ಬೆಂಗಳೂರು / ಬೆಳಗಾವಿ ಸುವರ್ಣಸೌಧ : ಕಡಿಮೆ ಆದಾಯದ ಜನಸಂಖ್ಯೆಅಧಿಕ ಪ್ರಮಾಣದಲ್ಲಿ ವಾಸಿಸುವ ,ವಲಸೆ ಮತ್ತು ಭೂರಹಿತಕಾರ್ಮಿಕರನ್ನು ಒಳಗೊಂಡಿರುವ ಪ್ರದೇಶದಲ್ಲಿ ಹೊಸದಾಗಿ 4,244 ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸಲು ಆಡಳಿತಾತ್ಮಕ ಕೇಂದ್ರಗಳನ್ನು ಪ್ರಾರಂಭಿಸಲು ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆಎಂದು ಗಣಿ,ಭೂವಿಜ್ಞಾನ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪಆಚಾರ್ ಹೇಳಿದರು.
ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿಂದು ಜಮಖಂಡಿ ಶಾಸಕ ಆನಂದ ಸಿದ್ದು ನ್ಯಾಮಗೌಡಅವರ ಪ್ರಶ್ನೆಗೆಉತ್ತರಿಸುತ್ತ ಸಚಿವರು ಈ ಮಾಹಿತಿ ನೀಡಿದರು.
ರಾಜ್ಯದಗ್ರಾಮಾಂತರ ಪ್ರದೇಶಗಳಲ್ಲಿ 1655 ,ನಗರ ಪ್ರದೇಶದಲ್ಲಿ 2589 ಸೇರಿಒಟ್ಟು 4244 ಅಮಗನವಾಡಿ ಕೇಂದ್ರಗಳನ್ನು ಪ್ರಾರಂಭಿಸಲು ಕಳೆದ ಸೆಪ್ಟಂಬರ್ 1 ರಂದು ಆಡಳಿತಾತ್ಮಕ ಮಂಜೂರಾತಿ ನೀಡಿ ಆದೇಶಿಸಲಾಗಿದೆ.ಜಮಖಂಡಿ ಮತಕ್ಷೇತ್ರದಲ್ಲಿ ಹೊಸ 22 ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸಲುಕೋರಿ ಪ್ರಸ್ತಾವನೆಗಳು ಬಂದಿವೆ. ಈ ಕುರಿತುಕ್ರಮವಹಿಸಲಾಗುತ್ತಿದೆ.
ಜಮಖಂಡಿ ಕ್ಷೇತ್ರದ ಕವಟಗಿ ಗ್ರಾಮದಲ್ಲಿಅಂಗನವಾಡಿ ಕೇಂದ್ರಗಳು ಅಲ್ಲಿನ ಚಾವಡಿ(ಪಂಚಾಯಿತಿ) ಕಟ್ಟಡಗಳಲ್ಲಿ ನಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.ಈಗ್ರಾಮವು ಕೃಷ್ಣಾ ಮೇಲ್ದಂಡೆಯೋಜನೆಯ ಮುಳುಗಡೆ ಪ್ರದೇಶ ವ್ಯಾಪ್ತಿಯಲ್ಲಿ ಬರುವುದರಿಂದ ಹೊಸ ಕಾಮಗಾರಿಗಲನ್ನುಇಲ್ಲಿ ಕೈಗೊಳ್ಳಲು ಸಾಧ್ಯವಾಗುವುದಿಲ್ಲ.ಎರಡನೇ ಹಂತದ ಪುನರ್ವಸತಿ ಕಲ್ಪಿಸಿದ ನಂತರಅನುದಾನದ ಲಭ್ಯತೆ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಸದನದಲ್ಲಿ ಮಾಹಿತಿ ನೀಡಿದರು.
ರಾಜ್ಯದಲ್ಲಿ ಹೆಚ್ಚುವರಿಅಂಗನವಾಡಿ ಕೇಂದ್ರಗಳನ್ನು ತೆರೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆಯೇಎಂದು ಮೈಸೂರಿನ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಹಾಲಪ್ಪಆಚಾರ್ಅವರು,ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸಲುಕೋರಿರಾಜ್ಯದ ವಿವಿಧ ಜಿಲ್ಲೆಗಳಿಂದ 3,538 ಬೇಡಿಕೆಗಳನ್ನು ಸ್ವೀಕರಿಸಲಾಗಿದೆ.ಹೊಸ ಅಂಗನವಾಡಿ ಕೇಂದ್ರಗಳನ್ನು ತೆರೆಯಲು ಜಿಲ್ಲೆಗಳ ಉಪನಿರ್ದೇಶಕರುಗಳಿಗೆ ಸರ್ಕಾರಿ ಕಟ್ಟಡಗಳನ್ನು ಗುರುತಿಸಲು ತಿಳಿಸಲಾಗಿದೆ.ಸಮಗ್ರ ಶಿಶು ಅಭಿವೃದ್ಧಿಯೋಜನೆಯುಕೇಂದ್ರ ಪುರಸ್ಕøತಯೋಜನೆಯಾಗಿದ್ದುಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆಆಹಾರ ವಿತರಣೆ ಮಾಡಲಾಗುತ್ತಿದೆಎಂದು ವಿವರಿಸಿದರು.