ಶಿವಮೊಗ್ಗ : ತೊಂದರೆಯಲ್ಲಿರುವ ಹಿರಿಯರಿಗೆ ಸಾಧ್ಯವಾಗುವ ಬೆಂಬಲ ಮತ್ತು ಉಚಿತ ಕಾನೂನಿನ ನೆರವು ಸೇರಿದಂತೆ ಹಿರಿಯ ನಾಗರೀಕರಿಗೆ ( Senior Sitizen ) ಸಹಾಯ ಮಾಡಲು ಸಹಾಯವಾಣಿ ಸಂಖ್ಯೆ ( Helpline Number ) 1090 ಸ್ಥಾಪಿಸಲಾಗಿದ್ದು, ಉಚಿತವಾಗಿ ಕರೆ ಮಾಡಿ ಸಹಾಯ ನೆರವು, ಸಲಹೆ ಪಡೆಯಬಹುದು.
ಹಿರಿಯರು ಎದುರಿಸುತ್ತಿರುವ ತೊಂದರೆಗಳನ್ನು ಆಲಿಸಿ, ಅವರಿಗೆ ಸೂಕ್ತ ಮಾರ್ಗದರ್ಶನ/ಸಲಹೆ ಕೊಡುವುದು. ತೀರ ಅಗತ್ಯವಿದ್ದಲ್ಲಿ ಪೊಲೀಸ್ ನೆರವಿನಿಂದ ಸಮಸ್ಯೆ ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳುವುದು. ಕೌಟುಂಬಿಕ ವಿಷಯಗಳಲ್ಲಿ ರಾಜಿ ಮಾಡಿಸುವುದು. ವೈದ್ಯಕೀಯ ಸಲಹೆ ಮತ್ತು ಸೇವೆಯ್ನು ಒದಗಿಸುವುದು, ನಿರ್ಲಕ್ಷಿಸಲ್ಪಟ್ಟ, ತೊರೆಯಲ್ಪಟ್ಟ ಹಿರಿಯರಿಗೆ ಜೀವನಕ್ಕಾಗಿ ಅಗತ್ಯಬಿದ್ದಲ್ಲಿ ಪುನರ್ವಸತಿ(ವೃದ್ದಾಶ್ರಮ) ಸೌಕರ್ಯ ಒದಗಿಸುವುದು. ವಿವಾದಗಳನ್ನು ಬಗೆಹರಿಸಲು ಬೇರೆ ಮಾರ್ಗೋಪಾಯಗಳನ್ನು ಸೂಚಿಸುವುದು, ಹಿರಿಯ ನಾಗರೀಕರ ಗುರುತಿನ ಚೀಟಿ ಮಾಡಿಸುವುದು ಮತ್ತು ಹಿರಿಯ ನಾಗೀರಿಕರ ವೃದ್ದಾಪ್ಯವೇತನ ಮಾಡಿಸಿಕೊಡಲಾಗುವುದು.
ಹೆಚ್ಚಿನ ಮಾಹಿತಿಗೆ ಡಿವೈಎಸ್ಪಿ ಕಚೇರಿ, ಸಾಗರ ರಸ್ತೆ, ಶಿವಮೊಗ್ಗ ದೂರವಾಣಿ ಸಂಖ್ಯೆ 08182-221188/260424 ನ್ನು ಸಂಪರ್ಕಿಸಬಹುದೆಂದು ಹಿರಿಯ ನಾಗರೀಕರ ಸಹಾಯವಾಣಿ ಯೋಜನಾ ಸಂಯೋಜಕರು ತಿಳಿಸಿದ್ದಾರೆ.