ಢಾಕಾ (ಬಾಂಗ್ಲಾದೇಶ): ರಷ್ಯಾ-ಉಕ್ರೇನ್ ಸಂಘರ್ಷದ ನಂತರ ಪೂರ್ವ ಯೂರೋಪ್ನಲ್ಲಿ ಸಿಲುಕಿದ್ದ ತನ್ನ ದೇಶದ ವಿದ್ಯಾರ್ಥಿಗಳನ್ನು ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿ(PM Modi) ನೇತೃತ್ವದ ಉಪಕ್ರಮವನ್ನು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ(Sheikh Hasina) ಶ್ಲಾಘಿಸಿದ್ದಾರೆ.
ಸೋಮವಾರ ಭಾರತಕ್ಕೆ ಭೇಟಿ ನೀಡಲಿರುವ ಪ್ರಧಾನಿ ಹಸೀನಾ ಮಾಧ್ಯಮಗಳೊಂದಿಗೆ ಮಾತನಾಡಿದ ಸಂದರ್ಭದಲ್ಲಿ, ರಷ್ಯಾ-ಉಕ್ರೇನ್ ಯುದ್ದದ ಸಂದರ್ಭದಲ್ಲಿ ಸಿಲುಕಿಕೊಂಡ ಭಾರತೀಯ ವಿದ್ಯಾರ್ಥಿಗಳ ಜೊತೆ ಬಾಂಗ್ಲಾದೇಶದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದೀರಿ ಹಾಗೂ ಸಾಂಕ್ರಾಮಿಕ ರೋಗ ಉಲ್ಬಣಗೊಂಡಾಗ ತನ್ನ ಲಸಿಕೆ ಮೈತ್ರಿ ಕಾರ್ಯಕ್ರಮದ ಅಡಿಯಲ್ಲಿ ನೆರೆಯ ದೇಶಗಳಿಗೆ ಕೋವಿಡ್ -19 ಲಸಿಕೆಗಳನ್ನು ಒದಗಿಸಿದ ಮೋದಿ ಸರ್ಕಾರದ ಇಂಗಿತವನ್ನು ಪ್ರಶಂಸಿಸಿದ್ದಾರೆ.
BIGG NEWS : 11 ವರ್ಷಗಳಿಂದ ಸ್ಪೋಟಕ ಪತ್ತೆ ಕರ್ತವ್ಯ ನಿರ್ವಹಿಸುತ್ತಿದ್ದ `ಗೀತಾ’ ಇನ್ನಿಲ್ಲ
BIG NEWS: ಪಾಕಿಸ್ತಾನದಲ್ಲಿ ಭೀಕರ ಪ್ರವಾಹಕ್ಕೆ 1,300 ಮಂದಿ ಬಲಿ: ವರದಿ