ಶಿವಮೊಗ್ಗ: ವಿವಿದ ವಿದ್ಯುತ್ ಕಾಮಗಾರಿಯ ಕೆಲಸ ಹಿನ್ನಲೆಯಲ್ಲಿ, ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಜುಲೈ.20ರಂದು ವಿದ್ಯುತ್ ವ್ಯತ್ಯಯ ( Power Cut ) ಉಂಟಾಗಲಿದೆ.
ಈ ಬಗ್ಗೆ ಮೆಸ್ಕಾಂ ಮಾಹಿತಿ ನೀಡಿದ್ದು, ಜುಲೈ 20 ರಂದು ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಘಟಕ 2, 5 ಮತ್ತು 6 ರಲ್ಲಿ ಸ್ಮಾರ್ಟ್ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳಿಗ್ಗೆ 09 ರಿಂದ ಸಂಜೆ 06 ಗಂಟೆವರೆಗೆ ನಗರದ ಇಲಿಯಾಸ್ ನಗರ 2 ರಿಂದ 13ನೇ ಕ್ರಾಸ್ವರೆಗೆ, 100 ಅಡಿರಸ್ತೆ, ಫಾರೂಕ್ಯ ಶಾದಿಮಹಲ್, ಮಂಡಕ್ಕಿಭಟ್ಟಿ, ಟಿಪ್ಪುನಗರ, ಮಂಜುನಾಥ ಬಡಾವಣೆ, ಖಾಜಿ ನಗರ 80 ಅಡಿರಸ್ತೆ, ಕಾಮತ್ ಲೇಔಟ್, ಮಲ್ಲಿಕಾರ್ಜುನ ಬಡಾವಣೆ ಹಾಗೂ ಸುತ್ತಮುತ್ತಲ ಪ್ರದೇಶ, ಕುಂಬಾರಕೇರಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಮುಂದುವರೆದು ಬಿ.ಬಿರಸ್ತೆ, ಕೆ.ಆರ್.ಪುರಂ, ಸೀಗೆಹಟ್ಟಿ, ಮುರಾದ್ನಗರ, ಸವಾಯಿಪಾಳ್ಯ, ಕುರುಬರಪಾಳ್ಯ, ಇಮಾಮ್ಬಾಡ, ಶಿವಶಂಕರ್ ರೈಸ್ಮಿಲ್, ಮಂಡ್ಲಿ ಸರ್ಕಲ್, ದಿಲ್ಲಿ ದರ್ಬಾರ್ ಹಿಂಭಾಗ, ನಾಗಭೂಷಣ್ ಪೆಟ್ರೊಲ್ ಬಂಕ್, ಬೈಪಾಸ್ ರಸ್ತೆ, ಟಿ.ಎಸ್.ಆರ್.ರಸ್ತೆ, ರವಿವರ್ಮ ಬೀದಿ, ಮಾಕಮ್ಮನ ಕೇರಿ, ಆಜಾದ್ನಗರ, ಲಾಲ್ ಬಂದರ್ ಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶ, ಕಲ್ಲೂರು ಮಂಡ್ಲಿ ಗ್ರಾಮಾಂತರ ಪ್ರದೇಶ, ಐಹೊಳೆ, ಅಗಸವಳ್ಳಿ, ಕಲ್ಲೂರು, ಗೋವಿಂದಪುರ, ಅನುಪಿನಕಟ್ಟೆ, ಪುರದಾಳು, ರಾಮಿನಕೊಪ್ಪ, ಮೈಲಾರಪ್ಪನ ಕ್ಯಾಂಪ್, ಹನುಮಂತಾಪುರ, ಶರಾವತಿ ನಗರ, ಶಾರದ ಕಾಲೋನಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ತಿಳಿಸಿದೆ.
ಶಿವಮೊಗ್ಗದ ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-09 ರಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜುಲೈ 20 ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ನಗರದ ಮೇದಾರಕೇರಿ, ಜೈಲ್ ರಸ್ತೆ, ಲಕ್ಷ್ಮೀ ಚಿತ್ರಮಂದಿರದ ಮುಂಭಾಗ, ಹೊಸಮನೆ ಚಾನಲ್ ಏರಿಯಾ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ತಿಳಿಸಿದೆ.