ಚೆನ್ನೈ: ಪರಿಶಿಷ್ಟ ಜಾತಿಯ ಆರು ವಿದ್ಯಾರ್ಥಿಗಳಿಂದ ಶಾಲಾ ಶೌಚಾಲಯವನ್ನು ಸ್ವಚ್ಛಗೊಳಿಸಿದ ಆರೋಪದ ಮೇಲೆ ತಮಿಳುನಾಡಿನ ಈರೋಡ್ ಜಿಲ್ಲೆಯ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿಗಾಗಿ ತಮಿಳುನಾಡು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಐದನೇ ತರಗತಿಯ ವಿದ್ಯಾರ್ಥಿನಿಯ ತಾಯಿ ಜಯಂತಿ ಈ ಬಗ್ಗೆ ದೂರು ನೀಡಿದ್ದಾರೆ. ದೂರಿನ ಪ್ರಕಾರ, ʻಎಚ್ಎಂ ಎಂಎಸ್ ಗೀತಾ ರಾಣಿ ಎಸ್ಸಿ ಮಕ್ಕಳ ಕೈಯಲ್ಲಿ ಶೌಚಾಲಯವನ್ನು ಸ್ವಚ್ಛಗೊಳಿಸಿದ್ದಾರೆ. ನನ್ನ ಮಗನಿಗೆ ಡೆಂಗ್ಯೂ ತಗುಲಿ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ನನ್ನ ಮಗನಿಗೆ ಡೆಂಗ್ಯೂ ಹೇಗೆ ಬಂತು ಎಂದು ನಾನು ಅವನನ್ನು ಕೇಳಿದಾಗ, ನನ್ನ ಮಗ ಪ್ರತಿದಿನ ಬ್ಲೀಚಿಂಗ್ ಪೌಡರ್ ಬಳಸಿ ಶೌಚಾಲಯ ಸ್ವಚ್ಛಗೊಳಿಸಿದ್ದಾನೆ. ಈ ವೇಳೆ ಸೊಳ್ಳೆಗಳು ಕಚ್ಚಿವೆ. ಇದ್ರಿಂದ, ಅವರ=ನು ಅನಾರೋಗ್ಯಕ್ಕೊಳಗಾಗಿದ್ದಾನೆ” ಎಂದು ದೂರಿದ್ದಾರೆ.
ಕಳೆದ ವಾರ ಮಕ್ಕಳ ಪೋಷಕರು ಶಾಲೆಗೆ ಬಂದಾಗ, ಮಕ್ಕಳು ಪೊರಕೆ ಮತ್ತು ಮಗ್ಗಳೊಂದಿಗೆ ಶೌಚಾಲಯದಿಂದ ಹೊರಬರುವುದನ್ನು ನೋಡಿದ್ದಾರೆ. ಈ ಬ್ಗಗೆ ವಿಚಾರಿಸಿದಾಗ, ಎಚ್ಎಂ ಅವರು ಶೌಚಾಲಯವನ್ನು ಸ್ವಚ್ಛಗೊಳಿಸಲು ಹೇಳಿದ್ದಾರೆ ಎಂದು ಮಕ್ಕಳು ಹೇಳಿದ್ದಾರೆ.
ಈ ತರಗತಿಯಲ್ಲಿ 40 ಮಕ್ಕಳು ಓದುತ್ತಾರೆ. ಅವರಲ್ಲಿ ಹೆಚ್ಚಿನವರು ನಮ್ಮ ಪರಿಶಿಷ್ಟ ಜಾತಿಯ ಮಕ್ಕಳು ಇದ್ದಾರೆ. ಎಚ್ಎಂ ನಮ್ಮ ಮಕ್ಕಳಿಗೆ ಮಾತ್ರ ಶೌಚಾಲಯ ಸ್ವಚ್ಛಗೊಳಿಸಲು ಹೇಳಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಪೊಲೀಸರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಬಾಲನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಪಾಲಕರೈಯಲ್ಲಿರುವ ಪಂಚಾಯತ್ ಯೂನಿಯನ್ ಶಾಲೆಯ ಎಚ್ಎಂ ತಲೆಮರೆಸಿಕೊಂಡಿದ್ದಾಳೆ. ಆಕೆಯನ್ನು ಬಂಧಿಸಲು ನಾವು ವಿಶೇಷ ತಂಡಗಳನ್ನು ರಚಿಸಿದ್ದೇವೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
BREAKING NEWS: ಅಮೆರಿಕನ್ ರಾಪರ್ ʻಕಾನ್ಯೆ ವೆಸ್ಟ್ʼ ಟ್ವಿಟರ್ ಖಾತೆ ಅಮಾನತುಗೊಳಿದ ಎಲಾನ್ ಮಸ್ಕ್… ಕಾರಣ?
BREAKING NEWS : ಕನ್ನಡ ಧ್ವಜ ಹಾರಿಸಿದ ವಿದ್ಯಾರ್ಥಿಗೆ ಹಲ್ಲೆ ಪ್ರಕರಣ ತನಿಖೆಗೆ ಸೂಚನೆ : ಸಿಎಂ ಬಸವರಾಜ ಬೊಮ್ಮಾಯಿ
BREAKING NEWS: ಅಮೆರಿಕನ್ ರಾಪರ್ ʻಕಾನ್ಯೆ ವೆಸ್ಟ್ʼ ಟ್ವಿಟರ್ ಖಾತೆ ಅಮಾನತುಗೊಳಿದ ಎಲಾನ್ ಮಸ್ಕ್… ಕಾರಣ?
BIGG NEWS : ಕೇರಳದಲ್ಲಿ ಕಮ್ಯುನಿಸ್ಟ್ ಪಕ್ಷಗಳು ಇತಿಹಾಸದ ಕಸದ ಬುಟ್ಟಿ ಸೇರುವುದು ನಿಶ್ಚಿತ : ತೇಜಸ್ವಿ ಸೂರ್ಯ