ಹುಬ್ಬಳ್ಳಿ: ಈ ಹಿಂದೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ( Farmer CM BS Yediyurappa ) ಮುಖ್ಯಮಂತ್ರಿಯಾಗಿದ್ದಾಗ ಶಿವಮೊಗ್ಗದಲ್ಲಿ ಶಾಂತವಾದಂತ ವಾತಾವರಣವಿತ್ತು. ಈಗ ಯಾಕೆ ಗಲಭೆ, ಹಲ್ಲೆಗಳಂತ ಪ್ರಕರಣಗಳು ನಡೆಯುತ್ತಿವೆ. ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ( Farmer Minister KS Eshwarappa ) ಅವರನ್ನು ಹದ್ದುಬಸ್ತಿನಲ್ಲಿ ಇಟ್ಟರೇ ಶಿವಮೊಗ್ಗ ( Shivamogga ) ಶಾಂತವಾಗಿರುತ್ತದೆ ಎಂಬುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ( JDS President CM Ibrahim ) ಹೇಳಿದ್ದಾರೆ.
ರಾಜ್ಯ ಸರ್ಕಾರದಿಂದ ‘ಆಶಾ ಕಾರ್ಯಕರ್ತೆ’ಯರಿಗೆ ದೀಪಾವಳಿ ಗಿಫ್ಟ್: ‘1 ಸಾವಿರ ಗೌರವಧನ’ ಹೆಚ್ಚಳ, ಅನುದಾನ ಬಿಡುಗಡೆ
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಬಿಜೆಪಿ ನಾಯಕ ಕೆ.ಎಸ್ ಈಶ್ವರಪ್ಪ ಸಾಬಿಗಳ ಮನೆಯಲ್ಲಿ ಬಿರಿಯಾನಿ ತಿಂದು ಹೊರಗಡೆ ಬಂದ ಮೇಲೆ, ಬಿರಿಯಾನಿ ತಿಂದೇ ಇಲ್ಲ ಎನ್ನುವಂತೆ ನಟಿಸುತ್ತಾರೆ. ಅಲ್ಲದೇ ಹಲಾಲ್ ಕಟ್ ನಿಷೇಧಿಸಬೇಕೆಂದು ಮುಷ್ಕರ ನಡೆಸುತ್ತಾರೆ ಎಂದರು.
ರೂಪಾಯಿ ಕುಸಿತಕ್ಕೆ ಕೇಜ್ರಿವಾಲ್ ಪರಿಹಾರ, ಕರೆನ್ಸಿ ನೋಟುಗಳ ಮೇಲೆ ಲಕ್ಷ್ಮಿ-ಗಣೇಶ ಮುದ್ರಿಸಲು ಮನವಿ
ಶಿವಮೊಗ್ಗದಲ್ಲಿ ಪದೇ ಪದೇ ನಡೆಯುತ್ತಿರುವಂತ ಹಿಂಸಾಚಾರದಂತ ಘಟನೆಗಳಿಗೆ ಕೆ.ಎಸ್ ಈಶ್ವರಪ್ಪ ಅವರೇ ಕಾರಣ. ಈಶ್ವರಪ್ಪ ಅವರನ್ನು ಹದ್ದುಬಸ್ತಿನಲ್ಲಿ ಇಟ್ಟರೇ, ಶಿವಮೊಗ್ಗದಲ್ಲಿ ಎಲ್ಲವೂ ನೆಟ್ಟಗಿರುತ್ತದೆ ಎಂದು ವಾದ್ಧಾಳಿ ನಡೆಸಿದರು.