ಮಣಿಪುರ : ಎರಡು ದಿನಗಳ ಮಣಿಪುರ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸುಮಾರು ರೂ. 1311 ಕೋಟಿ ವೆಚ್ಚದ 21 ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು ಎಂದು ಗೃಹ ಸಚಿವಾಲಯ ತಿಳಿಸಿದೆ.
ಇದೇ ವೇಳೆ ಸಚಿವರು , ಸುಮಾರು 165 ಅಡಿ ಎತ್ತರದ ತ್ರಿವರ್ಣ ಧ್ವಜವನ್ನು ಮೊಯಿರಾಂಗ್ನಲ್ಲಿರುವ ಐತಿಹಾಸಿಕ ‘ಆಜಾದ್ ಹಿಂದ್ ಫೌಜ್’ ಪ್ರಧಾನ ಕಛೇರಿಯಲ್ಲಿ ಅನಾವರಣಗೊಳಿಸಿದರು. ಇದು ಇಡೀ ಈಶಾನ್ಯ ಪ್ರದೇಶದಲ್ಲಿ ಅತಿ ಎತ್ತರದ ರಾಷ್ಟ್ರಧ್ವಜವಾಗಿದೆ.
ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರ ನೇತೃತ್ವದಲ್ಲಿ ಮಣಿಪುರವು ಅಭಿವೃದ್ಧಿ, ಶಾಂತಿ ಮತ್ತು ಸಮೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ. ಭಯೋತ್ಪಾದನೆ, ಬಂದ್ ಮತ್ತು ದಿಗ್ಬಂಧನದಿಂದ ಸಂಪೂರ್ಣವಾಗಿ ಮುಕ್ತವಾಗಿದೆ ಎಂದು ಎಂದೇಳಿದ್ದಾರೆ.
ಇದೇ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವರು ಅತ್ಯಂತ ಜ್ಞಾನ ಮತ್ತು ಪ್ರತಿಭಾವಂತ ರಾಜ ಶ್ರೀ ಭಾಗ್ಯಚಂದ್ರ, ಮಹಾರಾಜ ಕುಲಚಂದ್ರ ಮತ್ತು ಪುಖೋತಿಂಥಂಗ್ ಅವರಿಗೆ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
BREAKING NEWS: ಸ್ಯಾಂಟ್ರೋ ರವಿ ಜತೆ ಸಚಿವ ಎಸ್.ಟಿ ಸೋಮಶೇಖರ್ ಇರೋ ವಿಡಿಯೋ ಬಿಡುಗಡೆ ಮಾಡಿದ HDK
ಮೀಸಲಾತಿ ಪಾಲನೆ: ‘ನ್ಯಾಷನಲ್ ಲಾ ಸ್ಕೂಲ್’ಗೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಪತ್ರ
BIG BREAKING NEWS: 2022-23ನೇ ಸಾಲಿನ ಬಿ.ಇಡಿ ಕೋರ್ಸ್ ಗೆ ಆಯ್ಕೆ ಪಟ್ಟಿ ಪ್ರಕಟ | B.Ed Course Admission