ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಗಾಂಜಾ ಸಾಗಣೆ ಮಾಡಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದಂತ ಮೂವರು ಆರೋಪಿಗಳಿಗೆ 1 ವರ್ಷ ಕಠಿಣ ಸಜೆ ಹಾಗೂ ತಲಾ 10 ಸಾವಿರ ರೂ ದಂಡೆವನ್ನು ಕೋರ್ಟ್ ವಿಧಿಸಿದೆ.
ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಬಹುಭಾಷಾ ನಟಿ ‘ಹನ್ಸಿಕಾ ಮೋಟ್ವಾನಿ’…ಹುಡುಗ ಯಾರು ಗೊತ್ತಾ..?
ದಿನಾಂಕ 30-05-2016ರಂದು ಆಗುಂಬೆ ಪೊಲೀಸ್ ಠಾಣೆಯ ಠಾಣಾಧಿಕಾರಿ ಸಬ್ ಇನ್ಸ್ ಪೆಕ್ಟರ್ ಇ ಓ ಮಂಜುನಆಥ್ ಅವರಿಗೆ ಶಿವಮೊಗ್ಗದಿಂದ ತೀರ್ಥಹಳ್ಳಿ, ಆಗುಂಬೆ ಮೂಲಕ ಮಂಗಳೂರಿಗೆ ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿರುವಂತ ಖಚಿತ ಮಾಹಿತಿ ಬಂದಿತ್ತು. ಕೂಡಲೇ ಕಾರ್ಯಪ್ರವೃತ್ತರಾದಂತ ಆಗುಂಬೆ ಪಿಎಸ್ಐ ಮತ್ತು ಸಿಬ್ಬಂದಿಗಳು ಆಗುಂಬೆ ಅರಣ್ಯ ತಪಾಸಣಾ ಚೆಕ್ ಪೋಸ್ಟ್ ಬಳಿಯಲ್ಲಿ ವಾಹನ ತಡೆದು ಪರಿಶೀಲನೆ ನಡೆಸುತ್ತಿದ್ದಾಗ ಕಾರಿನಲ್ಲಿ 750 ಗ್ರಾಂ ಗಾಂಜಾ ಸಾಗಿಸುತ್ತಿದ್ದದ್ದು ಪತ್ತೆಯಾಗಿತ್ತು.
ಅಪ್ಪು ಬಗ್ಗೆ ಅವಹೇಳನ ಮಾಡಿದವನ ಸ್ಥಿತಿ ಏನಾಯ್ತು ಗೊತ್ತಾ? ಈ ಸುದ್ದಿ ಓದಿ.! | Puneeth Rajkumar
ಈ ಸಂಬಂಧ ಆರೋಪಿಗಳಾದಂತ ಬಸವರಾಜ ನಾಯ್ಕ, ಅನೀಶ್ ಹಾಗೂ ಗಜೇಂದ್ರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ತೀರ್ಥಹಳ್ಳಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಸಲಾಗಿತ್ತು.
ಇಂದು ತೀರ್ಥಹಳ್ಳಿ ಹಿರಿಯ ವ್ಯವಹಾರ ನ್ಯಾಯಾಲಯ (ಸಿಜೆ) ಮತ್ತು ಜೆಎಂಎಫ್ ಸಿ ನ್ಯಾಯಲಯದ ನ್ಯಾಯಾಧೀಶರಾದ ಭರತ್. ಎಸ್. ಎಸ್ ಅವರು, ಮೂವರು ಆರೋಪಿಗಳು ತಪ್ಪಿತಸ್ಥರೆಂದು ತೀರ್ಪು ಪ್ರಕಟಿಸಿದರು. ಅಲ್ಲದೇ ಮೂವರು ಆರೋಪಿಗಳಿಗೆ 1 ವರ್ಷ ಕಠಿಣ ಶಿಕ್ಷೆ ಮತ್ತು ತಲಾ 10 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ. ದಂಡ ಕಟ್ಟೋದಕ್ಕೆ ತಪ್ಪಿದರೇ ಹೆಚ್ಚುವರಿಯಾಗಿ 6 ತಿಂಗಳ ಕಠಿಣ ಶಿಕ್ಷೆಯನ್ನು ವಿಧಿಸಿದ್ದಾರೆ.
ವರದಿ: ಲಿಯೋ ಅರೋಜ, ತೀರ್ಥಹಳ್ಳಿ