ಶಿವಮೊಗ್ಗ: ನಾಳೆ ಮಧ್ಯರಾತ್ರಿಯಿಂದ ದಿನಾಂಕ 09-10-2022ರಂದು ಶಿವಮೊಗ್ಗ, ಭದ್ರಾವತಿ ಮತ್ತು ಸಾಗರ ನಗರ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ( liquor Sale ) ನಿಷೇಧಗೊಳಿಸಿ, ಡಿಸಿ ಆದೇಶಿಸಿದ್ದಾರೆ.
ಮೊಬೈಲ್ ಬಳಕೆದಾರರೇ ಎಚ್ಚರ ; ವೈರಸ್ ಹೊತ್ತು ತರ್ತಿದೆ ಈ ಜನಪ್ರಿಯ ‘ಅಪ್ಲಿಕೇಷನ್’, ಇದ್ರೆ ತಕ್ಷಣ ತೆಗೆದುಹಾಕಿ
ಈ ಕುರಿತಂತೆ ಜಿಲ್ಲಾಧಿಕಾರಿ ಡಾ. ಆರ್ ಸೆಲ್ವಮಣಿ ಆದೇಶಿಸಿದ್ದು, ದಿನಾಂಕ 09-10-2022ರಂದು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಿವಮೊಗ್ಗ ನಗರದಲ್ಲಿ ಮುಸ್ಲಿಂ ಬಾಂಧವರು ಬೃಹತ್ ಮೆರವಣಿಗೆ ನಡೆಸಲಿದ್ದು, ಈ ಮೆರವಣಿಗೆಯಲ್ಲಿ ಸುಮಾರು 60 ರಿಂದ 70 ಸಾವಿರ ಜನ ಮುಸ್ಲಿಮರು ಭಾಗವಹಿಸಲಿದ್ದಾರೆ ಎಂದಿದ್ದಾರೆ.
‘ರಸ್ತೆ ನಿರ್ಮಾಣ’ದಲ್ಲೂ ‘ BJP ಮತ ಪಾಲಿಟಿಕ್ಸ್’: ‘ಶಾಸಕ ಹಾಲಪ್ಪ’ ವಿರುದ್ಧ ‘ಮುಳುಗಡೆ ಸಂತ್ರಸ್ತ’ರು ಕಿಡಿ
ಮುಂಜಾಗ್ರತಾ ಕ್ರಮವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಶಿವಮೊಗ್ಗ, ಭದ್ರವಾತಿ ಮತ್ತು ಸಾಗರ ನಗರದ 5 ಕಿಲೋಮೀಟರ್ ವ್ಯಾಪ್ತಿಯಲ್ಲಿ ದಿನಾಂಕ 08-10-2022ರ ಮಧ್ಯರಾತ್ರಿಯಿಂದ ದಿನಾಂಕ 09-10-2022ರ ಮಧ್ಯರಾತ್ರಿಯವರೆಗೆ ಮದ್ಯ ತಯಾರಿಕೆ, ದಾಸ್ತಾನು, ಸಾಗಾಣಿಕೆ ಮತ್ತು ಮದ್ಯ ಮಾರಾಟವನ್ನು ನಿಷೇಧಿಸಿ ಆದೇಶಿಸಿದ್ದಾರೆ.