Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಮುಂಬೈ ಕುಟುಂಬದ ಸಾವಿನ ಪ್ರಕರಣಕ್ಕೆ ಆಘಾತಕಾರಿ ತಿರುವು: ಇದು ಕಲ್ಲಂಗಡಿ ಹಣ್ಣಿನ ಅಡ್ಡಪರಿಣಾಮವಲ್ಲ, ‘ಇಲಿ ಪಾಷಾಣ’ದ ವಿಷ!

ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ಡಿಎಂಕೆ! ವಿಜಯ್ ಪಕ್ಷಕ್ಕೆ ಬೆಂಬಲ ನೀಡಿದ್ದಕ್ಕೆ ಅಧಿಕೃತವಾಗಿ ‘ಖಂಡನಾ ನಿರ್ಣಯ’ ಅಂಗೀಕಾರ

ಕ್ರಿಕೆಟಿಗ ಸೂರ್ಯಕುಮಾರ್ ಯಾದವ್‌ – ದೆವಿಶಾ ಶೆಟ್ಟಿ ದಂಪತಿಗೆ ಹೆಣ್ಣು ಮಗು ಜನನ | Suryakumar Yadav

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 10,000 ಲಂಚ ಸ್ವೀಕಾರದ ವೇಳೆ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದ ಶಿವಮೊಗ್ಗ ಮಹಾನಗರ ಪಾಲಿಕೆ ಅಧಿಕಾರಿ ಶಶಿಧರ
KARNATAKA

10,000 ಲಂಚ ಸ್ವೀಕಾರದ ವೇಳೆ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದ ಶಿವಮೊಗ್ಗ ಮಹಾನಗರ ಪಾಲಿಕೆ ಅಧಿಕಾರಿ ಶಶಿಧರ

By kannadanewsnow09

ಶಿವಮೊಗ್ಗ: ಖರೀದಿಸಿದಂತ ಮನೆಯನ್ನು ತನ್ನ ಹೆಸರಿಗೆ ಖಾತೆ ಮಾಡಿಕೊಡೋದಕ್ಕೆ ಶಿವಮೊಗ್ಗ ಮಹಾನಗರ ಪಾಲಿಕೆ ಅಧಿಕಾರಿ ಶಶಿಧರ 10,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇಂದು ಲಂಚ ಸ್ವೀಕಾರದ ವೇಳೆಯಲ್ಲೇ ಶಿವಮೊಗ್ಗ ಮಹಾನಗರ ಪಾಲಿಕೆಯ ಆಶ್ರಯ ವಿಭಾಗದ ಸಮುದಾಯ ಸಂಘಟನಾಧಿಕಾರಿ ಶಶಿಧರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಈ ಕುರಿತಂತೆ ಕರ್ನಾಟಕ ಲೋಕಾಯುಕ್ತದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಪಿರಾದುದಾರರಾದ ಮೊಹ್ಮದ್ ಆಸೀಫ್ ಉಲ್ಲಾ ತಂದೆ ಅಬ್ದುಲ್ ಮಜೀದ್ ಟೈಲ್ಸ್ ಕೆಲಸ, ವಾಸ: ಆಶ್ರಯ ಬಡಾವಣೆ, ಬೊಮ್ಮನಕಟ್ಟೆ, ಶಿವಮೊಗ್ಗ ರವರು ಶಿವಮೊಗ್ಗ ನಗರದ ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಮನೆಯನ್ನು ಅಮ್ಯಾದ್ ಅಲಿ ರವರಿಂದ ಖರೀದಿಸಿದ್ದು, ಸದರಿ ಮನೆಯನ್ನು ತನ್ನ ಹೆಸರಿಗೆ ಖಾತೆ ಮಾಡಿಕೊಡಲು ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಅರ್ಜಿ ಸಲ್ಲಿಸಿರುತ್ತಾರೆ. ಈ ವಿಚಾರವಾಗಿ ಶಿವಮೊಗ್ಗ ಮಹಾನಗರ ಪಾಲಿಕೆಯ ಆಶ್ರಯ ವಿಭಾಗದ ಸಮುದಾಯ ಸಂಘಟನಾಧಿಕಾರಿಯಾದ ಶಶಿಧರ ರವರನ್ನು ಭೇಟಿ ಮಾಡಿ ವಿಚಾರಿಸಿದಾಗ, ಸದರಿಯವರು ಸ್ಥಳ ಮಹಜರ ನಡೆಸಿ, ದಾಖಲಾತಿಗಳನ್ನು ಪರಿಶೀಲನೆ ಮಾಡುವುದಾಗಿ ತಿಳಿಸಿ, ಪಿದ್ಯಾದಿ ಹೆಸರಿಗೆ ಖಾತೆ ಮಾಡಿಕೊಡಲು 10,000/-ರೂಗಳ ಲಂಚದ ಹಣಕ್ಕೆ ಭೇಡಿಕೆ ಇಟ್ಟಿರುತ್ತಾರೆ ಎಂದಿದೆ.

ಸದರಿ ಸಂಭಾಷಣೆಯನ್ನು ಪಿದ್ಯಾದಿ ಮಹ್ಮದ್‌ ಆಸೀಪ್‌ ಉಲ್ಲಾ ರವರು ವಾಯ್ಸ್ ರೇಕಾರ್ಡ್ ಮಾಡಿಕೊಂಡಿರುತ್ತಾರೆ. ಪಿರಾದುದಾರರಿಗೆ ಅವರ ಹೆಸರಿಗೆ ಮನೆ ಖಾತೆ ಮಾಡಿಕೊಡಲು ಶಶಿಧರ್ ಅವರಿಗೆ ಲಂಚದ ಹಣ ನೀಡಲು ಇಷ್ಟವಿಲ್ಲದೆ ಇದ್ದುದ್ದರಿಂದ ಸದರಿ ಸಮುದಾಯ ಸಂಘಟನಾಧಿಕಾರಿ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ದಿವಸ ದಿನಾಂಕ:-29-08-2025 ರಂದು ನೀಡಿದ ದೂರಿನ ಮೇರೆಗೆ ಕಲಂ:7(3) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988. (ತಿದ್ದುಪಡಿ ಕಾಯಿದೆ-2018) ರೀತ್ಯಾ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ದಿನಾಂಕ:-29-08-2025 ರಂದು ಸಂಜೆ 04.15 ಗಂಟೆಗೆ ಶಿವಮೊಗ್ಗ ನಗರದ ನೆಹರೂ ರಸ್ತೆಯ ನೇತಾಜಿ ಸುಭಾಷಚಂದ್ರ ಭೋಸ್ ವಾಣಿಜ್ಯ ಸಂಕೀರ್ಣದ ಮೂರನೆ ಮಹಡಿಯಲ್ಲಿರುವ ಆಶ್ರಯ ಕಛೇರಿಯಲ್ಲಿ ಆಪಾದಿತ ಅಧಿಕಾರಿ ಪಿದ್ಯಾದಿಯಿಂದ 10,000/-ರೂ ಲಂಚದ ಹಣವನ್ನು ಪಡೆದುಕೊಂಡ ಸಮಯದಲ್ಲಿ ಟ್ರ್ಯಾಪ್ ಮಾಡಲಾಗಿರುತ್ತದೆ. ಲಂಚದ ಹಣವನ್ನು ಜಪ್ತಿ ಪಡಿಸಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಾದಿತ ಅಧಿಕಾರಿಯಾದ ಶಶಿಧರ್ ಎ.ಪಿ ಬಿನ್ ಲೇಟ್ ಪರಮೇಶ್ವರಪ್ಪ.ಎನ್, 57ವರ್ಷ, ಸಮುದಾಯ ಸಂಘಟನಾ ಅಧಿಕಾರಿ, ಆಶ್ರಯ ಕಛೇರಿ, ಮಹಾನಗರ ಪಾಲಿಕೆ, ಶಿವಮೊಗ್ಗ ರವರನ್ನು ತನಿಖೆ ಸಂಬಂಧ ವಶಕ್ಕೆ ಪಡೆದು ಪ್ರಕರಣದ ತನಿಖೆಯನ್ನು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ರಾದ ರುದ್ರೇಶ್.ಕೆ.ಪಿ, ಅವರು ಕೈಗೊಂಡಿರುತ್ತಾರೆ.

ಸದರಿ ಟ್ರ್ಯಾಪ್ ಕಾರ್ಯಾಚರಣೆಯನ್ನು ಮಂಜುನಾಥ ಚೌಧರಿ.ಎಂ. ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ರವರ ಮಾರ್ಗದರ್ಶನದಲ್ಲಿ ಬಿ.ಪಿ. ಚಂದ್ರಶೇಖರ್, ಪೊಲೀಸ್ ಉಪಾಧೀಕ್ಷಕರು, ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್‌ಪೆಕ್ಟರಾದ ರುದ್ರೇಶ್.ಕೆ.ಪಿ.ರವರು ಟ್ರ್ಯಾಪ್ ಮಾಡಿದ್ದು, ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ಗಳಾದ ಗುರುರಾಜ ಎನ್ ಮೈಲಾರ್, ವೀರಬಸಪ್ಪ ಎಲ್ ಕುಸಲಾಪುರ, ಸಿಬ್ಬಂದಿಯವರಾದ ಯೋಗೇಶ್.ಜಿ.ಸಿ, ಸಿ.ಹೆಚ್.ಸಿ, ಮಂಜುನಾಥ.ಎಂ. ಸಿ.ಹೆಚ್.ಸಿ, ಟೀಕಪ್ಪ ಸಿಹೆಚ್‌ ಸುರೇಂದ್ರ ಹೆಚ್.ಜಿ. ಸಿಹೆಚ್‌ಸಿ, ಪ್ರಶಾಂತ್ ಕುಮಾರ್ ಹೆಚ್. ಸಿ.ಪಿ.ಸಿ, ದೇವರಾಜ್.ವಿ. ಸಿಪಿಸಿ, ಪ್ರಕಾಶ್ ಬಾರಿಮರದ, ಸಿಪಿಸಿ, ಅರುಣ್ ಕುಮಾರ್.ಯು.ಬಿ.ಸಿ.ಪಿ.ಸಿ, ಆದರ್ಶ್ ಸಿ.ಪಿ.ಸಿ, ಚಂದ್ರಿಬಾಯಿ.ಎಸ್. ಮ.ಪಿ,ಸಿ ಪ್ರದೀಪ. ಎ.ಹೆಚ್.ಸಿ, ಗಂಗಾಧರ ಎಪಿಸಿ, ಆನಂದ, ಎ.ಪಿ.ಸಿ, ಗೋಪಿ ಎ.ಪಿ.ಸಿ ರವರು ಹಾಜರಿರುತ್ತಾರೆ.

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಬಗ್ಗೆ ಅಸಭ್ಯ ಕಾಮೆಂಟ್: 5 ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ FIR

ಯೆಮೆನ್ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್ ಬೆಂಬಲಿತ ಹೌತಿ ಪ್ರಧಾನಿ ಸಾವು | Israeli Airstrikes

Share. Facebook Twitter LinkedIn WhatsApp Email

Related Posts

ಗರ್ಭಿಣಿ ಪತ್ನಿಗೆ ಬೆಂಕಿ ಹಚ್ಚಿದ್ದ ಪತಿಗೆ ಪತ್ನಿಯಿಂದಲೇ ಕ್ಷಮಾದಾನ; ಹೈಕೋರ್ಟ್‌ನಿಂದ ಶಿಕ್ಷೆ ಕಡಿತ!

2 Mins Read

ಮದ್ದೂರಿನ ಶ್ರೀ ಉಗ್ರ ನರಸಿಂಹ ಸ್ವಾಮಿ ರಥೋತ್ಸವ: ಗೋವಿಂದನ ನಾಮಸ್ಮರಣೆಯಲ್ಲಿ ಮಿಂದೆದ್ದ ಭಕ್ತ ಸಾಗರ

1 Min Read

ಸ್ವಿಗ್ಗಿ ರೆಸ್ಟೋರೆಂಟ್ ಅವಾರ್ಡ್ಸ್ 2026: ಬೆಂಗಳೂರಿಗರ ‘ಹಾಟ್ ಫೇವರಿಟ್’ ಹೋಟೆಲ್‌ಗಳ ಪಟ್ಟಿ ಬಿಡುಗಡೆ! ಮೇಘನಾ ಫುಡ್ಸ್, ಟ್ರಫಲ್ಸ್‌ಗೆ ಅಗ್ರಸ್ಥಾನ

1 Min Read
Recent News

​ಮುಂಬೈ ಕುಟುಂಬದ ಸಾವಿನ ಪ್ರಕರಣಕ್ಕೆ ಆಘಾತಕಾರಿ ತಿರುವು: ಇದು ಕಲ್ಲಂಗಡಿ ಹಣ್ಣಿನ ಅಡ್ಡಪರಿಣಾಮವಲ್ಲ, ‘ಇಲಿ ಪಾಷಾಣ’ದ ವಿಷ!

ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ಡಿಎಂಕೆ! ವಿಜಯ್ ಪಕ್ಷಕ್ಕೆ ಬೆಂಬಲ ನೀಡಿದ್ದಕ್ಕೆ ಅಧಿಕೃತವಾಗಿ ‘ಖಂಡನಾ ನಿರ್ಣಯ’ ಅಂಗೀಕಾರ

ಕ್ರಿಕೆಟಿಗ ಸೂರ್ಯಕುಮಾರ್ ಯಾದವ್‌ – ದೆವಿಶಾ ಶೆಟ್ಟಿ ದಂಪತಿಗೆ ಹೆಣ್ಣು ಮಗು ಜನನ | Suryakumar Yadav

ದೆಹಲಿ ವಿಮಾನದಲ್ಲಿ ಮಹುವಾ ಮೊಯಿತ್ರಾ ದೌರ್ಜನ್ಯ: ‘ಚೋರ್ ಚೋರ್… ತೃಣಮೂಲ ಚೋರ್’ ಎಂದು ಕಿರುಚಿದ ವ್ಯಕ್ತಿಗಳ ಗುಂಪು | Watch video

State News
KARNATAKA

ಗರ್ಭಿಣಿ ಪತ್ನಿಗೆ ಬೆಂಕಿ ಹಚ್ಚಿದ್ದ ಪತಿಗೆ ಪತ್ನಿಯಿಂದಲೇ ಕ್ಷಮಾದಾನ; ಹೈಕೋರ್ಟ್‌ನಿಂದ ಶಿಕ್ಷೆ ಕಡಿತ!

By kannadanewsnow09 KARNATAKA 2 Mins Read

ನವದೆಹಲಿ: ವರದಕ್ಷಿಣೆಗಾಗಿ ಗರ್ಭಿಣಿ ಪತ್ನಿಯ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದ ಪತಿಗೆ ದೆಹಲಿ ಹೈಕೋರ್ಟ್ ವಿಶಿಷ್ಟ ಕಾರಣಕ್ಕಾಗಿ ಶಿಕ್ಷೆಯ…

ಮದ್ದೂರಿನ ಶ್ರೀ ಉಗ್ರ ನರಸಿಂಹ ಸ್ವಾಮಿ ರಥೋತ್ಸವ: ಗೋವಿಂದನ ನಾಮಸ್ಮರಣೆಯಲ್ಲಿ ಮಿಂದೆದ್ದ ಭಕ್ತ ಸಾಗರ

ಸ್ವಿಗ್ಗಿ ರೆಸ್ಟೋರೆಂಟ್ ಅವಾರ್ಡ್ಸ್ 2026: ಬೆಂಗಳೂರಿಗರ ‘ಹಾಟ್ ಫೇವರಿಟ್’ ಹೋಟೆಲ್‌ಗಳ ಪಟ್ಟಿ ಬಿಡುಗಡೆ! ಮೇಘನಾ ಫುಡ್ಸ್, ಟ್ರಫಲ್ಸ್‌ಗೆ ಅಗ್ರಸ್ಥಾನ

ಕಿತ್ತೂರಿನಲ್ಲಿ ₹5.27 ಕೋಟಿ ವೆಚ್ಚದ ನೂತನ ಬಸ್ ಘಟಕ ಉದ್ಘಾಟನೆ: ಸಾರಿಗೆ ವ್ಯವಸ್ಥೆಗೆ ಸಚಿವ ರಾಮಲಿಂಗಾರೆಡ್ಡಿ ಹೊಸ ಕಾಯಕಲ್ಪ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.