ಶಿವಮೊಗ್ಗ : ತೋಟಗಾರಿಕೆ ಇಲಾಖೆ ಶಿಕಾರಿಪುರ ವತಿಯಿಂದ 2022-23 ನೇ ಸಾಲಿನಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಹಳೆಯ ಮಾವಿನ ತೋಟಗಳ ಮೇಲಾವರಣ ನಿರ್ವಹಣೆ ಕಾರ್ಯವನ್ನು ಕೈಗೊಂಡ ರೈತರಿಗೆ ಸಹಾಯಧನ ನೀಡುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಶಿವಮೊಗ್ಗ: ಡಿ.13ರಂದು ‘ಸಹ್ಯಾದ್ರಿ ಕಲಾ ಕಾಲೇಜಿ’ನಲ್ಲಿ ‘ಉದ್ಯೋಗ ಮೇಳ’ | Job Fair
ಈ ಕಾರ್ಯಕ್ರಮದಡಿ ಮಾವಿನ ಮರಗಳ ನೆಲಕ್ಕೆ ತಾಗುವ ಹಾಗೂ ರೋಗ/ಕೀಟಭಾದಿತ ಅನಗತ್ಯ ರೆಂಬೆ ಟೊಂಗೆಗಳನ್ನು ಕತ್ತರಿಸುವುದು ಮತ್ತು ಮಧ್ಯದ ರೆಂಬೆಯನ್ನು ತೆಗೆದು ಸೂರ್ಯನ ಕಿರಣಗಳು ಎಲ್ಲಾ ಭಾಗಗಳಿಗೂ ಬೀಳುವಂತೆ ಮಾಡುವುದು. ಸದರಿ ಕಾರ್ಯವನ್ನು ಕೈಗೊಳ್ಳುವ ರೈತರಿಗೆ ಮಾರ್ಗಸೂಚಿಯನ್ವಯ ರೂ, 4000/- / ಪ್ರತಿ ಎಕರೆಗೆ (ಗರಿಷ್ಠ 5 ಎಕರೆವರೆಗೆ) ಸಹಾಯಧನ ನೀಡಲಾಗುವುದು. ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು ಪಹಣಿ, ಆಧಾರ ಕಾರ್ಡ್, ಬ್ಯಾಂಕ್ ಪಾಸ ಬುಕ್ ಜೆರಾಕ್ಸ್, ಔಷಧಿ ಖರೀದಿಸಿದ ಬಿಲ್ಲುಗಳನ್ನು ಸಲ್ಲಿಸಬೇಕು.
ವರುಣಾ ಕ್ಷೇತ್ರದಲ್ಲಿ ಮಗನ ಕೆಲಸಕ್ಕೆ ಶಹಬ್ಬಾಶ್ ಗಿರಿ ಕೊಟ್ಟ ಮಾಜಿ ಸಿಎಂ ಸಿದ್ಧರಾಮಯ್ಯ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26.12.2022 ಆಗಿರುತ್ತದೆ. ಆಸ್ತಕ್ತ ರೈತರು ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಹಾಗೂ ತೋಟಗಾರಿಕೆ ಇಲಾಖೆ, ಶಿಕಾರಿಪುರ ಕಛೇರಿಯನ್ನು ಸಂಪರ್ಕಿಸಿ ಹೆಸರನ್ನು ನೊಂದಾಯಿಸಲು ಕೋರಿದೆ. ಅನುದಾನ ಲಭ್ಯತೆ ಹಾಗೂ ಜೇಷ್ಠತೆ ಅನುಸಾರ ಸಹಾಯಧನ ಒದಗಿಸಲಾಗುವುದು ಎಂದು ಶಿಕಾರಿಪುರ ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.