ಶಿವಮೊಗ್ಗ: ನಗರದಲ್ಲಿ ವಿವಿಧ ವಿದ್ಯುತ್ ಕಾಮಗಾರಿ ಹಿನ್ನಲೆಯಲ್ಲಿ, ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಆಗಸ್ಟ್ 28, 29ರಂದು ವಿದ್ಯುತ್ ವ್ಯತ್ಯಯ ( Power Cut ) ಉಂಟಾಗಲಿದೆ ಎಂಬುದಾಗಿ ಮೆಸ್ಕಾಂ ತಿಳಿಸಿದೆ.
ಶಿವಮೊಗ್ಗ: ಆ.31ರಂದು ‘ಗಣೇಶ ಚತುರ್ಥಿ’ ಪ್ರಯುಕ್ತ ಮಾಂಸ ಮಾರಾಟ ನಿಷೇಧ | Ganesh Festival
ಆಗಸ್ಟ್ 28ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಆಗಸ್ಟ್ 28 ರಂದು ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್.-8ರಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದಿದೆ.
BIG NEWS: ಶೀಘ್ರವೇ ಕಾಂಗ್ರೆಸ್ ಗೆ ಮಾಜಿ ಸಂಸದ ಕೆ.ಹೆಚ್ ಮುನಿಯಪ್ಪ ಗುಡ್ ಬೈ, ಬಿಜೆಪಿ ಸೇರ್ಪಡೆ.?!
ವೀರಣ್ಣ ಲೇಔಟ್, ಕಾಶೀಪುರ, ಕೆ.ಹೆಚ್.ಬಿ, ಕಾಲೋನಿ ಎ, ಬಿ, ಸಿ, ಡಿ, ಇ, ಬ್ಲಾಕ್, ಕಲ್ಲಹಳ್ಳಿ, ಎಸ್.ಕೆ.ಎನ್. ಶಾಲೆ, ಪೊಲೀಸ್ ಚೌಕಿ, ಹುಚ್ಚರಾಯ ಕಾಲೋನಿ, ಲಕ್ಷ್ಮೀಪುರ, ಕೆಂಚಪ್ಪ ಲೇಔಟ್, ಆದರ್ಶ ಕಾಲೋನಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ತಿಳಿಸಿದೆ.
BIGG BREAKING NEWS: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ10,256 ಹೊಸ ಪ್ರಕರಣಗಳು ಪತ್ತೆ, 68 ಸಾವು
ಆಗಸ್ಟ್ 29ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಆಗಸ್ಟ್ 29 ರಂದು ಕಂಬ ಸ್ಥಳಾಂತರ ಕಾಮಗಾರಿ ಇರುವುದರಿಂದ ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರದ ಊರಗಡೂರು ಫೀಡರ್-7 11 ಕೆ.ವಿ. ಮಾರ್ಗಮುಕ್ತತೆ ನೀಡುವುದರಿಂದ ಅಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ನಗರದ ಬೈಪಾಸ್ ಬ್ರಿಡ್ಜ್ನಿಂದ ಊರಗಡೂರು ಸರ್ಕಲ್ವರೆಗೆ, ವಾದಿ-ಎ-ಹುದ್ 1, 2, 3 ಮತ್ತು 4ನೇ ಮುಖ್ಯ ರಸ್ತೆ, ಮೆಹಬೂಬ್ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ತಿಳಿಸಿದೆ.