ಶಿವಮೊಗ್ಗ: ಶಿಮುಲ್ ಅಧ್ಯಕ್ಷ ಸ್ಥಾನಕ್ಕಾಗಿ ಜನವರಿ 1ರಂದು ನಡೆದಿದ್ದಂತ ಚುನಾವಣೆಯನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠವು ರದ್ದುಗೊಳಿಸಿತ್ತು. ಆದ್ರೇ ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಈ ಬಗ್ಗೆ ಅರ್ಜಿಯ ವಿಚಾರಣೆ ನಡೆಸಿದಂತ ಹೈಕೋರ್ಟ್ ದ್ವಿಸದಸ್ಯ ಪೀಠವು ಏಕಸದಸ್ಯ ಪೀಠದ ಆದೇಶವನ್ನು ರದ್ದುಗೊಳಿಸಿದೆ. ಹೀಗಾಗಿ ಶಿಮುಲ್ ಅಧ್ಯಕ್ಷರಾಗಿ ಮೂರು ತಿಂಗಳ ಬಳಿಕ ಎನ್ ಹೆಚ್ ಶ್ರೀಪಾದ ರಾವ್ ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಶಿಮುಲ್ ಚುನಾವಣೆ ಸಂಬಂಧ ಹೈಕೋರ್ಟ್ ಗೆ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಸಂಬಂಧ ಅರ್ಜಿಯ ವಿಚಾರಣೆಯನ್ನು ಕಳೆದ ಏಪ್ರಿಲ್ ನಲ್ಲಿ ನ್ಯಾಯಮೂರ್ತಿ ಆರ್ ದೇವದಾಸ್ ಅವರನ್ನು ಒಳಗೊಂಡಂತ ಏಕ ಸದಸ್ಯ ಪೀಠವು, ಚುನಾವಣೆಯನ್ನು ರದ್ದುಗೊಳಿಸಿ ಆದೇಶಿತ್ತು. ಈ ಹಿನ್ನಲೆಯಲ್ಲಿ ಹೈಕೋರ್ಟ್ ಆದೇಶದ ಹಿನ್ನಲೆಯ ಅಧ್ಯಕ್ಷರಾಗಿ ಹೆಚ್ ಕೆ ಬಸಪ್ಪ ಅಧಿಕಾರ ವಹಿಸಿಕೊಂಡಿದ್ದರು.
ಶಿವಮೊಗ್ಗ: ‘ಸಿಟಿ ಕೋ-ಆಪರೇಟಿವ್ ಬ್ಯಾಂಕ್’ಗೆ 85.32 ಲಕ್ಷ ರೂ ನಿವ್ವಳ ಲಾಭ
ಹೈಕೋರ್ಟ್ ನ ಈ ಆದೇಶವನ್ನು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಂತ ಎನ್ ಹೆಚ್ ಶ್ರೀಪಾದ ರಾವ್ ಅವರು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದಂತ ಹೈಕೋರ್ಟ್ ನ ದ್ವಿಸದಸ್ಯ ನ್ಯಾಯಪೀಠವು, ಏಕಸದಸ್ಯ ಪೀಠ ನೀಡಿದ್ದಂತ ಆದೇಶವನ್ನು ರದ್ದು ಪಡಿಸಿತ್ತು. ಈ ಹಿನ್ನಲೆಯಲ್ಲಿ ಈಗ ಮತ್ತೆ ಜನವರಿ 1ರಂದು ಶಿಮುಲ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಂತ ಎನ್ ಹೆಚ್ ಶ್ರೀಪಾದ ರಾವ್ ಅವರು, ಶಿಮುಲ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಕಲಾಂಬ್ ಬೀಚ್ನಲ್ಲಿ ಈಜಲು ಹೋಗಿ ನೀರು ಪಾಲಾದ ಯುವಕ, ಸ್ಥಳೀಯರಿಂದ ಇಬ್ಬರ ರಕ್ಷಣೆ