ಕೇರಳ: ರಾಜ್ಯದಲ್ಲಿ ಈಗಾಗಲೇ ಮೊದಲ ಮಂಕಿಪಾಕ್ಸ್ ಪ್ರಕರಣ ವರದಿಯಾಗಿತ್ತು. ಈ ಬೆನ್ನಲ್ಲೇ ಕೇರಳದಲ್ಲಿ ಮಂಕಿ ಪಾಕ್ಸ್ ನ ಎರಡನೇ ಪಾಸಿಟಿವ್ ಪ್ರಕರಣ ಕಣ್ಣೂರು ಜಿಲ್ಲೆಯಲ್ಲಿ ದೃಢಪಟ್ಟಿದೆ.
ಈ ಬಗ್ಗೆ ಕೇರಳ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ರಾಜ್ಯದ ಕಣ್ಣೂರಿನಲ್ಲಿ 2ನೇ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿರೋದಾಗಿ ದೃಢಪಡಿಸಿದೆ. ಹೀಗಾಗಿ ದೇಶದಲ್ಲಿ ಮಂಕಿಪಾಕ್ಸ್ ನ 2ನೇ ಪ್ರಕರಣ ಇದಾಗಿದ್ದು, ಜನರಲ್ಲಿ ಆತಂಕವನ್ನು ಹುಟ್ಟಿಸಿದೆ.
"The second positive case of Monkey Pox in Kerala has been confirmed in Kannur District," confirms State Health Ministry
— ANI (@ANI) July 18, 2022