ಆಂಧ್ರಪ್ರದೇಶ: ಇತ್ತೀಚೆಗೆ ಸೌದಿ ಅರೇಬಿಯಾದಿಂದ ಹಿಂದಿರುಗಿದ ಮಗುವಿನಲ್ಲಿ ಮಂಕಿಪಾಕ್ಸ್ ( Monkeypox ) ಶಂಕಿತ ಪ್ರಕರಣ ಆಂಧ್ರಪ್ರದೇಶದ ವಿಜಯವಾಡದಲ್ಲಿ ವರದಿಯಾಗಿದೆ. ಮಗುವಿನ ಮಾದರಿಗಳನ್ನು ಪರೀಕ್ಷೆಗಾಗಿ ಪುಣೆಗೆ ಕಳುಹಿಸಲಾಗಿದೆ ಎಂದು ಜಿಜಿಎಚ್ ಆಸ್ಪತ್ರೆಯ ಅಧೀಕ್ಷಕರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
“ಮಗುವಿನ ಕುಟುಂಬವನ್ನು ಹೋಮ್ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಕುಟುಂಬವು ನಿನ್ನೆ ಸೌದಿ ಅರೇಬಿಯಾ ಪ್ರವಾಸದಿಂದ ಭಾರತಕ್ಕೆ ಮರಳಿದೆ” ಎಂದು ಸೂಪರಿಂಟೆಂಡೆಂಟ್ ಎನ್ ರಾವ್ ಹೇಳಿದ್ದಾರೆ.
ರಾಜ್ಯದ 1,038 ಕೆರೆಗಳ ಹೂಳೆತ್ತಿ ಅಭಿವೃದ್ಧಿ ಪಡಿಸಲು ವಿಶೇಷ ಯೋಜನೆ – ಸಚಿವ ಸಿ.ಸಿ ಪಾಟೀಲ್
ಭಾರತವು ಗುರುವಾರ ಮಂಕಿಪಾಕ್ಸ್ನ ಮೊದಲ ಪ್ರಕರಣವನ್ನು ವರದಿ ಮಾಡಿದೆ, ಯುಎಇಯಿಂದ ಹಿಂದಿರುಗಿದ ಕೇರಳಿಗನಿಗೆ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.