರು. ಸ್ಥಳಕ್ಕೆ ಆಗಮಿಸಿದಂತ ಅಗ್ನಿಶಾಮಕ ಸಿಬ್ಬಂದಿಗಳು ಬಂಕಿ ನಂದಿಸಿದರು. ಬಳಿಕ ರಾಜುವನ್ನು ಜಯನಗರ ಠಾಣೆ ಪೊಲೀರು ವಶಕ್ಕೆ ಪಡೆದರು.