ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವಂತ ಭಾರೀ ಮಳೆಯಿಂದಾಗಿ ( Heavy Rain ) ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಧಾರಾಕಾರ ಮಳೆಯಿಂದಾಗಿ ಸೊರಬ ತಾಲೂಕಿನಲ್ಲಿ 94 ಮನೆಗಳು ಹಾನಿಗೊಂಡಿವೆ.
ಈ ಬಗ್ಗೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ತಾಲೂಕು ಆಡಳಿತದಿಂದ ಮಾಹಿತಿ ಬಿಡುಗಡೆ ಮಾಡಿದ್ದು, 2022-23ನೇ ಜೂನ್ ತಿಂಗಳಿನಿಂದ ಮಳೆಯಿಂದಾಗಿ ದಿನಾಂಕ 14-07-2022ರವರೆಗೆ ಕೊಸಬಾ ಹೋಬಳಿಯಲ್ಲಿ 6 ಮನೆಗಳು ತೀವ್ರ ಹಾನಿಗೊಂಡರೇ, 8 ಮನೆಗಳು ಭಾಗಶಃ ಹಾನಿಗೊಂಡಿದ್ದಾವೆ ಎಂದು ತಿಳಿಸಿದೆ.
BREAKING NEWS: ಮಾನವ ಕಳ್ಳಸಾಗಣೆ ಪ್ರಕರಣ: ಗಾಯಕ ದಲೇರ್ ಮೆಹಂದಿಗೆ 2 ವರ್ಷ ಜೈಲು ಶಿಕ್ಷೆ | Singer Daler Mehndi
ಕುಪ್ಪಗಡ್ಡೆ ಹೋಬಳಿಯಲ್ಲಿ ತೀವ್ರವಾಗಿ 3, ಭಾಗಶಃ 12 ಸೇರಿದಂತೆ 15 ಮನೆಗಳು ಹಾನಿಯಾಗಿವೆ. ಉಳವಿ ಹೋಬಳಿಯಲ್ಲಿ ತೀವ್ರ ಹಾನಿಗೊಂಡ ಮನೆ 1, ಭಾಗಶಃ 5 ಮನೆಗಳು ಹಾನಿಗೊಂಡಿದ್ದಾವೆ. ಆನವಟ್ಟಿ ಹೋಬಳಿಯಲ್ಲಿ 9 ಮನೆಗಳು ತೀವ್ರ ಹಾನಿಗೊಂಡಿದ್ದರೇ, 17 ಮನೆಗಳು ಭಾಗಶಃ ಹಾನಿಗೊಂಡಿವೆ ಎಂದು ಹೇಳಿದೆ.
ಜಡೆ ಹೋಬಳಿಯಲ್ಲಿ 4 ತೀವ್ರಹಾನಿ, 24 ಭಾಗಶಃ ಹಾನಿ ಹಾಗೂ ಚಂದ್ರಗುತ್ತಿ ಹೋಬಳಿಯಲ್ಲಿ 2 ಭಾಗಶಃ ಹಾನಿಗೊಂಡಿರುವ ಮನೆ ಸೇರಿದಂತೆ ಒಟ್ಟು ಸೊರಬ ತಾಲೂಕಿನಲ್ಲಿ 24 ಮನೆಗಳು ತೀವ್ರಹಾನಿ, 68 ಭಾಗಶಃ ಹಾನಿ ಸೇರಿದಂತೆ 94 ಮನೆಗಳು ಹಾನಿಕೊಂಡಿರೋದಾಗಿ ವರದಿಯಲ್ಲಿ ತಿಳಿಸಿದೆ.
BREAKING NEWS: ಸ್ಯಾಂಡಲ್ ವುಡ್ ಹಿರಿಯ ನಟ ಅನಂತ್ ನಾಗ್ ಸೇರಿ ಮೂವರಿಗೆ ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್