ನವದೆಹಲಿ: ದ್ವಾರಕಾ ಶಾರದಾ ಪೀಠದ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಅವರು ತಮ್ಮ 99ನೇ ವಯಸ್ಸಿನಲ್ಲಿ ನಿಧನರಾದರು. ಅವರು ಮಧ್ಯಪ್ರದೇಶದ ನರಸಿಂಗಪುರದಲ್ಲಿ ವಿಧವಶರಾಗಿದ್ದಾರೆ ಎನ್ನಲಾಗಿದೆ. ಸ್ಥಳೀಯ ಮಾಧ್ಯಮಗಳ ಮಾಹಿತಿಯ ಪ್ರಕಾರ, ಅವರು ಮಧ್ಯಾಹ್ನ 3 ಗಂಟೆ ಸುಮಾರಿಗೆ ತಮ್ಮ ಆಶ್ರಮದಲ್ಲಿ ಕೊನೆಯುಸಿರೆಳೆದರು ಅಂತ ತಿಳಿದು ಬಂದಿದೆ. ಕೆಲವು ದಿನಗಳ ಹಿಂದೆ, ಅವರು ತಮ್ಮ 99 ನೇ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಕೊಂಡರು. ಸೆಪ್ಟೆಂಬರ್ 9,1924 ರಂದು ಜನಿಸಿದರು.
ಶಂಕರಾಚಾರ್ಯ ಸ್ವರೂಪಾನಂದರು ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ದ ಹೋರಾಡಿದ್ದರು. ಅವರ ಬಾಲ್ಯದ ಹೆಸರು ಪೋತಿರಾಮ್ ಆಗಿದೆ.
ಅವರು ಕಾಶಿಯ ಕರ್ಪಾತ್ರಿ ಮಹಾರಾಜರಿಂದ ಧರ್ಮದ ಶಿಕ್ಷಣವನ್ನು ಪಡೆದುಕೊಂಡಿದ್ದರು. ೧೯೪೨ ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯ ಸಮಯದಲ್ಲಿ ಅವರು ಚಳವಳಿಗೆ ಧುಮುಕಿದ. ಅವರು ಎರಡು ಬಾರಿ ಜೈಲುವಾಸವನ್ನೂ ಅನುಭವಿಸಿದ್ದರು. 1989 ರಲ್ಲಿ, ಅವರು ಶಂಕರಾಚಾರ್ಯ ಎಂಬ ಬಿರುದನ್ನು ಪಡೆದರು.