ಶಿವಮೊಗ್ಗ : ಜುಲೈ 18 ಮತ್ತು 19 ರಂದು ರೈಲ್ವೇ ಬ್ರಿಡ್ಜ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಫೀಡರ್-3 ಪುರಲೆ ಮತ್ತು ಫೀಡರ್-8 ಜಾವಳ್ಳಿ ವ್ಯಾಪ್ತಿಯ ಗುರುಪುರ, ಪುರಲೆ, ಶಾಂತಮ್ಮ ಲೇಔಟ್, ಚಿಕ್ಕಲ್, ಸಿದ್ದೇಶ್ವರನಗರ, ಹಸೂಡಿ ರಸ್ತೆ, ವೆಂಕಟೇಶನಗರ, ಸುಬ್ಬಯ್ಯ ಆಸ್ಪತ್ರೆ, ಹೊಳೆಬೆನವಳ್ಳಿ, ಪಿಳ್ಳಂಗಿರಿ, ಜಾವಳ್ಳಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಕೊಳೆರೋಗ ನಿಯಂತ್ರಣ ಕ್ರಮ
ಶಿಕಾರಿಪುರ ತಾಲ್ಲೂಕಿನಲ್ಲಿ ಕಳೆದ 15 ರಿಂದ 20 ದಿನಗಳಿಂದ ಮುಂಗಾರು ಮಳೆ ಬೀಳುತ್ತಿದ್ದು ಪ್ರಸ್ತುತ ಅಡಿಕೆಯಲ್ಲಿ ಕಂಡು ಬರಬಹುದಾದ ಕೊಳೆರೋಗಕ್ಕೆ ಕೆಳಕಂಡಂತೆ ನಿಯಂತ್ರಣ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಲಾಗಿದೆ.
ಶೇ.1 ರಷ್ಟು ಬೋರ್ಡೋ ದ್ರಾವಣ(1 ಕೆ.ಜಿ ಮೈಲುತ್ತುತ್ತು 1 ಕೆ.ಜಿ ಸುಣ್ಣವನ್ನು 100 ಲೀ ನೀರಿನಲ್ಲಿ) ಸಿಂಪಡಿಸುವ ಮೂಲಕ ಕೊಳೆರೋಗ ಹಾನಿಯ ತೀವ್ರತೆಯನ್ನು ತಡೆಗಟ್ಟಬಹುದಾಗಿರುತ್ತದೆ. ಆದ್ದರಿಂದ ತಾಲ್ಲೂಕಿನಾದ್ಯಂತ ಅಡಿಕೆ ಬೆಳೆದಿರುವ ರೈತರು ಮಳೆಯ ಬಿಡುವನ್ನು ನೋಡಿಕೊಂಡು ಮೇಲಿನ ದ್ರಾವಣ ಸಿಂಪಡಿಸುವುದರ ಮೂಲಕ ಅಡಿಕೆ ಬೆಳೆಯನ್ನು ಕೊಳೆರೋಗದ ಬಾಧೆಯಿಂದ ತಡೆಗಟ್ಟಬಹುದು.
ಈ ಕುರಿತು ಹೆಚ್ಚಿನ ಮಾಹಿತಿಗೆ ಸಂಬಂಧಿಸಿದ ರೈತ ಸಂಪರ್ಕದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಹಾಗೂ ತೋಟಗಾರಿಕೆ ಇಲಾಖೆ, ಶಿಕಾರಿಪುರ ಇವರನ್ನು ಸಂಪರ್ಕಿಸಬಹುದೆಂದು ಶಿಕಾರಿಪುರ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.