ಶಿವಮೊಗ್ಗ : ಜಿಲ್ಲೆಯ ಮಹಾನಗರ ಪಾಲಿಕೆ ವ್ಯಾಪ್ತಿ 18 ನೇ ವಾರ್ಡ್ ವಿನೋಬನಗರ ಪೃಥ್ವಿ ಮ್ಯಾನ್ಷನ್ ಎದುರಿನ ಶುಭ ಮಂಗಳ ಮಂಟಪಕ್ಕೆ ಹೋಗುವ ಮುಖ್ಯ ರಸ್ತೆಯ ಅಭಿವಸ್ಥೆಯ ವಿರುದ್ಧ, ಭಾನುವಾರ ಸ್ಥಳೀಯ ನಿವಾಸಿಗಳು ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಆಡಳಿತಗಳ ವಿರುದ್ಧ ಪ್ರತಿಭಟನೆ ನಡೆಸಿದರು.
ಶಿವಮೊಗ್ಗ: ಭದ್ರಾ ಜಲಾಶಯಕ್ಕೆ ಪ್ರವಾಸಿಗರ ದಂಡು, ಕೆಲಕಾಲ ಟ್ರಾಫಿಕ್ ಜಾಮ್
ಮುಖ್ಯ ರಸ್ತೆಯಲ್ಲಿ ಗುಂಡಿ-ಗೊಟರು ಬಿದ್ದಿವೆ. ಜೊತೆಗೆ ಹಲವೆಡೆ ರಸ್ತೆ ಒತ್ತುವರಿಯಾಗಿದೆ. ಪಾದಚಾರಿಗಳ ಹೋರಾಟಕ್ಕೆ ಪುಟ್’ಪಾತ್ ಇಲ್ಲವಾಗಿದೆ. ಇದರಿಂದ ಜನ-ವಾಹನ ಸಂಚಾರ ದುಸ್ತರವಾಗಿದೆ. ಅಪಘಾತಗಳು ಸಂಭವಿಸುತ್ತಿವೆ. ರಸ್ತೆ ಸಮೀಪದಲ್ಲಿಯೇ ಸ್ಮಾರ್ಟ್ ಸಿಟಿವತಿಯಿಂದ ನಡೆಯುತ್ತಿರುವ ಕಾಮಗಾರಿಗಳು ಕೂಡ ಅಪೂರ್ಣವಾಗಿವೆ ಎಂದು ನಿವಾಸಿಗಳು ದೂರಿದ್ದಾರೆ.
BREAKING NEWS: ಚಿತ್ರದುರ್ಗದ ಸ್ವಾಮೀಜಿ, ಶಾಸಕರಿಗೆ ಕೊಲೆ ಬೆದರಿಕೆ: ಚಿಕ್ಕಬಳ್ಳಾಪುರದಲ್ಲಿ ವೈದ್ಯ ಅರೆಸ್ಟ್
ಇಷ್ಟೆಲ್ಲ ಅವ್ಯವಸ್ಥೆಯಿದ್ದರೂ ಕೂಡ ಆಡಳಿತ ನಾಗರೀಕರ ಅಹವಾಲು ಕೇಳುತ್ತಿಲ್ಲ. ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ. ಸಂಪೂರ್ಣ ನಿರ್ಲಕ್ಷವಹಿಸಿದೆ. ಸೋಮವಾರ ಕೂಡ ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ ನಡೆಸಲಾಗುವುದು. ಸ್ಥಳಕ್ಕೆ ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳು ಆಗಮಿಸಬೇಕು ಎಂದು ನಾಗರೀಕರು ಆಗ್ರಹಿಸಿದ್ದಾರೆ.
2023ರ ವಿಧಾನಸಭಾ ಚುನಾವಣೆಯೇ ನನ್ನ ಕೊನೆಯ ಚುನಾವಣೆ – ವಿಪಕ್ಷ ನಾಯಕ ಸಿದ್ಧರಾಮಯ್ಯ ಬಹಿರಂಗವಾಗಿ ಘೋಷಣೆ
ಪ್ರತಿಭಟನೆಯಲ್ಲಿ ಶರತ್, ಚಂದ್ರಶೇಖರ್, ಪುನೀತ್, ರಾಜೇಶ್, ಗಿರೀಶ್, ಶ್ರೀನಿವಾಸ್, ರಮೇಶ್, ರಾಮಣ್ಣ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ವರದಿ: ಬಿ.ರೇಣುಕೇಶ್, ಶಿವಮೊಗ್ಗ