ಶಿವಮೊಗ್ಗ: ಮಂಗಳೂರು ವಿದ್ಯುತ್ಚಕ್ತಿ ಸರಬರಾಜು ಕಂಪನಿಯು ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಸ್ಮಾರ್ಟ್ಸಿಟಿ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಈ ಪ್ರದೇಶದ ವ್ಯಾಪ್ತಿಗೊಳಪಡುವ ಪ್ರದೇಶಗಳಾದ ಶುಭಮಂಗಳ ಕಲ್ಯಾಣ ಮಂದಿರ ಮುಂಭಾಗ, ಆಟೋ ಕಾಂಪ್ಲೇಕ್ಸ್ ರಸ್ತೆ, ರಾಣಿ ಚನ್ನಮ್ಮ ರಸ್ತೆ, ಚಾಲುಕ್ಯ ಬಾರ್, ಮೂರ್ತಿ ಸೈಕಲ್, ಕರ್ನಾಟಕ ಬ್ಯಕ್ ವಿನೋಬನಗರ, ಪೊಲೀಸ್ ಚೌಕಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಿ:09/12/20222 ರಂದು ಬೆಳಗ್ಗೆ 10.00 ರಿಂದ ಸಂಜೆ 5.00ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ವಿಕಲಚೇತನರ ಒಕ್ಕೂಟದ ಜಿಲ್ಲಾ ಘಟಕದ ಪದಾಧಿಕಾರಿಗಳ ನೇಮಕ
ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟದ ರಾಜ್ಯ ಸಮಿತಿ, ವಿಕಲಚೇತನರ ಸಂಘಟನೆಗಳ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಜ್ಯೋತಿ ಎಸ್., ಉಪಾಧ್ಯಕ್ಷರುಗಳಾಗಿ ಈಶ್ವರಿ ಮತ್ತು ನಾಗೇಶ್ ಬಿ., ಕಾರ್ಯದರ್ಶಿಯಾಗಿ ಶಿವಮ್ಮ, ಸಂಘಟನಾ ಕಾರ್ಯದರ್ಶಿಯಾಗಿ ದಿನೇಶ, ಜಂಟಿ ಕಾರ್ಯದರ್ಶಿಯಾಗಿ ಮಹಾಂತೇಶ್ ರಾವ್ ಟಿ., ಖಜಾಂಚಿಯಾಗಿ ಗಾಯತ್ರಿ ಎಲ್., ಸದಸ್ಯರುಗಳಾಗಿ ವಿನೋದ, ಜಗದೀಶ ಹಾಗೂ ಚೇತನ್ ಕುಮಾರ್ ಇವರುಗಳು ಆಯ್ಕೆಯಾಗಿರುತ್ತಾರೆ ಎಂದು ಜಿಲ್ಲಾ ಅಂಕವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ವಿಕಲಚೇತನರ ಕಲ್ಯಾಣ ಕ್ಷೇತ್ರದಲ್ಲಿ ಜಿಲ್ಲೆಗೆ 3 ಅತ್ಯುತ್ತಮ ಸೇವಾ ಪ್ರಶಸ್ತಿ
2022-23ನೇ ಸಾಲಿಗೆ ರಾಜ್ಯ ಸರ್ಕಾರವು ವಿಕಲಚೇತನರ ಕಲ್ಯಾಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ/ಸಲ್ಲಿಸುತ್ತಿರುವ ವ್ಯಕ್ತಿ, ಸಂಸ್ಥೆ ಮತ್ತು ವಿಶೇಷ ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ ನೀಡುತ್ತಿದ್ದು, ಈ ಬಾರಿ ಶಿವಮೊಗ್ಗ ಜಿಲ್ಲೆಗೆ ವೈಯುಕ್ತಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಭದ್ರಾವತಿ ತಾಲೂಕಿನ ಶ್ರೀಮತಿ ಜ್ಯೋತಿ ಎಸ್. ಮರಿಗೌಡ ಹಾಗೂ ಸಂಚಾಲಕ ಸಕ್ಷಮ ಸಿ.ಆರ್. ಶಿವಕುಮಾರ್ ಮತ್ತು ಸಂಸ್ಥೆಯ ವಿಭಾಗದಲ್ಲಿ ಸಾಗರ ತಾಲೂಕು ಮುಂಗರವಳ್ಳಿಯ ಚೈತನ್ಯ ವಿಶೇಷ ಶಿಕ್ಷಣ ಟ್ರಸ್ಟ್ ಇವರುಗಳಿಗೆ ರಾಜ್ಯ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿ ಪಡೆದ ಗೌರವಾನ್ವಿತರಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶ್ರೀಮತಿ ಶಿಲ್ಪಾ ಎಂ. ದೊಡ್ಡಮನಿ ಇಲಾಖೆಯ ಪರವಾಗಿ ಅಭಿನಂದನೆ ತಿಳಿಸಿದ್ದಾರೆ.
ಪ. ಬಂಗಾಳ: ಮಾತನಾಡುತ್ತಾ ನಿಂತಿದ್ದ ಟಿಟಿಇ ತಲೆಗೆ ತಾಗಿದ ವಿದ್ಯುತ್ ತಂತಿ… ಮುಂದೇನಾಯ್ತು ನೋಡಿ | WATCH VIDEO