ಶಿವಮೊಗ್ಗ : ಜಿಲ್ಲೆಯಲ್ಲಿ ಅಡಿಕೆ ಮರಗಳಿಗೆ ಕಂಡು ಬಂದಿರುವ ಎಲೆಚುಕ್ಕಿ ರೋಗ ನಿಯಂತ್ರಣಕ್ಕಾಗಿ ರೈತರಿಗೆ ಉಚಿತವಾಗಿ ಔಷಧಿ ವಿತರಿಸಲು ಈಗಾಗಲೇ 1.5ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದ್ದು, ಅಡಿಕೆ ಬೆಳೆಗಾರರಿಗೆ ಎಲ್ಲಾ ನೆರವು ಒದಗಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
BIGG NEWS: ಬಿಜೆಪಿ ಇತಿಹಾಸದಲ್ಲೇ ರಾಜಕೀಯ ಹುನ್ನಾರ ಮಾಡಿಲ್ಲ; ಕಾಂಗ್ರೆಸ್ ಗೆ ಸುಧಾಕರ್ ತಿರುಗೇಟು
ಅವರು ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ಹಾಗೂ ಕೆಡಿಪಿ ಸಭೆಯಲ್ಲಿ ಮಾತನಾಡಿ, ಎಲೆಚುಕ್ಕಿ ರೋಗದಿಂದಾಗಿ ಆಗುಂಬೆ ಹಾಗೂ ನಗರ ಹೋಬಳಿಗಳಲ್ಲಿ ಸುಮಾರು 6395 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ತೋಟಗಳಿಗೆ ಹಾನಿ ಉಂಟಾಗಿದೆ. ಈ ರೋಗದಿಂದಾಗಿ ಶೇ.20ರಿಂದ 25ರಷ್ಟು ಇಳುವರಿ ಹಾಗೂ ಮರಗಳಿಗೆ ಹಾನಿ ಉಂಟಾಗಿದ್ದು, ರೋಗ ನಿಯಂತ್ರಣಕ್ಕೆ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ಈ ಕುರಿತು ಸಮೀಕ್ಷೆ ನಡೆಸಲು ಕೇಂದ್ರ ತಂಡ ಸಧ್ಯದಲ್ಲಿಯೇ ಜಿಲ್ಲೆಗೆ ಭೇಟಿ ನೀಡಲಿದೆ ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಜಿ.ಎನ್.ಪ್ರಕಾಶ್ ಅವರು ಮಾಹಿತಿ ನೀಡಿದರು.
ಶಿವಮೊಗ್ಗ 250 ಹೆಕ್ಟೇರ್, ಭದ್ರಾವತಿ 87 ಹೆಕ್ಟೇರ್, ಶಿಕಾರಿಪುರ 188 ಹೆಕ್ಟೇರ್, ಸೊರಬ 200 ಹೆಕ್ಟೇರ್, ಸಾಗರ 1820 ಹೆಕ್ಟೇರ್, ಹೊಸನಗರ 1850 ಹೆಕ್ಟೇರ್, ಹಾಗೂ ತೀರ್ಥಹಳ್ಳಿಯಲ್ಲಿ 2ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಎಲೆಚುಕ್ಕಿ ರೋಗ ಕಂಡು ಬಂದಿದ್ದು, ಜಿಲ್ಲೆಗೆ ಸರ್ಕಾರ ಪ್ರಥಮ ಹಂತದಲ್ಲಿ 1.21 ಕೋಟಿ ರೂ. ಅನುದಾನ ಬಿಡುಗಡೆಗೆ ಮಂಜೂರಾತಿ ನೀಡಿದೆ ಎಂದು ಹೇಳಿದರು.
BIG BREAKING NEWS: ರಾಜ್ಯ ಸರ್ಕಾರದಿಂದ ಎಲ್ಲಾ ನೇರ ನೇಮಕಾತಿ, ಮುಂಬಡ್ತಿಗೆ ತಡೆ
ಚರ್ಮಗಂಟು ರೋಗ ನಿಯಂತ್ರಣ: ಜಿಲ್ಲೆಯ ಶಿಕಾರಿಪುರ ಹಾಗೂ ಸೊರಬ ಭಾಗದಲ್ಲಿ ಕಾಣಿಸಿಕೊಂಡಿದ್ದ ಜಾನುವಾರುಗಳ ಚರ್ಮಗಂಟು ರೋಗ ಬಹುತೇಕ ನಿಯಂತ್ರಣದಲ್ಲಿದೆ ಎಂದು ಪಶುಪಾಲನಾ ಇಲಾಖೆ ಉಪನಿರ್ದೇಶಕ ಶಿವಯೋಗಿ ಎಲಿ ಅವರು ತಿಳಿಸಿದರು.
ಚರ್ಮಗಂಟು ರೋಗದಿಂದಾಗಿ ಸುಮಾರು 100 ಜಾನುವಾರುಗಳು ಸಾವಿಗೀಡಾಗಿದ್ದು, ಜಾನುವಾರುಗಳ ಸಾಗಾಣಿಕೆ ಹಾಗೂ ಜಾತ್ರೆಯನ್ನು ನಿರ್ಬಂಧಿಸಿದ ಕಾರಣ ರೋಗ ಹತೋಟಿಗೆ ಬಂದಿದೆ. ಕಾಲುಬಾಯಿ ರೋಗ ಲಸಿಕೆ ಅಭಿಯಾನ ಜಿಲ್ಲೆಯಲ್ಲಿ ಡಿಸೆಂಬರ್ 7ರವರೆಗೆ ನಡೆಯಲಿದೆ ಎಂದು ಅವರು ಹೇಳಿದರು.
ಗೋ ಶಾಲೆ ನಿರ್ಮಾಣ: ಜಿಲ್ಲೆಗೊಂದು ಗೋಶಾಲೆ ಯೋಜನೆಯಡಿ ಜಿಲ್ಲೆಗೆ 1 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಈಗಾಗಲೇ 34 ಲಕ್ಷ ರೂ. ವೆಚ್ಚದಲ್ಲಿ ಶೆಡ್ ಮತ್ತು ಶೆಲ್ಟರ್ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ಈ ಗೋಶಾಲೆಯಲ್ಲಿ 100 ಗೋವುಗಳಿಗೆ ವ್ಯವಸ್ಥೆ ಕಲ್ಪಿಸಲಾಗುವುದು. ಇನ್ನುಳಿದಂತೆ ಜಿಲ್ಲೆಯಲ್ಲಿ 12ಗೋಶಾಲೆಗಳಿದ್ದು, 7ಗೋಶಾಲೆಗಳಿಗೆ ಸಬ್ಸಿಡಿಯನ್ನು ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು.
ಶಿವಮೊಗ್ಗ: ಕೋಣಂದೂರು ಪ್ರಾಥಮಿಕ ಆರೋಗ್ಯ ಕೇಂದ್ರ, 30 ಹಾಸಿಗೆ ಮಾದರಿ ಸಮುದಾಯ ಆರೋಗ್ಯ ಕೇಂದ್ರವಾಗಿ ಉನ್ನತಿ
ಜಲಜೀವನ್ ಮಿಷನ್: ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಮನೆಗೆ ಕುಡಿಯುವ ನೀರು ಸಂಪರ್ಕ ಕಲ್ಪಿಸುವ ಜಲ ಜೀವನ್ ಮಿಷನ್ ಯೋಜನೆಯಡಿ ಎಲ್ಲಾ ಟೆಂಡರ್ ಪ್ರಕ್ರಿಯೆಗಳನ್ನು ಡಿಸೆಂಬರ್ ಅಂತ್ಯದ ಒಳಗಾಗಿ ಪೂರ್ಣಗೊಳಿಸಿ ಕಾಮಗಾರಿಯನ್ನು ಆರಂಭಿಸುವಂತೆ ಸೆಲ್ವಕುಮಾರ್ ಅವರು ಸೂಚನೆ ನೀಡಿದರು.
ಯೋಜನೆಯ ಪ್ರಥಮ ಹಂತದಲ್ಲಿ 613 ಕಾಮಗಾರಿಗಳಿಗೆ 146ಕೋಟಿ ರೂ. ಮಂಜೂರಾಗಿದ್ದು, 609 ಕಾಮಗಾರಿಗಳು ಪೂರ್ಣಗೊಂಡಿವೆ. ಎರಡನೇ ಹಂತದಲ್ಲಿ 268 ಕಾಮಗಾರಿಗಳಿಗೆ 136 ಕೋಟಿ ರೂ. ಮಂಜೂರಾಗಿದ್ದು, 122 ಕಾಮಗಾರಿಗಳು ಪೂರ್ಣಗೊಂಡಿವೆ. ಮೂರನೇ ಹಂತದಲ್ಲಿ 1126 ಕಾಮಗಾರಿಗಳಿಗೆ 422 ಕೋಟಿ ರೂ. ಮಂಜೂರಾಗಿದ್ದು 44 ಕಾಮಗಾರಿಗಳು ಪೂರ್ಣಗೊಂಡಿವೆ. ನಾಲ್ಕನೇ ಹಂತದಲ್ಲಿ 525 ಕಾಮಗಾರಿಗಳಿಗೆ 295 ಕೋಟಿ ರೂ. ಮಂಜೂರಾಗಿದ್ದು, ಅಂದಾಜು ಪಟ್ಟಿಯನ್ನು ತಯಾರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಪಡಿತರ ಕಾರ್ಡು ವಿತರಿಸಿ: ಎಪಿಎಲ್ ಕಾರ್ಡಿಗೆ ಸಲ್ಲಿಸಿರುವ 662 ಅಜೀಗಳನ್ನು ತಕ್ಷಣ ವಿಲೇವಾರಿ ಮಾಡುವಂತೆ ಸೆಲ್ವಕುಮಾರ್ ಅವರು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಡಿ.ಪ್ರಕಾಶ್, ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ, ಎಲ್ಲಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.