ಶಿವಮೊಗ್ಗ : ಶಿಕಾರಿಪುರ ವಲಯದ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಜ್ ಕಚೇರಿಯ ವಾಹನ ಚಾಲಕರಾದ ಸೋಮೇಶ್ವರ ಕೆ.ಎ ಅವರು ದಿ:26/8/2024 ರಿಂದ ಅನಧಿಕೃತವಾಗಿ ಗೈರು ಹಾಜರಾಗಿದ್ದು, ಸೇವೆಯಿಂದ ಅಮಾನತ್ತು ಮಾಡಿ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಜ್ ಆದೇಶ ಹೊರಡಿಸಿದ್ದಾರೆ.
ಸೋಮೇಶ್ವರ್ ಕೆ.ಎ ಅವರಿಗೆ ಗೈರು ಹಾಜರಾದ ಕಾರಣ ಕೇಳಿ ಕಚೇರಿಯಿಂದ ಅಂತಿಮ ನೋಟಿಸ್ ನೀಡಲಾಗಿತ್ತು ಹಾಗೂ ಅವರ ವಾಸ ಸ್ಥಳವಾದ ಶಿವಮೊಗ್ಗ ನಗರದ ವಿನೋಬನಗರದ ವಿಳಾಸಕ್ಕೆ ತೆರಳಿ ಮನೆಯ ಮಾಲೀಕರಿಗೆ ಹಾಗೂ ನೆರೆಹೊರೆಯವರನ್ನು ವಿಚಾರಿಸಿದಾಗ ಆ ಸ್ಥಳದಲ್ಲಿ ವಾಸವಿರುವುದಿಲ್ಲ ಎಂದು ತಿಳಿದು ಬಂದಿದ್ದು, ಕೂಡಲೇ ಸ್ಥಳ ಮಜರ್ ಮಾಡಿ 15-7-2025 ರಂದು ಶಿಕಾರಿಪುರ ವಲಯದ ಅಬಕಾರಿ ನಿರೀಕ್ಷಕರಿಗೆ ವರದಿಯನ್ನು ಸಲ್ಲಿಸಲಾಗಿದೆ.
ವರದಿ ಆಧಾರದಿಂದ ಸೋಮೇಶ್ವರ ಅವರನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದ್ದು, ಈ ಪ್ರಕಟಣೆ ಹೊರಡಿಸಿದ 15 ದಿನದೊಳಗೆ ಕಚೇರಿ ಹಾಜರಾಗಿ, ಗೈರು ಹಾಜರಾಗಿದ್ದಕ್ಕೆ ಸೂಕ್ತ ವಿವರಣೆ ಸಲ್ಲಿಸಬೇಕು. ತಪ್ಪಿದಲ್ಲಿ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು-1957 ರ ನಿಯಮಗಳಡಿಯಲ್ಲಿ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುತ್ತದೆ ಎಂದು ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಜ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 
		



 




