ಶಿವಮೊಗ್ಗ: ಮೊಸರಳ್ಳಿ- ಭದ್ರಾವತಿ ನಡುವಿನ ಶಿವನಿ ಕ್ರಾಸ್ ಬಳಿ ರೈಲ್ವೆ ಕ್ರಾಸಿಂಗ್ ಗೇಟ್ ( Railway Crossing ) ಸಂಖ್ಯೆ 30 ಅನ್ನು ತಾಂತ್ರಿಕ ಕಾರಣಕ್ಕಾಗಿ ಮಂಗಳವಾರ ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ಮುಚ್ಚಿ ಜಿಲ್ಲಾಧಿಕಾರಿ ಸೆಲ್ವಮಣಿ ( DC Dr Selvamani ) ಆದೇಶಿಸಿದ್ದಾರೆ.
ಈ ಅವಧಿಯಲ್ಲಿ ವಾಹನ ಸವಾರರು ಮಾರುತಿ ನಗರದಲ್ಲಿರುವ ಲೆವೆಲ್ ಕ್ರಾಸ್ ಸಂಖ್ಯೆ 29 ರ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಶಬರಿಮಲೆಗೆ ತೆರಳೋ ಭಕ್ತರಿಗೆ ಗುಡ್ ನ್ಯೂಸ್: ಬೆಳಗಾವಿಯಿಂದ ಕೊಲ್ಲಂಗೆ ವಿಶೇಷ ರೈಲುಗಳ ಸಂಚಾರ
ಮಹಿಳಾ ಸಬಲೀಕರಣದ ಜಾಗೃತಿ ಮೂಡಿಸುವ ಕಾರ್ಯಕ್ರಮ
ಶಿವಮೊಗ್ಗ : ಸಾರ್ವಜನಿಕ ಗ್ರಂಥಾಲಯ ಇಲಾಖೆ- ಬೆಂಗಳೂರು, ಜಿಲ್ಲಾ/ನಗರ ಕೇಂದ್ರ ಗ್ರಂಥಾಲಯ- ಶಿವಮೊಗ್ಗ, ರಾಜಾ ರಾಮ್ ಮೋಹನ್ ರಾಯ್ ಗ್ರಂಥಾಲಯ ಪ್ರತಿಷ್ಠಾನ, ಕೊಲ್ಕತ್ತಾ ಇವರುಗಳ ಸಂಯುಕ್ತಾಶ್ರಯದಲ್ಲಿ ಆಧುನಿಕ ಭಾರತದ ಪಿತಾಮಹ ರಾಜಾ ರಾಮ್ ಮೋಹನ್ ರಾಯ್ ಅವರ 250ನೇ ಜನ್ಮ ವಾರ್ಷಿಕೋತ್ಸವದ ನೆನಪಿಗಾಗಿ ದಿ: 15/11/2022ರಂದು ಬೆಳಗ್ಗೆ 11.00ಕ್ಕೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಕೆ.ಬಿ.ಶಾಮಯ್ಯಗೌಡ ರಸ್ತೆ, ಶಿವಮೊಗ್ಗ ಇಲ್ಲಿ ಮಹಿಳಾ ಸಬಲೀಕರಣದ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಗ್ಗೆ 10.30ಕ್ಕೆ ಜಿಲ್ಲಾ/ನಗರ ಕೇಂದ್ರ ಗ್ರಂಥಾಲಯ ಶಿವಮೊಗ್ಗ ಆವರಣದಿಂದ ಜಾಥಾವನ್ನು ಪ್ರಾರಂಭಿಸಿ ಡಿವಿಎಸ್ ವೃತ್ತ, ಮಹಾವೀರ ವೃತ್ತ, ಗೋಪಿ ವೃತ್ತ, ಕಸ್ತೂರಬಾ ಕಾಲೇಜು ಹಾಗೂ ಕಮಲಾ ನೆಹರೂ ಕಾಲೇಜು, ಮಹಾನಗರ ಪಾಲಿಕೆ ರಸ್ತೆ ಮೂಲಕ ಜಿಲ್ಲಾ/ನಗರ ಕೇಂದ್ರ ಗ್ರಂಥಾಲಯದ ಆವರಣದಲ್ಲಿ ಮುಕ್ತಾಯಗೊಳಿಸಲಾಗುವುದು.
ಬಾಡೂಟದಿಂದ ಮತಕ್ಷೇತ್ರಕ್ಕೆ ಮಾಡಿದ ವಂಚನೆ ಜನರು ಮರೆಯಲ್ಲ: ಸಚಿವ ಶ್ರೀರಾಮುಲು ವಿರುದ್ಧ ಡಾ.ಯೋಗೇಶ್ ಬಾಬು ಕಿಡಿ
ಜಾಥಾ ಕಾರ್ಯಕ್ರಮವನ್ನು ಮಹಾನಗರಪಾಲಿಕೆ ಮಹಾಪೌರರಾದ ಎಸ್. ಶಿವಕುಮಾರ್ ಉದ್ಘಾಟಿಸುವರು. ವಿಶೇಷ ಆಹ್ವಾನಿತರಾಗಿ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆರ್., ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ.ಮಿಥುನ್ ಕುಮಾರ್, ಜಿ.ಪಂ. ಸಿಇಓ ಎನ್.ಡಿ. ಪ್ರಕಾಶ, ರಾ.ರಾ.ಮೋ.ರಾ.ಗ್ರ.ಪ್ರತಿಷ್ಠಾನದ ಡೈರೆಕ್ಟರ್ ಆಫ್ ಜನರಲ್ ಪ್ರೊ. ಅಜಯ್ ಪ್ರತಾಪ್ ಸಿಂಗ್ ಉಪಸ್ಥಿತರಿರುವರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಾ.ಶಿ.ಇ ಉಪನಿರ್ದೇಶಕ ಪರಮೇಶ್ವರಪ್ಪ ಸಿ.ಆರ್., ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ಪಿ., ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಉಪಾಧ್ಯಕ್ಷ ಡಾ. ವಿರುಪಾಕ್ಷಪ್ಪ ಹೆಚ್.ಎಸ್, ನಗರ ಕೇಂದ್ರ ಗ್ರಂಥಾಲಯ ಪ್ರಾಧಿಕಾರದ ಸದಸ್ಯರುಗಳಾ ಕುಮಾರ್ ಎಸ್. ಹಾಗೂ ರಾಧಾ ರಾಮಚಂದ್ರ ಇವರುಗಳು ಪಾಲ್ಗೊಳ್ಳುವರು.
ನಿವೃತ್ತ ಮುಖ್ಯ ಗ್ರಂಥಾಲಯಾಧಿಕಾರಿ ಚಂದ್ರೇಗೌಡ ಬಿ. ಇವರಿಂದ ಉಪನ್ಯಾಸ ಏರ್ಪಡಿಸಲಾಗಿದೆ. ಜಿಲ್ಲಾ/ನಗರ ಕೇಂದ್ರ ಗ್ರಂಥಾಲಯ ಪ್ರಾಧಿಕಾರದ ಸರ್ವ ಸದಸ್ಯರು ಮತ್ತು ಸಾರ್ವಜನಿಕ ಓದುಗರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದಾಗಿದೆ.