ಶಿವಮೊಗ್ಗ : ಮಹಾನಗರಪಾಲಿಕೆ ಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ ಚುನಾವಣೆ ( Shivamogga Mayor- Deputy Mayor Election ) ನಡೆಸಲು ಸೆಪ್ಟೆಂಬರ್ 13 ರ ಅಪರಾಹ್ನ 3 ಗಂಟೆಗೆ ಮಹಾನಗರಪಾಲಿಕೆಯ ಚುನಾವಣಾ ಸಭೆಯನ್ನು ಮಹಾನಗರಪಾಲಿಕೆಯ ಸಭಾಂಗಣದಲ್ಲಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ.
BIGG NEWS : ಗುಜರಾತ್ನ ಅರಾವಳಿಯಲ್ಲಿ ಸಂಭವಿಸಿದ ಕಾರು ಅಪಘಾತಕ್ಕೆ ʻ ಸಂತಾಪ ಸೂಚಿಸಿದ ಪ್ರಧಾನಿ ಮೋದಿ ʼ
ಚುನಾವಣಾ ವೇಳಾಪಟ್ಟಿ: ದಿನಾಂಕ: 13-09-2022 ರಂದು ಮಧ್ಯಾಹ್ನ 12 ಗಂಟೆಯಿಂದ 01 ಗಂಟೆ ಒಳಗೆ ಮಹಾಪೌರ ಹಾಗೂ ಉಪ ಮಹಾಪೌರರ ನಾಮಪತ್ರಗಳನ್ನು ಸ್ವೀಕರಿಸುವುದು. ಮಧ್ಯಾಹ್ನ 3 ಗಂಟೆಗೆ ಸಭೆ ಪ್ರಾರಂಭಗೊಳ್ಳುವುದು. ಮಧ್ಯಾಹ್ನ 3 ಗಂಟೆಯ ನಂತರ ಮಹಾಪೌರ, ಉಪಮಹಾಪೌರ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ನಡೆಯುವುದು ಎಂದು ಅಮ್ಲಾನ್ ಆದಿತ್ಯ ಬಿಸ್ವಾಸ್, ಅಧ್ಯಕ್ಷಾಧಿಕಾರಿಗಳು, ಶಿವಮೊಗ್ಗ ಮಹಾನಗರಪಾಲಿಕೆ (ಚುನಾವಣೆ) ಹಾಗೂ ಪ್ರಾದೇಶಿಕ ಆಯುಕ್ತರು ಬೆಂಗಳೂರು ವಿಭಾಗ, ಬೆಂಗಳೂರು ಇವರು ತಿಳಿಸಿದ್ದಾರೆ.