ನವದೆಹಲಿ : ಬಿಜೆಪಿ ಹಲವು ಹಿರಿಯ ನಾಯಕರಿಗೆ ಟಿಕೆಟ್ ನೀಡದಕ್ಕೆ ಈಗಾಗಲೇ ಕೆಎಸ್ ಈಶ್ವರಪ್ಪ ಸೇರಿದಂತೆ ಹಲವರು ಅಸಮಾಧಾನಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಂತಹ ಅತೃಪ್ತ ನಾಯಕರನ್ನು ಸೆಳೆಯುತ್ತಿರುವ ವಿಷಯವಾಗಿ ನವದೆಹಲಿಯಲ್ಲಿ ಬಿಎಸ್ ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಈ ತರಹ ಮಾಡುತ್ತಿರುವುದು ಕಾಂಗ್ರೆಸ್ ಗೆ ನಾಚಿಕೆಗೆಡು ಆಗಬೇಕು ಎಂದು ಕಿಡಿ ಕರೆದಿದ್ದಾರೆ.
ಮಾ.22 ರಂದು ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆ : ಮಾಜಿ ಸಿಎಂ ಯಡಿಯೂರಪ್ಪ
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಾಂಗ್ರೆಸ್ ನವರಿಗೆ ಸರಿಯಾದ ಅಭ್ಯರ್ಥಿಗಳು ಎಲ್ಲಿಯೂ ಸಿಗುತ್ತಿಲ್ಲ.ಹಾಗಾಗಿ ಬಿಜೆಪಿಯಲ್ಲಿ ಯಾರು ಅತೃಪ್ತರಿದ್ದಾರೆ ಅವರನ್ನು ಸೆಳೆಯಲು ವಿಶ್ವಪ್ರಯತ್ನ ಮಾಡುತ್ತಿರುವುದು ಒಂದು ರೀತಿಯ ನಾಚಿಕೆಗೇಡಿನ ಸಂಗತಿಯಾಗಿದೆ.ಅದು ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಅಭ್ಯರ್ಥಿಗಳು ಇಲ್ಲ ಎಂದಾದರೆ ಚುನಾವಣೆ ಫಲಿತಾಂಶ ಹೇಗಿರುತ್ತೆ ಎಂದು ಯೋಚಿಸಬೇಕಾಗಿದೆ ಎಂದರು.
ತೂಕ ಇಳಿಸುವ ಔಷಧದ ಬಗ್ಗೆ ಮೇದಾಂತ ಅಧ್ಯಕ್ಷರ ‘ಡೀಪ್ ಫೇಕ್’ ವಿಡಿಯೋ ವೈರಲ್, ಪ್ರಕರಣ ದಾಖಲು
ಅಮಿತ್ ಷಾ, ಜೆಪಿ ನಡ್ಡ ಜೊತೆ ಐದು ಕ್ಷೇತ್ರಗಳ ಬಗ್ಗೆ ಚರ್ಚೆಯಾಗಿದೆ.ಮಾರ್ಚ್ 22 ರಂದು ಅಧಿಕೃತವಾಗಿ ಅಭ್ಯರ್ಥಿಗಳ ಘೋಷಣೆ ಆಗುತ್ತೆ ಎಂದು ಯಡಿಯೂರಪ್ಪ ತಿಳಿಸಿದರು. ಜೆಡಿಎಸ್ ಬಿಜೆಪಿ ಒಟ್ಟಾಗಿ 28 ಕ್ಷೇತ್ರವನ್ನು ಗೆಲ್ಲುತ್ತೇವೆ ರಾಜ್ಯದ ಉದ್ದಗಲಕ್ಕೂ ನಾವು ಪ್ರವಾಸ ಮಾಡುತ್ತೇವೆ ಎಂದು ಅವರು ತಿಳಿಸಿದರು.